ನನ್ನ ಮನೆ ಮೇಲೆ ಐಟಿ ದಾಳಿ ಮಾಡಿದರೆ ಸಿಗುವುದೆಲ್ಲಾ ಯಡಿಯೂರಪ್ಪರ ಆಸ್ತಿ ಪತ್ರಗಳು – ಹೆಚ್ ಡಿಕೆ

ನನ್ನ ಮನೆಯಲ್ಲಿ ಯಡಿಯೂರಪ್ಪರ ಆಸ್ತಿಯ ಪತ್ರಗಳೇ ಇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು… ನನ್ನ ಮನೆ ಮೇಲೆ ಐಟಿ ದಾಳಿ ಮಾಡಲಿ ನನಗೆ ಭಯವಿಲ್ಲ. ಒಂದು ವೇಳೆ ಐಟಿ ದಾಳಿ ಮಾಡಿದರೂ ಸಿಗುವುದೆಲ್ಲಾ ಯಡಿಯೂರಪ್ಪನ ಾಸ್ತಿ ಪತ್ರಗಳೇ ಎಂದು ಟಾಂಗ್ ಬಿಸಿ ಬಿಸಿ ಸುದ್ದಿ ಹೊರಹಾಖಿದ್ದಾರೆ.

ಇಂದು ಹಾಸನದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ದೇಶದಲ್ಲಿ ಎಮರ್ಜೆನ್ಸಿ ಈಗಾಗಲೇ ಶುರುವಾಗಿದೆ.  ನನ್ನ ಮನೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಸಾವಿರಾರು ಕೋಟಿ ಹಣದ ಅಕ್ರಮದ ಪತ್ರಗಳಿವೆ ಎಂದಿದ್ದಾರೆ. ಆದರೆ ಅದು ಯಾವುದೂ ಎಂದು ಸ್ಪಷ್ಟ ಪಡಿಸಿದ ಕುಮಾರಸ್ವಾಮಿಯವರು, ಪತ್ರಗಳು ತಮ್ಮ ಬಳಿ ಇವೆ ಎಂದು ಹೇಳಿಕೊಂಡಿದ್ದಾರೆ.

ದೇವೇಗೌಡರು ರಾಜ್ಯ ಬಿಟ್ಟು ದೇಶ ರಾಜಕಾರಣಕ್ಕೆ ಹೋಗಲಿ. ದೇಶದ ಅಭಿವೃದ್ಧಿ ಅಧೋಗತಿಗೆ ಹೋಗಿದೆ. ಯಾರಾದ್ರೂ ದೇಶದ ಸಮಸ್ಯೆ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡಬೇಕಿತ್ತು. ದೇವೇಗೌಡರು ಸಂಸತ್ತಿನಲ್ಲಿ ಹೋರಾಟ ಮಾಡುವರು ಎಂದು ಹೇಳಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ವಿಚಾರ :-

ಹಾಸನಾಂಬೆ ದರ್ಶನಕ್ಕೆ ಆಗಮಿಸಿ‌‌ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಊಹೆಮಾಡಲಾಗದಷ್ಟು ಮಳೆ ಬಂದಿದೆ. ಮುಂಗಾರು ಹಿಂಗಾರು ಬಿಡುವು ನೀಡದೆ ಸುರಿದು ರಾಜ್ಯದಲ್ಲಿ ದೊಡ್ಡ ಮಟ್ಟದ ಅನಾಹುತ ಆಗುತ್ತಿದೆ. ಪರಸ್ಪರ ಕೆಸರೆರೆಚಾಟದಿಂದ ಬೀದಿಯಲ್ಲಿರೋ ಜನರಿಗೆ ಪರಿಹಾರ ಸಿಗಲ್ಲ. ಇದನ್ನ ನಾನು ವಿಧಾನ ಸಭೆ ಕಲಾಪದಲ್ಲೇ ಹೇಳಿದ್ದೆ. ನಾನು ಸರ್ಕಾರವನ್ನ ಕಠಿಣ ಟೀಕೆ ಮಾಡಲ್ಲ ಎಂದು ಕೆಲವು ಸಲಹೆಯನ್ನ ಕೊಟ್ಟಿದ್ದೆ. ನರೇಂದ್ರ ಮೋದಿ ಕಳೆದ ಲೋಕಸಭಾ ಚುನಾವಣಾ ವೇಳೆ 15 ಸಾರಿ ರಾಜ್ಯಕ್ಕೆ ಬಂದಿದ್ದರು. ಅವರು ಚುನಾವಣಾ ಪ್ರಚಾರಕ್ಕೆ ಪ್ರಮುಖ ಆದ್ಯತೆ ಕೊಟ್ಟರು. ಮಹಾರಾಷ್ಟ್ರ ದಲ್ಲೂ ಕೂಡ ನೆರೆ ಸಂತ್ರಸ್ಥರ ಬಗ್ಗೆ ಮಾತನಾಡಿಲ್ಲ.

ಪ್ರದಾನಿ ಮೋದಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ ಮಾಜಿ ಸಿಎಂ, ನಾವು ವಿಧಾನಾಭೆಯಲ್ಲಿ ಕಾಲಹರಣ ಮಾಡಿದ್ರೆ ನೆರೆಹಾವಳಿಗೆ ಪರಿಹಾರ ನೀಡಲು ಆಗಲ್ಲ. ಹೀಗೆಂದು ತರಾತುರಿಯಲ್ಲಿ ಕಲಾಪ ಮುಗಿಸಿದ್ರು. ಆದ್ರೆ ಅವರು ಜನರ ಬಳಿ ಹೋಗಲಿಲ್ಲ, ಹೋಗಿದ್ದು ಮಹಾರಾಷ್ಟ್ರ ದ ಚುನಾವಣಾ ಪ್ರಚಾರಕ್ಕೆ. ನಮ್ಮ ಸಿಎಂ ನೀವು ಬಿಜೆಪಿ ಗೆಲ್ಲಿಸಿದ್ರೆ ನಾವು ನೀರು ಕೊಡ್ತೀವಿ ಎಂದು ಹೇಳಿ ಬಂದ್ರು. ಸಿಎಂ ಯಡಿಯೂರಪ್ಪ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾಡಿನ ಜನತೆ ಈಗಲಾದ್ರು ಅರ್ಥಮಾಡಿಕೊಳ್ತಾರೊ ಇಲ್ಲವೋ ಗೊತ್ತಿಲ್ಲ. ನಾನು ಸಿಎಂ ಆಗಿದ್ದಾಗ ಅಲ್ಲಿನ ನಾಯಕತ್ವ ನೀರಿನ ಸಮಸ್ಯೆಗೆ ಸ್ಪಂದಿಸಲಿಲ್ಲ. ಅಲ್ಲಿ ಮಳೆ ಸುರಿದಾಗ ಕನಿಷ್ಠ ನಮ್ಮ ರಾಜ್ಯಕ್ಕೆ ಮುನ್ನೆಚ್ಚರಿಕೆ ನೀಡದೆ ಜಲಾಶಯದಿಂದ ನೀರು ಬಿಟ್ಟರು. ಮಹಾರಾಷ್ಟ್ರ ಸಿಎಂ ವಿರುದ್ದವೂ ಕುಮಾರಸ್ವಾಮಿ ಅಸಮಧಾನ. ಯಡಿಯೂರಪ್ಪ ಹಣದ ಪರಿಸ್ಥಿರಿ ಬಗ್ಗೆ ಕೇಳಿದ್ದೆ ಎಲ್ಲವೂ ಸರಿಯಾಗಿದೆ ಅಂತಾರೆ. ಹೊರಗಡೆ ಬಂದು ರಾಜ್ಯದ ಹಣಕಾಸು ಸ್ಥಿತಿ ಬಗ್ಗೆ ನನಗೊಬ್ಬನಿಗೆ ಮಾತ್ರಗೊತ್ತು ಅಂತಾರೆ. ಅವರು ಯಾವ ಅರ್ಥದಲ್ಲಿ ಹೇಳುತ್ತಿದ್ದಾರೊ ಅರ್ಥವಾಗುತ್ತಿಲ್ಲ ಎಂದು ಸಿಎಂ ಬಿಎಸ್ ವೈ ವಿರುದ್ದ ಕುಮಾರಸ್ವಾಮಿ ಹರಿಹಾಯ್ದರು.

ನಾನು ಸಾಲಾ ಮನ್ನಾಕ್ಕಾಗಿ ಯಾವುದೇ ಯೋಜನೆಯ ಹಣ ಕಡಿತ ಮಾಡಲಿಲ್ಲ. ಆರ್ಥಿಕ ಶಿಸ್ತು ಕಾಪಾಡಲು ಮೈತ್ರಿ ಸರ್ಕಾರದಲ್ಲಿ ಕೆಲಸ ಮಾಡಿದ್ದೇನೆ. ನಾನು ಇಷ್ಟು ದಿನ ಸರ್ಕಾರಕ್ಕೆ ಅವಕಾಶ ಕಡೋಣ ಎಂದು ಮೌನವಾಗಿದ್ದೆ. ಇಲ್ಲಿವರೆಗೆ ನೆರೆಹಾವಳಿಗೆ ಪರಿಹಾರ ಸಿಗಲಿಲ್ಲ. ಈಗ ಎರಡನೇ ಬಾರಿ ಗೆ ಮಳೆ ಹಾನಿ ಶುರುವಾಗಿದೆ. ನೀವು ಏನು ಕ್ರಮ ಕೈಗೊಳ್ಳುತ್ತಿದ್ದೀರಿ. ಸರ್ಕಾರದ ವಿರುದ್ಧ ಕುಮಾರಸ್ವಾಮಿ ಟೀಕಾಸ್ತ್ರ ಮಾಡಿದ್ದಾರೆ.

ಕೇಂದ್ರದ ಸಚಿವರಾದ ಚಿನ್ಮಯಾನಂದ ರವರ ಸಾಕಷ್ಟು ಶಿಕ್ಷಣ ಸಂಸ್ಥೆಗಳಿವೆ. ಈತ ಉತ್ತರ ಪ್ರದೇಶದಲ್ಲಿ ಓರ್ವ ಮಹಿಳೆ ಅತ್ಯಾಚಾರದ ಆರೋಪಿ. ಆದ್ರೆ ಆಕೆಯನ್ನೇ ಹಣದ ಬೇಡಿಕೆ ಆರೋಪದಲ್ಲಿ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಆತ ಐಷಾರಾಮಿ ಭಂಗಲೆಯಲ್ಲಿದ್ದಾರೆ. ಪಾಪಾ ಅಲ್ಲಿ ಅದ್ಯಾರದು ಸಿಎಂ ಯೋಗಿ ಆದಿತ್ಯಾನಾಥ್ ಅಂತೆ. ಇದು ಬಿಜೆಪಿಯ ಹಿಂದೂ ಸಂಸ್ಕೃತಿ ಎಂದು ವಾಗ್ದಾಳಿ ಮಾಡಿದರು.

ಪತ್ರಿಯೊಂದರ ವರದಿ ಉಲ್ಲೇಖಿಸಿ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ದೇಶದಲ್ಲಿ ಎಮ್ಮರ್ಜೆನ್ಸಿ ಈಗಾಗಲೆ ಆರಂಭಗೊಂಡಿದೆ. ಐಟಿಯವರು ನನ್ನ ಮನೆಗೆ ಬರಲಿ ಎಂದು ಕಾಯುತ್ತಿದ್ಸೇನೆ. ಅವರು ಬಂದಾಗ ನಾನು ತೋರಿಸುತ್ತೇನೆ ನನ್ಬ ಮನೆಯಲ್ಲಿ ಇರೋದು ಯಡಿಯೂರಪ್ಪ ಬಗೆಗಿನ ದಾಖಲೆಗಳೆ. ನಾನು ದೇವೇಗೌಡರನ್ನ ಕರ್ನಾಟಕ ಬಿಡಿ ಎಂದು ಹೇಳುತ್ತಿದ್ದೇನೆ. ಈಗ ದೇಶವನ್ನ ಯಾರಾದ್ರು ಲೀಡ್ ತಗೊಬೇಕಿದೆ. ನಾನು ಸಿಎಂ ಆಗಿ ಲೂಟಿಹೊಡೆಯೋ ಕೆಲಸ ಮಾಡದೇ ಇರೋದ್ರಿಂದ ಧೈರ್ಯವಾಗಿ ಇದೀನಿ. ನಾವೇನು ಹೆದರಿ ಕೂರೋದಿಲ್ಲ, ಯಾರಾದ್ರು ದ್ವನಿ ಮಾಡಲೇಬೇಕಿದೆ ಎಂದರು.

ಶೀಘ್ರವಾಗಿ ನಮ್ಮ ಮೇಲೆ ಪಕ್ಷದಿಂದ ಜನರ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಂಪದ್ಬರಿತ ರಾಜ್ಯ. ನನ್ನ ಅಭಿಪ್ರಾಯದಲ್ಲಿ ರಾಜ್ಯದ ಹಣಕಾಸು ಸ್ಥಿತಿ ಚನ್ನಾಗಿದೆ. ಇವರಿಗೆ ಕೆಲಸ ಮಾಡೋ ಬದ್ದತೆ ಇವರಲ್ಲಿ ಇಲ್ಲ. ಕೆಲಸ ಮಾಡಲು ಹಣದ ಕೊರತೆಯಿಲ್ಲ,ಕೇಂದ್ರದ ಮೇಲೆ ಆಪಾದನೆ ಮಾಡೋ ಅಗತ್ಯವೂ ಇಲ್ಲ. ಈ ಸರ್ಕಾರಕ್ಕೆ ಅಭಿವೃದ್ದಿ ಬೇಕಿಲ್ಲ. ಅವರಿಗೆ ಲೂಟಿಮಾಡೋದು ಬೇಕು,ಅವರಿಗೆ ಲೂಟಿ ಮಾಡೋದು ಖುಷಿ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights