ದಸರಾ ಮಹೋತ್ಸವದಲ್ಲಿ ಗಮನ ಸೆಳೆದ ಆಹಾರ ಮೇಳ : ಫಿದಾ ಆದ ಮಾಂಸಹಾರಿ ಪ್ರಿಯರು

ಮೈಸೂರು ದಸರಾ‌ ಮಹೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ಸಿಕ್ಕಿದೆ. ಪ್ರತಿ ಬಾರೀ ದಸರಾ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗ್ತಿದ್ದು, ಈ ಬಾರಿ ಕೂಡ ಹಲವಾರು ಕಾರ್ಯಕ್ರಮ ಆಯೋಜಿಸಲಾಗಿದೆ. ಅದ್ರಲ್ಲಿ ಮುಖ್ಯವಾಗಿ ಮೈಸೂರು ಜನ್ರು ಅತಿ ಹೆಚ್ಚು ಇಷ್ಟ ಪಡುವ ಆಹಾರ ಮೇಳಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದ್ರು.

ಹೌದು !ಇಂದಿನಿಂದ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ವಿಧ್ಯುಕ್ತ ಚಾಲನೆ ಸಿಕ್ಕಿದೆ. ದಸರಾ ಅಂಗವಾಗಿ ದಸರಾ ಆಚರಣೆ ಸಮಿತಿಯಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದ್ದು, ಇಂದು ಜಿಲ್ಲಾ ಉಸ್ತುವಾರಿ‌ ಸಚಿವ ಸೋಮಣ್ಣ ಸೇರಿದಂತೆ ಮೈಸೂರು ಕ್ಷೇತ್ರದ ಬಿಜೆಪಿ ಶಾಸಕರು ಚಾಲನೆ ನೀಡಿದ್ರು.ಮೈಸೂರಿನ ಸ್ಕೌಟ್ & ಗೈಡ್ ಮೈದಾನದಲ್ಲಿ ಪ್ರತಿಬಾರಿಯಂತೆ ಈ ಬಾರಿ‌ ಕೂಡ ಆಹಾರ ಮೇಳ ಆಯೋಜಿಸಲಾಗಿದ್ದು, ಆಹಾರ ಮೇಳದಲ್ಲಿ ಈ ಬಾರಿ ಸುಮಾರು ೯೦ ಮಳಿಗೆಗಳನ್ನು ತೆರಯಲಾಗಿದೆ.‌ಇದ್ರಲ್ಲಿನ ಬಗೆ ಬಗೆಯ ಖಾದ್ಯಗಳು ಮೈಸೂರು ಜನ್ರ ನಾಲಿಗೆ ತಣಿಸಲು ಸಿದ್ದವಾಗಿದೆ.ಮೊದಲ ದಿನ‌ ಮಾಂಸಹಾರಿ ಪ್ರಿಯರಾಗಿ ಧಮ್ ಬಿರಿಯಾನಿ, ಧಮ್ ಬಿರಿಯಾನಿ‌‌, ಫಿಶ್ ಫ್ರೈ ಕಬಾಬ್ ಸಿದ್ದವಾಗಿದ್ರೆ,ಸಸ್ಯಹಾರಿಗಳಿಗಾಗಿ ಅಕ್ಕಿ, ರೊಟ್ಟಿ, ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿಗಳು ಸೇರಿದಂತೆ ವಿವಿಧ ಬಗೆವಬಗೆಯ ಖಾದ್ಯಗಳು ಸಿದ್ದವಾಗಿದ್ದವು. ಜನ್ರಿಗೆ ಬೇಕಾದ ತಿಂಡಿ ತಿನಿಸಿಗಳುನ್ನು ಪೂರೈಸಲು ಅಂಗಡಿ ಮಳಿಗೆ ತೆರೆದಿದ್ದು ತಮ್ಮ ಶೈಲಿಯ ತಿನಿಸು ಉಣಬಡಿಸಲು ಸಿದ್ದರಾಗಿದ್ದಾರೆ.

ಇನ್ನು ಈ ಬಾರಿ ಆಯೋಜನೆ ಮಾಡಲಾಗಿರೋ ಆಹಾರ ಮೇಳದಲ್ಲಿ ಸುಮಾರು ೯೦ ಮಳಿಗಳಿದ್ದು ಹೆಚ್ಚಾಗಿ ಮಾಂಸಹಾರಿ ಮಳಿಗೆಗಳು ಕಂಡು ಬಂದ್ವವು.‌ ಬಂಬು ಮತ್ತು ಧಮ್ ಬಿರ್ಯಾನಿ ಮತ್ತು ಮೀನಿನ ಅಂಗಡಿಗಳ ಮುಂದೆ ಹೆಚ್ಚಿನ‌ ಜನ್ರುಕಂಡು ಬಂದ್ರೆ , ಸಸ್ಯಹಾರಿಗಳ ಸ್ಟಾಲ್ ಗಳತ್ತ ಜನ್ರು ಅಷ್ಟಾಗಿರಲಿಲ್ಲ.‌ ಇನ್ನು ಮೊದಲ ದಿನದ ಆರಂಭದಲ್ಲೆ ಆಹಾರ ಮೇಳಕ್ಕೆ ಜನ್ರು ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು ಜನ್ರು ಬಂಬೂ ಬಿರಿಯಾನಿ ಹೋಟೆಲ್ ಹನುಮಂತ ಬಿರಿಯಾನಿಯ ರುಚಿ ಸವಿದ್ರು. ಅಲ್ದೆ ಈ ಬಾರಿ ಅಚ್ಚು ಕಟ್ಟಾಗಿ ಶುಚಿ ರುಚಿ ಆಹಾರ ಮೇಳಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಒಟ್ಟಾರೆ ಈ ಬಾರಿಯ ದಸರಾ ಮಹೋತ್ಸವದಲ್ಲಿ ಆಯೋಜಿಸಿರುವ ಆಹಾರ ಮೇಳಕ್ಕೆ ಜನ್ರಿಂದ ಸಖತ್ ರೆಸ್ಪಾನ್ಸ್ ವ್ಯಕ್ತವಾಗ್ತಿದ್ದು, ಮೈಸೂರು ಜನ್ರ ನಾಲಿಗೆ ರುಚಿ ತಣಿಸ್ತಿರೋದಂತು ಸುಳ್ಳಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights