ನಾಳೆಯಿಂದ ‘ಬಿಗ್ ಬಾಸ್’ ಸೀಸನ್ 7 ಆರಂಭ : ಸ್ಪರ್ಧಿಗಳ ಪರಿಚಯ ಇಲ್ಲಿದೆ…

ಕನ್ನಡ ಕಿರುತೆರೆಯ ಯಶಸ್ವಿ ಕಾರ್ಯಕ್ರಮ ‘ಬಿಗ್ ಬಾಸ್’ ಸೀಸನ್ 7 ಅಕ್ಟೋಬರ್ 13 ಭಾನುವಾರ ಸಂಜೆ 6ಕ್ಕೆ ಅದ್ದೂರಿಯಾಗಿ ಆರಂಭ ಪಡೆದುಕೊಳ್ಳಲಿದೆ.

ಬಿಗ್ ಬಾಸ್ ೭ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದ್ದರೂ ಸ್ಪರ್ಧಿಗಳ ಅಧಿಕೃತ ಪಟ್ಟಿ ಹೊರಬಿದ್ದಿಲ್ಲವಾದರೂ ಒಂದಿಷ್ಟು ಸೆಲೆಬ್ರಿಟಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸಂಭಾವ್ಯ ಪಟ್ಟಿಯ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಅಂದಹಾಗೆ 7ನೇ ಆವೃತ್ತಿಗೂ ಖ್ಯಾತ ನಟ ಕಿಚ್ಚ ಸುದೀಪ್ ಅವರೇ ನಿರೂಪಕರಾಗಲಿದ್ದು, ಕಳೆದೆರಡು ವರ್ಷಗಳ ಕಾಲ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಿದ್ದ ಬೃಹತ್ ರಿಯಾಲಿಟಿ ಶೋ ಮತ್ತೆ ಕಲರ್ಸ್ ಕನ್ನಡಕ್ಕೆ ಮರಳಿದೆ 17 ಸ್ಪರ್ಧಿಗಳು 100 ದಿನಗಳ ಕಾಲ ದೊಡ್ಡ ಮನೆಯಲ್ಲಿ ಹೊರಪ್ರಪಂಚದ ಸಂಪರ್ಕವಿಲ್ಲದೆ ಕಾಲ ಕಳೆಯಲಿದ್ದಾರೆ.

ಈ ಬಾರಿ ‘ಬಿಗ್ ಬಾಸ್’ ಮನೆಗೆ ಯಾರೆಲ್ಲಾ ಪ್ರವೇಶಿಸಲಿದ್ದಾರೆ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಒಟ್ಟು 15 ರಿಂದ 17 ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ಆ ಸ್ಪರ್ಧಿಗಳ ಪಟ್ಟಿ ಹೀಗಿದೆ.

ರಾಗಿಣಿ ದ್ವಿವೇದಿ, ಜೈಜಗದೀಶ್, ಕುರಿಪ್ರತಾಪ್, ರಾಜು ತಾಳಿಕೋಟೆ, ಶಿವರಾಜ್ ಕೆ.ಆರ್. ಪೇಟೆ, ದೀಪಿಕಾ ದಾಸ್, ರಾಹುಲ್, ಶಮಿತಾ ಮಲ್ನಾಡ್, ಗುರುಲಿಂಗ ಸ್ವಾಮೀಜಿ, ರಂಜನಿ ರಾಘವನ್, ಪಂಕಜ್, ಭೂಮಿ ಶೆಟ್ಟಿ, ಕಿರಣ್ ರಾಜ್, ವಾಸುಕಿ ವೈಭವ್, ಚೈತ್ರ ವಾಸುದೇವನ್ ಈ ಬಾರಿ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಎಲ್ಲಾ ಸ್ಪರ್ಧಿಗಳನ್ರೆನು ನೋಡಲು ಭಾನುವಾರದವರೆಗೂ ಕಾಯಬೇಕಿದೆ.

ಮನರಂಜನೆ ಹಾಗೂ ಭಾವನೆಗಳ ಹದವಾದ ಮಿಶ್ರಣವೇ ಬಿಗ್ ಬಾಸ್. ಆದರೆ ಹದ ಕಾಪಾಡಿಕೊಳ್ಳುವುದ ಸುಲಭದ ವಿಷಯವಲ್ಲ. ಇದರಲ್ಲಿ ಯಾರು ಹೇಗೆ ಜೀವಿಸುತ್ತಾರೆ ಅನ್ನೋದನ್ನ ನೋಡಲು ಭಾನುವಾರದವರೆಗೂ ಕಾಯಲೇಬೇಕು..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights