ನಿಧಾನವಾಗಿ ಕಾವೇರ್ತಿರಿದೆ ಕೆ.ಆರ್.ಪೇಟೆಯ ಚುನಾವಣಾ ಅಖಾಡ : ಮೂರು ಪಕ್ಷಗಳಿಂದ ಗೆಲ್ಲಲು ಸಿದ್ದತೆ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಉಪ ಚುನಾವಣೆ ಕಾವು ನಿಧಾನವಾಗಿ ಏರ್ತಿದೆ. ಕೆ.ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲಲು ಮೂರು ಪಕ್ಷಗಳು‌ ಸತಾಯಗತ ಪ್ರಯತ್ನಕ್ಕೆ ಮುಂದಾಗಿವೆ. ಕಾಂಗ್ರೆಸ್ , ಜೆಡಿಎಸ್, ಮತ್ತು ಬಿಜೆಪಿ ನಡುವೆ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲಾ ಸಾಧ್ಯತೆ ಇದ್ದು , ಮೂರು ಪಕ್ಷಗಳು ಚುನಾವಣೆಯ ಸಿದ್ದತೆಯಲ್ಲಿ ಪಕ್ಷ ತೊಡಗಿವೆ.ಇಂದು ಕೆ‌.ಆರ್.ಪೇಟೆಯಲ್ಲಿ ಕಾಂಗ್ರೆಸ್ ಪೂರ್ವಭಾವಿ ಸಭೆ ನಡೆಸಿ ಚುನಾವಣೆ ಸಂಬಂಧ ಕಾರ್ಯಕರ್ತರ ಜೊತೆ ತಾಲೂಕಿನ ಮುಖಂಡರು ಹಾಗೂ‌ ನಾಯಕರು ಚರ್ಚೆ ನಡೆಸಿದ್ರು.

ಹೌದು ! ಮಂಡ್ತ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರಕ್ಕೆ‌ಅನರ್ಹ ಶಾಸಕನ ರಾಜೀನಾಮೆಯಿಂದ ಉಪ ಚುನಾವಣೆ ಎದುರಾಗಿದೆ. ಚುನಾವಣೆ ಹತ್ರಿವಾಗ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು ನಿಧಾನವಾಗಿ ಕಾವು ಪಡೆದುಕೊಳ್ತಿದೆ.ಚುನಾವಣೆ ಎದುರಿಸಲು ಮೂರು ಪಕ್ಷಗಳು ಸಿದ್ದತೆ ಮಾಡಿಕೊಂಡಿವೆ.ಈಗಾಗಲೇ ಅನರ್ಹ ಶಾಸಕ ಮತದಾರರಿಗೆ ಬಾಡೂಟ ಹಾಕಿಸ್ತಿದ್ರೆ, ಜೆಡಿಎಸ್ ಸಾಲಮನ್ನಾ ದ ಅರಿವು ಜಾಥಾದ ಮೂಲಕ ಪ್ರಚಾರ ಮಾಡ್ತಿದೆ. ಇದರ ನಡುವೆ ಕಾಂಗ್ರೇಸ್ ಕೂಡ ಚುನಾವಣೆ ಗೆಲ್ಲುವ ಪ್ರಯತ್ನ‌ ಮಾಡ್ತಿದೆ. ಇಂದು ಕೆ.ಆರ್.ಪೇಟೆಯ ಪ್ರವಾಸಿ ಮಂದಿರದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ತಾಲೂಕಿನ ಮಾಜಿ ಶಾಸಕ ಚಂದ್ರಶೇಖರ್ ಕಾರ್ಯಕರ್ತರ ಮತ್ತು ಮುಖಂಡರ ಸಭೆ ಕರೆದು ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಸಲಹೆ ಸೂಚನೆ ಪಡೆದುಕೊಂಡು ಚುನಾವಣೆಗೆ ಸಿದ್ದತೆ ನಡೆಸ್ತಿದ್ದಾರೆ. ಸಭೆಯಲ್ಲಿಂದು ತನ್ನ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕುಮಾರಸ್ವಾಮಿ ಕಾರಣ . ಆತ ಪೊಳ್ಳು ಭರವಸೆ ಮೂಲ ಕ‌ಮಹಿಳೆಯರ ಮತ್ತು ಹಿರಿಯರನ್ನು ಯಾಮಾರಿಸಿ ಓಟ್ ಹಾಕಿಸ್ಕೊಂಡು ಯಾಮಾರಿಸ್ದಾ. ರೈತರಿಗೆ ಸಾಲ ಮನ್ನಾ ಮಾಡ್ತಿನಿ ಅಂತೇಳಿ ಕೈಕೊಟ್ಟ, ಆತ ಮಗಾನ್ ಸುಳ್ಳುಗಾರ‌. ಆತನ ಮತ್ತು‌ ಅವರ ಕುಟುಂಬದವರ ಮಾತು ನಂಬಿ ಕಾಂಗ್ರೆಸ್ ನವರು‌ ಮತ್ತು‌ ರಾಜ್ಯದ ಜನ್ರು ಹಾಳಾದ್ರು‌ ಅಂತಾ ಏಕವಚನದಲ್ಲೆ ವಾಗ್ದಾಳಿ‌ ನಡೆಸಿದ್ರು‌.

ಇನ್ನು ಈ ಬಾರಿಯ ಉಪಚುನಾವಣೆಯಲ್ಲಿ ಮತ್ತೆ ಕೈ ಅಭ್ಯರ್ಥಿಯಾಗಲಿರುವ ಕೆ.ಬಿ. ಚಂದ್ರಶೇಖರ್ ಈ ಸಂಬಂಧ ಇಂದು ಸಭೆ ನಡೆಸಿ ಕಾರ್ಯಕರ್ತರ ಮತ್ತು ಮುಖಂಡರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದು, ಸತಾಯಗತ ಗೆಲ್ಲೆಲ್ಲೇಬೇಕೆಂದು ಪಣತೊಟ್ಟಿದ್ದಾರೆ.‌ ಕಾರ್ಯಕರ್ತರ ಸಭೆಯ ವೇಳೆ ಈ ಬಾರಿ ಅನರ್ಹ ಶಾಸಕ ಚುನಾವಣಡ ಗೆಲ್ಲೆಲೇಬೇಕೆಂದು ಭಾರೀ ಚುನಾವಣೆಗಾಗಿ ಮತದಾರರಿಗೆ ಹಂಚಲು ತಾಲೂಕಿನ ಹಲವಡೆ ಗೋದಾಮಿನಲ್ಲಿ ಸಾವಿರಾರು ಸೀರೇ, ಪಾತ್ರೆ, ಮತ್ತು ಇನ್ನಿತರ ಪದಾರ್ಥ ಸಂಗ್ರಹಣೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿ ಗೋದಾಮಿನಲ್ಲಿ ಸಂಗ್ರಹಿಸಿ ಪದಾರ್ಥಗಳನ್ನು ನೀವೇ ಸೀಜ್ ಮಾಡಿ ನನಗೆ ಕರೆ ಮಾಡಿ ಎಂದು‌ ಕಾರ್ಯಕರ್ತರಿಗೆ ಕರೆ ಕೊಟ್ಟರು.

ಒಟ್ಟಾರೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ನಿಧಾನವಾಗಿ ಕಾವೇರ್ತಿದ್ದು,ಮೂರು ಪಕ್ಷದವರು ಸಿದ್ದತೆ ನಡೆಸ್ತಿದ್ದು,ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಂತರ ಮತ್ತಷ್ಟು ರಂಗೇರಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights