ತಮಿಳು ಚಿತ್ರತಂಡದ ಅನುಮತಿ ಇಲ್ಲದೆ ಟೈಟಲ್ ಬಹಿರಂಗ ಮಾಡಿದ ಲಿಲ್ಲಿ…!

‘ಕಿರಿಕ್ ಪಾರ್ಟಿ’ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಕನ್ನಡ ಮಾತ್ರವಲ್ಲದೆ, ಬಹುಭಾಷೆಗಳಲ್ಲಿ ಅಭಿನಯಿಸಿದ್ದಾರೆ.

ರಶ್ಮಿಕಾ ಮಂದಣ್ಣ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರತಂಡದ ಅನುಮತಿ ಇಲ್ಲದೆ ಟೈಟಲ್ ಬಹಿರಂಗಪಡಿಸಿದ್ದಾರೆ. ಇದೇ ಕಾರಣಕ್ಕೆ ಚಿತ್ರತಂಡ ಅವರ ವಿರುದ್ಧ ಕೆಂಡಾಮಂಡಲವಾಗಿದೆ ಎಂದು ಹೇಳಲಾಗಿದೆ.

ಕಾರ್ತಿ ಜೊತೆಗೆ ರಶ್ಮಿಕಾ ಮಂದಣ್ಣ ತಮಿಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ, ವಿಜಯ್ ಜೊತೆಗೂ ಅವರು ನಟಿಸಲಿದ್ದಾರೆ ಎನ್ನಲಾಗಿದೆ.

ಎಸ್.ಆರ್. ಪ್ರಭು ನಿರ್ಮಾಣದ ಭಾಗ್ಯರಾಜ್ ಕಣ್ಣನ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದು, ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅನ್ನು ವಿಶೇಷವಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಆದರೆ, ರಶ್ಮಿಕಾ ಮಂದಣ್ಣ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ‘ಸುಲ್ತಾನ್’ ಸಿನಿಮಾ ಚಿತ್ರೀಕರಣದ 4ನೇ ದಿನ ಎಂದು ಪೋಸ್ಟ್ ಮಾಡಿಬಿಟ್ಟಿದ್ದಾರೆ. ಇದರಿಂದ ರಶ್ಮಿಕಾ ಅವರ ವಿರುದ್ಧ ಚಿತ್ರತಂಡ ಗರಂ ಆಗಿದೆ ಎಂದು ಹೇಳಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights