ತಮ್ಮ ಜಿಲ್ಲಾ ಉಸ್ತುವಾರಿಗಾಗಿ ಸಚಿವರ ಫೈಟ್ : ಯಾರಿಗೆ ಯಾವ ಜಿಲ್ಲೆ..?

ಖಾತೆ ಖ್ಯಾತೆ ಬಳಿಕ ಜಿಲ್ಲೆಯ ಉಸ್ತುವಾರಿಗಾಗಿ ಭಾರೀ ಫೈಟ್ ಶುರುವಾಗಿದೆ. ಇಷ್ಟಪಟ್ಟ ಖಾತೆಯಂತೂ ಸಿಗಲಿಲ್ಲ, ನಮ್ಮ ಜಿಲ್ಲೆಯ ಉಸ್ತುವಾರಿಯಾದರೂ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಈ ಕುರಿತು ತಮ್ಮ ಜಿಲ್ಲಾ ಉಸ್ತುವಾರಿ ನೀಡಲು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ ಸಚಿವರು.

ಆದ್ರೆ ಬಿಜೆಪಿ ಮಾತ್ರ ತನ್ನದೇ ಆದ ಲೆಕ್ಕಾಚಾರಗಳೊಂದಿಗೆ ಸಂಭವನೀಯ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದೆ. ಯಾರು ಯಾವ ಜಿಲ್ಲೆಯ ಉಸ್ತುವಾರಿ ಕೇಳಿದ್ದಾರೆ ಮತ್ತು ಯಾವ ಜಿಲ್ಲೆಗೆ ಯಾರಿಗೆ ನೀಡಿದ್ರೆ ಪಕ್ಷಕ್ಕೆ ಲಾಭವಾಗಲಿದೆ ಎಂಬುದರ ಕುರಿತಾಗಿ ಸಿಎಂ ಆಪ್ತರೊಂದಿಗೆ ಚರ್ಚಿಸುತ್ತಿದ್ದಾರೆ. ಜೆಡಿಎಸ್ ಪ್ರಾಬಲ್ಯ ಇರೋ ಜಿಲ್ಲೆಗಳಿಗೆ ಒಕ್ಕಲಿಗ ಸಚಿವರ ನೇಮಕ, ಲಿಂಗಾಯತ ಸಮುದಾಯ ಪ್ರಾಬಲ್ಯದ ಕಡೆ ಲಿಂಗಾಯತ ಸಚಿವರೇ ಉಸ್ತುವಾರಿ ನೇಮಕ ಪಕ್ಕಾ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಆ ಪ್ರಕಾರ ಸಂಭವನೀಯ ಜಿಲ್ಲಾ ಉಸ್ತುವಾರಿಗಳ ಪಟ್ಟಿ ಸಿದ್ದಪಡಿಸಲಾಗಿದೆ. ಅದರ ಮಾಹಿತಿ ಇಲ್ಲಿದೆ.

ಸಂಭವನೀಯ ಜಿಲ್ಲಾ ಉಸ್ತುವಾರಿಗಳ ಪಟ್ಟಿ:

1. ಆರ್ ಅಶೋಕ್ – ಮಂಡ್ಯ, ರಾಮನಗರ
2. ವಿ.ಸೋಮಣ್ಣ – ಮೈಸೂರು, ಚಾಮರಾಜನಗರ
3. ಡಾ.ಅಶ್ವಥ್ ನಾರಾಯಣ – ಬೆಂಗಳೂರು, ಚಿಕ್ಕಬಳ್ಳಾಪುರ
4. ಸುರೇಶ್ ಕುಮಾರ್ – ಕೊಡಗು
5. ಸಿ.ಟಿ.ರವಿ – ಚಿಕ್ಕಮಗಳೂರು, ಹಾಸನ
6. ಲಕ್ಷ್ಮಣ ಸವದಿ – ಬೆಳಗಾವಿ
7. ಗೋವಿಂದ ಕಾರಜೊಳ – ಬಾಗಲಕೋಟೆ, ವಿಜಯಪುರ

8. ಜಗದೀಶ್ ಶೆಟ್ಟರ್ – ಹುಬ್ಬಳ್ಳಿ ಧಾರವಾಡ, ಉತ್ತರಕನ್ನಡ
9. ಕೋಟಾ ಶ್ರೀನಿವಾಸ್ ಪೂಜಾರಿ – ದಕ್ಷಿಣ ಕನ್ನಡ, ಉಡುಪಿ
10. ಶ್ರೀರಾಮುಲು – ಬಳ್ಳಾರಿ, ಚಿತ್ರದುರ್ಗ
11. ಬಸವರಾಜ ಬೊಮ್ಮಾಯಿ – ಹಾವೇರಿ, ದಾವಣಗೆರೆ
12. ಕೆ. ಎಸ್. ಈಶ್ವರಪ್ಪ – ಕೊಪ್ಪಳ, ಶಿವಮೊಗ್ಗ
13. ಪ್ರಭು ಚೌಹಾಣ್ – ಬೀದರ್
14. ಎಚ್. ನಾಗೇಶ್ – ಕೋಲಾರ
15. ಜೆ .ಸಿ ಮಾಧುಸ್ವಾಮಿ – ತುಮಕೂರು, ಕಲಬುರ್ಗಿ
16. ಸಿ. ಸಿ. ಪಾಟೀಲ್ – ಗದಗ, ರಾಯಚೂರು
17. ಶಶಿಕಲಾ ಜೊಲ್ಲೆ – ಯಾದಗಿರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights