ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾಗೆ ಇಡಿ ವಿಚಾರಣೆಯಿಂದ ತಾತ್ಕಾಲಿಕ ರಿಲೀಫ್

ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ವಿಚಾರಣೆಗೆ ಒಳಪಟ್ಟಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪತ್ನಿ ಯಷಾ ಹಾಗೂ ತಾಯಿ ಗೌರಮ್ಮ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಸದ್ಯ ಉಷಾ ಅವರು ನಾಳೆ ವಿಚಾರಣೆಗೆ ಹಾಜರಾಗಬೇಕೆಂದಿಲ್ಲ. ಹಾಗೆಯೇ ಗೌರಮ್ಮ ಅವರಿಗೆ ನೀಡಿದ್ದ ಸಮನ್ಸ್ ಕೂಡ ವಾಪಸ್ ಪಡೆದುಕೊಂಡಿದ್ದು, ಹೊಸದಾಗಿ ಸಮನ್ಸ್ ಕಳುಹಿಸುವುದಾಗಿ ಇಡಿ ಅಧಿಕಾರಿಗಳು ದೆಹಲಿ ಹೈಕೋರ್ಟಿನಲ್ಲಿ ತಿಳಿಸಿದ್ದಾರೆ.

ಇದರಿಂದ ಡಿಕೆಶಿ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಡಿಕೆಶಿ ಪತ್ನಿ ಹಾಗೂ ತಾಯಿ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾ ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಉಷಾ, ಗೌರಮ್ಮ ಪರ ವಕೀಲ ದಯಾನ್ ಕೃಷ್ಣನ್ ನ್ ವಾದ ಮಂಡಿಸಿ, ಬೇರೆ ಕೋರ್ಟ್ ಗಳ ತೀರ್ಪು ಉಲ್ಲೇಖ ಮಾಡುವ ಮೂಲಕ ಒಂದೇ ಪ್ರಕರಣವನ್ನು ಇಡಿ ತಿರುಚಿ ಆರೋಪ ಮಾಡುತ್ತಿದೆ. ಒಂದೇ ಪ್ರಕರಣದಲ್ಲಿ ಡಿಕೆಶಿ ಪತ್ನಿ ಉಷಾ ಮತ್ತು ಗೌರಮ್ಮ ಅವರಿಗೆ ನೊಟೀಸ್ ನೀಡಿದೆ. ಬೇರೆ ಪ್ರಕರಣವೊಂದರಲ್ಲಿ ಗೌರಮ್ಮ ಅವರಿಂದ ಡಿ.ಕೆ ಸುರೇಶ್ ಗೆ ಜಮೀನು ವರ್ಗ ಮಾಡಿರುವ ಹಿನ್ನೆಲೆಯಲ್ಲಿ ನೊಟೀಸ್ ನೀಡಲಾಗಿದೆ. ವಿಚಾರಣೆಯಲ್ಲಿ ಮಹಿಳೆಯರಿಗೆ ವಿನಾಯಿತಿ ಇದೆ ಎಂದು ವಾದಿಸಿದರು.

ಅಲ್ಲದೆ 15 ವರ್ಷಕ್ಕಿಂತ ಕೆಳಗಿರುವ ಮತ್ತು 85 ವರ್ಷದಕ್ಕಿಂತ ಮೇಲ್ಪಟ್ಟವರನ್ನು ಪೋಲೀಸ್ ಸ್ಟೇಷನ್ ಗೆ ವಿಚಾರಣೆಗೆ ಕರೆಯಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಗೌರಮ್ಮ ಮತ್ತು ಉಷಾ ಅವರಿಗೆ ನೊಟೀಸ್ ಕೊಡುವ ಅಗತ್ಯ ಇರಲಿಲ್ಲ ಎಂದು ಕೃಷ್ಣನ್ ವಾದಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights