ದೇವಿಗೆ ಕಣ್ಣು ಬಂದಿದೆ ಎಂದು ದರ್ಶನಕ್ಕೆ‌ ಮುಗಿಬಿದ್ದ ಜನ : ಕೃತಕ ಕಣ್ಣು ಹಚ್ಚಿದ ಕಿಡಿಗೇಡಿಗಳು

ಜನ ಮರುಳು ಜಾತ್ರೆ ಮರುಳು ಎನ್ನುವ ಮಾತನ್ನ ಸಾಮಾನ್ಯವಾಗಿ ನೀವು ಕೇಳೇ ಇರ್ತೀರಾ ಅಲ್ವಾ… ಇಲ್ಲೊಂದು ಘಟನೆ ನಿಮ್ಮೆಲ್ಲರಿಗೂ ಪ್ರತ್ಯಕ್ಷ  ಕಂಡರು ಪ್ರಮಾಣಿಸಿ ನೋಡಿ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಎಸ್.. ಹುಬ್ಬಳ್ಳಿಯಲ್ಲಿ ಮಂಟೂರು ರಸ್ತೆಯಲ್ಲಿರು‌ವ ನಲ್ಲಮ್ಮ ದೇವಿಗೆ ನಿನ್ನೆ ಪೂಜೆಗೆಂದು ಬಂದ ಭಕ್ತರಿಗೆ ಈ ಹಿಂದೆ ಇಲ್ಲದ ಕಣ್ಣು ಕಾಣಿಸಿಕೊಂಡಿದೆ. ಇದನ್ನ ನಿಜವೆಂದು ಭಾವಿಸಿ ಸಾವಿರಾರು ಸಂಖ್ಯೆಯಲ್ಲಿ ಜನ ದೇವಿಯನ್ನು ನೋಡಲು ನೆರೆದಿದ್ದಾರೆ. ಆದರೆ ಕಿಡಿಗೇಡಿಗಳು ಕೃತಕ ಕಣ್ಣು ಅಂಟಿಸಿದ್ದನ್ನ ತಿಳಿದು ಇಡೀ ಗ್ರಾಮವೇ ಅಸಮಧಾನಗೊಂಡಿದೆ.

ಹೌದು.. ಕಣ್ಣು ಬಂದಿದೆ ಎಂದು ದರ್ಶನಕ್ಕೆ‌ ಮುಗಿಬಿದ್ದ ಜನರಿಗೆ ನಿರಾಸೆಯಾಗಿದೆ. ನಿನ್ನೆ ಏಕಾಏಕಿ ದೇವಿ ಕಣ್ಣು ತೆರೆದಿದ್ದಾಳೆ ಎಂಬ ಸುದ್ದಿ ಹರಡಿತ್ತು. ಗುಡಿಯಲ್ಲಿ ನೋಡಿದ್ರೆ ನಲ್ಲಮ್ಮ ದೇವಿಯ ಕಲ್ಲಿನ ಆಕೃತಿಗೆ ಕಣ್ಣುಗಳು ಬಂದಿದ್ದವು. ತಂಡೋಪತಂಡವಾಗಿ ದೇವಿಯ ದರ್ಶನಕ್ಕೆ ಜನರು ಆಗಮಿಸಿದ್ದರು.

ಪೊಲೀಸರು ಕೂಡ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದರು. ದೇವಿಯ ಕಣ್ಣುಗಳ ಪರೀಕ್ಷೆಗೆ ಮುಂದಾದ ಸ್ಥಳೀಯ ಯುವಕರಿಗೆ  ಕಣ್ಣುಗಳ ಸತ್ಯಾಸತ್ಯತೆ ಪರಿಶೀಲಿಸಿದಾಗ ಅಂಗಡಿಯಲ್ಲಿ ಸಿಗುವ ಪ್ಲಾಸ್ಟಿಕ್ ಕಣ್ಣುಗಳು ಎಂಬುದು ಗೊತ್ತಾಗಿದೆ.
ಜನರನ್ನು ದಾರಿ ತಪ್ಪಿಸಲು ಕಿಡಿಗೇಡಿಗಳು ಕಲ್ಲಿನ ಮೂರ್ತಿಗೆ ಪ್ಲಾಸ್ಟಿಕ್ ಕಣ್ಣು ಅಂಟಿಸಿದ್ದಾರೆಂದು  ಕಿಡಿಗೇಡಿಗಳ ಕೃತ್ಯಕ್ಕೆ ಹಿಡಿಶಾಪ ಹಾಕಿ ಜನರು ಮನೆಗಳಿಗೆ ವಾಪಸಾಗಿದ್ದಾರೆ.

ಹುಬ್ಬಳ್ಳಿಯ ರೈಲ್ವೇ ಇಲಾಖೆ ಜಾಗದಲ್ಲಿರುವ ಕಳೆದ ಮೂವತ್ತು ವರ್ಷಗಳಿಂದ ಇರುವ ನಲ್ಲಮ್ಮ ಗುಡಿಯ ನಲ್ಲಮ್ಮ ದೇವಿ ಕಣ್ಣು ತೆರೆದಿದ್ದಾಳೆ ಎಂಬ ವದಂತಿ ವಿಚಾರಕ್ಕೆ ಧಾರ್ಮಿಕ ಭಾವನೆಗೆ ಧಕ್ಕೆ ತರದಂತೆ ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ದೇವಿಗ ಬೆಳ್ಳಿಯ ಕಣ್ಣು ಕಳುವಾಗಿತ್ತು. ನಿನ್ನೆ ಕಿಡಿಗೇಡಿಗಳು ದೇವಿಗೆ ಪ್ಲಾಸ್ಟಿಕ್ ಕಣ್ಣು ಹಚ್ಚಿದ್ದರು ಇದರಿಂದ ಜನರಿಗೆ ಅಸಮಧಾನವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights