ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದ ಆರೋಪಿ ರಾಕೇಶ್ ಬಂಧನ….

ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದ ಆರೋಪಿ ನೆಲಮಂಗಲ ವಾಸಿ ರಾಕೇಶ್ ಸಿಸಿಬಿ ಪೊಲೀಸ್ರಿಂದ ಬಂಧಿಸಲಾಗಿದೆ.

ನೆಲಮಂಗಲದ ಹಿಮಚೇನಹಳ್ಳಿ ನಿವಾಸಿಯಾಗಿರೋ ರಾಕೇಶ್ , ಫೇಸ್ ಬುಕ್ ನಲ್ಲಿ ಲಿಂಕ್ ಶೇರ್ ಮಾಡಿದ್ದ. ಡಿಸಿಪಿ ರವಿ ಕುಮಾರ್ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ರು ರಾಕೇಶ್ ಮೊಬೈಲ್ ಜಪ್ತಿ ಮಾಡಿದ್ದಾರೆ.

ಕಾಫಿ ರೈಟ್ಸ್ ಆ್ಯಕ್ಟ್ ೧೯೫೭ ಹಾಗೂ ಭಾರತೀಯ ಫೈರಸಿ ಕಾಯ್ದೆ(೨೦೧೨) ಪ್ರಕಾರ ಆರೋಪಿ ಮಾಡಿರುವುದು ಶಿಕ್ಷಾರ್ಹ ಅಪರಾಧ. ಈ ಅಪರಾದದ ಮೇರೆಗೆ ರಾಕೇಶ್ ನನ್ನು ಬಂಧಿಸಲಾಗಿದೆ. ತುಮಕೂರಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ರಾಕೇಶ್ ಅರ್ಧಕ್ಕೆ ಬಿಟ್ಟಿದ್ದಾ ಎಂದು ತಿಳಿದು ಬಂದಿದೆ. ಈತನ ತಂದೆ ಬೆಂಗಳೂರಿನ ಹೋಟೆಲ್ ಒಂದ್ರಲ್ಲಿ ಅಡುಗೆ ಕೆಲಸ ಮಾಡ್ತಿದ್ದಾರೆ.

ಕಮಿಷನರ್ ಭಾಸ್ಕರ್ ರಾವ್ ಸುದೀಪ್ ರನ್ನ ಭೇಟಿ ಯಾಗಿ ಪ್ರಕರಣದ ಬಗ್ಗೆ ಮಾಹಿತಿ ಡೆದಿದ್ದರು. ನಟ ಸುದೀ ಭಾಸ್ಕರ್ ರಾವ್ ಭೇಟಿಯಾದ ಸಂತಸವನ್ನ ಟ್ಬೀಟ್ ನಲ್ಲಿ ಹಂಚಿಕೊಂಕೊಂಡಿದ್ದರು. ಇಬ್ಬರು ಸ್ಟಾರ್ ನಟರ ವಾರ್ ಗೆ ಕಾರಣವಾಗಿತ್ತು ಫೈಲ್ವಾನ್ ಪೈರಸಿ. D Boss ದರ್ಶನ್ ಅಭಿಮಾನಿಯಾಗಿರೋ ಆರೋಪಿ ರಾಕೇಶ್ ನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ರಾಕೇಶ್ ಎಂಬುದನ್ನ ರಾಕೇಶ್ ವಿರಾಟ್ ಎಂದು ಹೆಸರು ಬದಲಿಸಿಕೊಂಡಿದ್ದ. ಸಿನಿಮಾ ರಿಲೀಸ್ ಆದ ದಿನವೇ ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಆ ಲಿಂಕ್ ನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ. ವಿರಾಟ್ ಸಿನಿಮಾ ನೋಡಿ ಹೆಸರು ಬದಲಿಸಿಕೊಂಡಿದ್ದನು. ಮೊನ್ನೆಯಷ್ಟೇ ಬರ್ತಡೇ ಆಚರಿಸಿಕೊಂಡಿದ್ದ ಆರೋಪಿ.

ವಿರಾಟ್ ಕೊಯ್ಲಿ ಮತ್ತು ಡಿ ಬಾಸ್ ಅಭಿಮಾನಿಯಾಗಿರೋ ಆರೋಪಿ, ಫೇಸ್ ಬುಕ್ ನಲ್ಲಿ ದರ್ಶನ್ ಕಾರ್ಯಕ್ರಮದ ಎಲ್ಲಾ ವಿಡಿಯೋ ಶೇರ್ ಮಾಡಿರೋ ರಾಕೇಶ್ ಸದ್ಯ ಪೊಲೀಸರ ಪಾಲಾಗಿದ್ದಾನೆ. ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights