ನಟ ಕಿಚ್ಚ ಸುದೀಪ್​ ಟ್ವಿಟರ್​ ಅಕೌಂಟ್​ ಹ್ಯಾಕ್ ಮಾಡಲು ಯತ್ನ….

ನಟ ಕಿಚ್ಚ ಸುದೀಪ್​ ಟ್ವಿಟರ್​ ಅಕೌಂಟ್​ ಹ್ಯಾಕ್ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎನ್ನುವುದು ತಿಳಿದು ಬಂದಿದೆ. ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದ ಬರೋಬ್ಬರಿ 7 ಬಾರಿ ನಟ ಸುದೀಪ್​ ಟ್ವಿಟರ್​ ಅಕೌಂಟ್​ ಹ್ಯಾಕ್​ ಮಾಡಲು ಕಿಡಿಗೇಡಿಗಳು ಯತ್ನಿಸಿದ್ದಾರೆ.

ಟ್ವಿಟರ್​ ಅಕೌಂಟ್​ ರೀಸೆಟ್​ ಮಾಡಲು ಏಳು ಬಾರಿ ಸುದೀಪ್​ ಅವ್ರಿಗೆ ಮೇಲ್​ಗಳು ಬಂದಿವೆ ಎನ್ನಲಾಗಿದೆ.ಈ ಕುರಿತು ಕಿಚ್ಚ ಸುದೀಪ್​ ಅವ್ರ ಫ್ಯಾನ್​ ಪೇಜಸ್​ನಲ್ಲಿ ಮಾಹಿತಿ ಶೇರ್​ ಮಾಡಲಾಗಿದೆ. ಈ ಬಗ್ಗೆ ಸುದೀಪ್​ ಇದುವರೆಗೂ ಏನೂ ಹೇಳಿಲ್ಲ.  ಆದ್ರೆ ಖುದ್ದು ಅವ್ರೇ ಫಾಲೋ ಮಾಡುವ ಫ್ಯಾನ್​ ಪೇಜ್​ಗಳಲ್ಲಿ ಈ ರೀತಿ ಹ್ಯಾಕ್​ ಕುರಿತ ಟ್ವೀಟ್​ಗಳು ಹರಿದಾಡುತ್ತಿರುವುದು ಕುತೂಹಲ ಮೂಡಿಸಿದೆ. ಸದ್ಯ ಕಿಚ್ಚ ಸುದೀಪ್​ ಬೆಂಗಳೂರಿನಲ್ಲಿಲ್ಲ.

ಇದೇ ಸೆಪ್ಟೆಂಬರ್​ 22ರ ಭಾನುವಾರ ಪೋಲ್ಯಾಂಡ್​ಗೆ ತೆರಳಿರುವ ಸುದೀಪ್​, ಕೋಟಿಗೊಬ್ಬ 3 ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕೌಂಟ್​ ಹ್ಯಾಕ್​ ಕುರಿತು ಪೈಲ್ವಾನ್​ ನಿರ್ಮಾಪಕಿ ಸ್ವಪ್ನ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

ಕಿಚ್ಚ ಸುದೀಪ್​ ಅವ್ರ ಬಳಿ ಮಾಹಿತಿ ಕಲೆ ಹಾಕಲು ಪ್ರಯತ್ನಿಸುತ್ತಿದ್ದೇನೆ. ಆದ್ರೆ ಸಾಧ್ಯವಾಗುತ್ತಿಲ್ಲ. ಅವ್ರ ಬಳಿ ಮಾತನಾಡಿ ನಂತರ ಮುಂದಿನ ಕ್ರಮದ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ ನಿರ್ಮಾಪಕಿ ಸ್ವಪ್ನ ಕೃಷ್ಣ. ಸುದೀಪ್​ ಅವ್ರು ಬೆಂಗಳೂರಿಗೆ ವಾಪಸ್ಸಾದ ಬಳಿಕ ಅವ್ರೇ ಪೊಲೀಸ್​ ದೂರು ನೀಡಬಹುದು ಅಥವಾ 15 ದಿನಗಳ ಕಾಲ ಪೋಲ್ಯಾಂಡ್​ನಲ್ಲಿ ಶೂಟಿಂಗ್​ ನಡೆಯಲಿರುವ ಕಾರಣ, ಮತ್ತೆ ಪೈಲ್ವಾನ್​ ನಿರ್ಮಾಪಕರೇ ಟ್ವಿಟರ್​ ಅಕೌಂಟ್​ ಹ್ಯಾಕ್​ ಬಗ್ಗೆ ಪೊಲೀಸ್​ ದೂರು ನೀಡಬಹುದು. ಪೈಲ್ವಾನ್​ ಪೈರಸಿಯಿಂದ ಪ್ರಾರಂಭವಾದ ಆನ್​ಲೈನ್​ ಬೆಳವಣಿಗೆಗಳು ಈಗ ಸುದೀಪ್​ ಅಕೌಂಟ್​ ಹ್ಯಾಕ್​ ಆಗುವವರೆಗೆ ಬಂದು ನಿಂತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights