ದಲಿತ ಮತಗಳ ಒಗ್ಗೂಡಿಕೆಗಾಗಿ ಬಿಜೆಪಿ ಹೊಸ ಸ್ಟ್ಯಾಟರ್ಜಿ – ಆಯಾ ಸಮುದಾಯದ ನಾಯಕರಿಗೆ ಉಸ್ತುವಾರಿ

ಮಂಡ್ಯದ ಕೆ.ಆರ್.ಪೇಟೆಯಲ್ಲಿ ಈ ಬಾರಿ ನಮ್ಮ ಬಿಜೆಪಿ ಅಭ್ಯರ್ಥಿ ಗೆಲ್ಲಿಸೋದೇ ನಮ್ಮ ಗುರಿ ಎಂದು ಬಿಜೆಪಿಯ ಮಾಜಿ ಸಚಿವ ಕೋಟೆ ಶಿವಣ್ಣ ಪಣತೊಟ್ಟಿದ್ದಾರೆ.

ದಲಿತ ಮತಗಳ ಒಗ್ಗೂಡಿಕೆಗಾಗಿ ಹೊಸ ಸ್ಟ್ಯಾಟರ್ಜಿ ಮಾಡ್ತಿದ್ದೀವಿ. ಕೆ.ಆರ್.ಪೇಟೆಯಲ್ಲಿ ಈ ಬಾರಿ ನಮ್ಮ ಬಿಜೆಪಿ ಅಭ್ಯರ್ಥಿ ಗೆಲ್ಲಿಸೋದೇ ನಮ್ಮ ಗುರಿ ಎಂದು ಕೋಟೆ ಶಿವಣ್ಣ ಹೇಳಿದ್ದಾರೆ.

ನಿರ್ಣಾಯಕ ಮತದಾರರಾಗಿರುವ ದಲಿತರನ್ನು ಒಗ್ಗೂಡಿಸಿ ಪಕ್ಷದ ಪರವಾಗಿ ಮತಹಾಕಲು ಮನವಿ ಮಾಡ್ತೀವಿ. ದಲಿತ ಸಮುದಾಯದ ಜನ್ರಿಗೆ ಬಿಜೆಪಿ ಪಕ್ಷದಿಂದ ಆದ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಡ್ತಿವಿ. ನಮ್ಮ ಪಕ್ಷದ ನಾಯಕರು‌ ಅಂಬೇಡ್ಕರ್ ಗೆ ಒಳ್ಳೆಯ ಗೌರವ ನೀಡಿದ್ದಾರೆ.

ರಾಜ್ಯದಲ್ಲೂ ಕೂಡ ದಲಿತ ನಾಯಾಕರಿಗೆ ಗೊವಿಂದ ಕಾರಚೋಳರಿಗೆ ಡಿಸಿಎಂ ಸ್ಥಾನ ನೀಡಿದ್ದಾರೆ. ಈ ಮೂಲಕ ದಲಿತ ಜನಾಂಗಕ್ಕೂ ಕೂಡ ಬಿಜೆಪಿ ಪಕ್ಷ ಮನ್ನಣೆ ನೀಡ್ತಿದೆ. ನಾಳೆಯಿಂದ ಕೆ.ಆರ್.ಪೇಟೆ ಚುನಾವಣಾ ಪ್ರಚಾರಕ್ಕೆ ರಾಜ್ಯದ ದಲಿತ ಸಮುದಾಯದ ನಾಯಕರಾದ ಶಿವರಾಂ,ಗೋವಿಂದ ಕಾರಚೋಳ ಬರ್ತಾರೆ. ಈ ಬಾರಿ ಈ ಕ್ಷೇತ್ರದಲ್ಲಿ ಕಮಲ ಅರಳಿಸಲು ಪ್ರಾಮಾಣಿಕ ಪ್ದಯತ್ನ ಮಾಡ್ತಿವಿ ಎಂದಿದ್ದಾರೆ.

ಆ ಪ್ರಕಾರ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲುವಿಗಾಗಿ ದಲಿತ ಮತಗಳ ಮೇಲೆ ಬಿಜೆಪಿ ಕಣ್ಣು ಬಿದ್ದಿದ್ದು, ಆಯಾ ಸಮುದಾಯದ ಜನಗಳ ಒಲೈಕೆಗೆ ಆಯಾ ಸಮುದಾಯದ ನಾಯಕರಿಗೆ ಉಸ್ತುವಾರಿ ನೀಡಲಾಗಿದೆ. ಕೆ.ಆರ್.ಪೇಟೆ ಕ್ಷೇತ್ರದ ಹೋಬಳಿಗೊಬ್ಬರಂತೆ ೬ ಹೋಬಳಿಗೆ ೬ ಸಚಿವರ ಉಸ್ತುವಾರಿ ನೀಡಲಾಗಿದೆ. ದಲಿತ ನಾಯಕರಾದ ಶ್ರೀರಾಮುಲು, ಗೋವಿಂದ ಕಾರಚೋಳ, ಶಿವರಾಂ,ಕೋಟೆ ಶಿವಣ್ಣಗೆ ದಲಿತ ಮತ್ತು ಅಹಿಂದ ಮತಗಳ ಉಸ್ತುವಾರಿ ನೀಡಲಾಗಿದೆ. ಉಳಿದ ಸಮುದಾಯದ ಜನರಿಗೆ ಆಯಾ ಜನಗಳ ಮುಖಂಡರನ್ನು ನಿಯೋಜಿಸಲು ಸಿದ್ದತೆ ಮಾಡಲಾಗಿದೆ.

ಒಟ್ಟಿನಲ್ಲಿ ರಾಜ್ಯದ ಬಿಜೆಪಿ ನಾಯಕರು ನಾಳೆಯಿಂದ ಪ್ರವಾಸ ಮಾಡಿ ಪ್ರಚಾರ ಮಾಡಲು ಸಿದ್ದತೆ ನಡೆಸಿದ್ದು, ಸದ್ದಲ್ಲದೆ ಸಿದ್ದವಾಗ್ತಿದೆ ಬಿಜೆಪಿ ಗೆಲವಿಗಾಗಿ ಮಾಸ್ಟರ್ ಸ್ಟ್ಯಾಟರ್ಜಿ ವರ್ಕೌಟ್ ಆಗುತ್ತಿರುವಂತೆ ಕಾಣುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights