ಡಿಕೆಶಿ ಬಂಧನ ಖಂಡಿಸಿ : ಇದೇ 11 ರಂದು ವಿವಿಧ ಸಂಘ ಸಂಸ್ಥೆಗಳಿಂದ ‘ರಾಜಭವನ ಚಲೋ’

ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಕಸ್ಟಡಿ ಹಾಗೂ ಕೇಂದ್ರ ಸರ್ಕಾರದ ನಾಯಕರ ನಡೆ ವಿರೋಧಿಸಿ ಬೆಂಗಳೂರಿನಲ್ಲಿ 11 ರಂದು ಬುಧವಾರ ವಿವಿಧ ಸಂಘ ಸಂಸ್ಥೆಗಳು ರಾಜಭವನ ಚಲೋ ಹಮ್ಮಿಕೊಂಡಿವೆ ಎಂದು ಪರಿಷತ್ ಸದಸ್ಯ ರವಿ ಕನಕಪುರದಲ್ಲಿ ತಿಳಿಸಿದ್ದಾರೆ.

ಡಿಕೆಶಿ ಇಡಿ ಕಸ್ಟಡಿ ವಿರೋಧಿಸಿ ಕನಕಪುರದಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಅವರು ಭಾಗವಹಿಸಿದರು. ಇದೇ ವೇಳೆ ಮಾತನಾಡಿದ ಅವರು ನ್ಯಾಷನಲ್ ಕಾಲೇಜ್ ಮೈದಾನದಿಂದ ರಾಜಭವನದವರೆಗೆ 38 ಸಂಘ ಸಂಸ್ಥೆಗಳಿಂದ ಸ್ವಯಂ ಪ್ರೇರಿತವಾಗಿ ರಾಜಭವನ ಚಲೋ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಒಕ್ಕಲಿಗ ಸಮಾಜದ ಸಂಘ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದು ನಂಜಾವಧೂತ ಸ್ವಾಮೀಜಿ, ನಿರ್ಮಲಾನಂದ ಸ್ವಾಮೀಜಿ ಅಲ್ಲದೇ ಹಲವು ಮಠಾಧೀಶರು ಭಾಗಿಯಾಗುತ್ತಾರೆ. ಕನಕಪುರ ತಾಲೂಕಿನಿಂದ 8-20 ಸಾವಿರ ಜನ ರಾಜಭವನ ಚಲೋ ದಲ್ಲಿ ಭಾಗಿಯಾಗಲು ಹೋಗುತ್ತೇವೆ ಎಂದು ತಿಳಿಸಿದರು. ಡಿಕೆ ಶಿವಕುಮಾರ್ ಬಿಡುಗಡೆಯ ತನಕ ನಿರಂತರವಾಗಿ ಕನಕಪುರದಲ್ಲಿ ಪ್ರತಿಭಟನೆ ಮಾಡುತ್ತಿರುತ್ತೇವೆ ಎಂದು ರವಿ ಹೇಳಿದರು.

ಕೇಂದ್ರದ ಬಿಜೆಪಿ ನಾಯಕರು ಡಿಕೆಶಿಯನ್ನ ರಾಜಕೀಯವಾಗಿ ಹಣಿಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಇದಕ್ಕೆಲ್ಲ ರಾಜಿ ಆಗುವುದಿಲ್ಲ. ಕಿರುಕುಳಗಳನ್ನು ಸಹ ಎದುರಿಸ್ತಾರೆ. ತಾವು ದೆಹಲಿಯ ಮತ್ತೆ ಹೋಗಿ ಡಿಕೆಶಿಯನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights