ನನಗೂ ಸಿದ್ದರಾಮಯ್ಯರ ನಡುವೆ ಅಸಮಾಧಾನ ಇಲ್ಲ – ಡಿಕೆ.ಶಿವಕುಮಾರ್

ನನಗು ಸಿದ್ದರಾಮಯ್ಯರ ನಡುವೆ ಅಸಮಾಧಾನ ಇಲ್ಲ ಎಂದು ಮೈಸೂರಿನಲ್ಲಿ ಚಾಮುಂಡಿ ದೇವಿ ದರ್ಶನದ ಬಳಿಕೆ ಡಿಕೆ.ಶಿವಕುಮಾರ್ ವಿವರಣೆ ಕೊಟ್ಟಿದ್ದಾರೆ.

ಅವರು ನಮ್ಮ ವಿರೋಧ ಪಕ್ಷದ ನಾಯಕ. ನಾನು ಅವರ ಕೈ ಕೇಳಗೆ ಕೆಲಸ ಮಾಡುವ ಕಾರ್ಯಕರ್ತ. ನಮ್ಮಿಬ್ಬರ ನಡುವೆ ಗೊಂದಲ ಭಿನ್ನಾಭಿಪ್ರಾಯ ಬರುತ್ತೆ. ನಾನು ಪಕ್ಷ ಕೊಟ್ಟ ಕೆಲಸವನ್ನು ತಲೆ ಮೆಲೆ ಹೊತ್ತುಕೊಂಡು ಮಾಡುತ್ತೇನೆ. ಅದು ಯಾವ ಕೆಲಸವಾದರೂ ಸರಿ. ನಾನು ಇವತ್ತಿನವರೆಗೆ ಎಲ್ಲ ಸ್ಥಾನಮಾನ‌ಕೊಟ್ಟಿರೋದು ಹೈಕಮಾಂಡ್. ಎಲ್ಲವು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕಾಲಚಕ್ರ ತಿರುಗಿಸುತ್ತೇನೆ ಎಂಬ ಹೇಳಿಕೆ ವಿಚಾರಕ್ಕೆ ಮಾತನಾಡಿದ ಡಿಕೆ ಶಿವಕುಮಾರ್, ವಿಧಾನಸೌಧದಲ್ಲೂ ತಕ್ಕಡಿ ಇರುತ್ತೆ.  ತಕ್ಕಡಿ ತೂಗುತ್ತಿರುತ್ತದೆ.  ನ್ಯಾಯ ಯಾವ ಕಡೆ ಇದೆಯೋ ಆ ಕಡೆ ತೂಗುತ್ತದೆ.  ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಸಿಗುತ್ತೆ ಎಂದು  ಮಾರ್ಮಿಕ ಉತ್ತರ ಕೊಟ್ಟಿದ್ದಾರೆ.

ಉಪಚುನಾವಣೆಯಲ್ಲಿ ಡಿಕೆಶಿ ಪಾತ್ರ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ.  1985ರಿಂದಲೂ ಪಕ್ಷವನ್ನು ತಲೆಯ ಮೇಲೆ ಹೊತ್ತುಕೊಂಡಿದ್ದೇನೆ. ರಾಜೀವ್ ಗಾಂಧಿ, ಬಂಗಾರಪ್ಪ ಕಾಲದಿಂದಲೂ ನಿಷ್ಠೆಯಿಂದ ಕೆಲಸ ನಡೆದಿದ್ದೇನೆ. ಈಗಲೂ‌ ಪಕ್ಷ ಹೈಕಮಾಂಡ್ ಕೊಡುವ ಕೆಲಸ ಮಾಡುತ್ತೇನೆ. ನನ್ನ ರಾಷ್ಟ್ರೀಯ ನಾಯಕರು ಯಾವ ಜವಾಬ್ದಾರಿ ಕೊಡುತ್ತಾರೋ ಅದನ್ನು ನಾನು ನಿಭಾಯಿಸುತ್ತೇನೆ. ಉಪಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ವಹಿಸಿಲ್ಲ.  ವಹಿಸಿದ ಕೆಲಸ ಮಾಡುತ್ತೇನೆ.  ನನಗೆ ಸ್ಥಾನ ಮಾನ ನೀಡುವ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತೆ.  ಈ ಹಿಂದೆಯೂ ಹಲವಾರು ಅಧಿಕಾರ ಕೊಟ್ಟಿದ್ದು ನಮ್ಮ ಹೈಕಮಾಂಡ್ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights