ಟೀಚರ್ ಗೆ ತಿಳಿಯದಂತೆ ಚೀಸ್ ತಿನ್ನೋದು ಹೇಗೆ ಅಂತ ಈ ಹುಡುಗಿಯಿಂದ ಕಲಿಬೇಕು…

ಟೀಚರ್ ಗೆ ತಿಳಿಯದಂತೆ ಚೀಸ್ ತಿನ್ನೋದು ಹೇಗೆ ಅಂತ ಈ ಹುಡುಗಿಯಿಂದ ಕಲಿಬೇಕು ಕಣ್ರಿ..

ಯಾಕೆಂದ್ರೆ.. ಬಾಲಕಿಯೊಬ್ಬಳನ್ನು ಟ್ವಿಟ್ಟರ್ ನಲ್ಲೆಲ್ಲಾ ಜೀನಿಯಸ್ ಅಂತಾ ಹೊಗಳ್ತಿದ್ದಾರೆ. ಆಕೆ ಮಾಡಿರೋ ಐಡಿಯಾವೊಂದು ಎಲ್ಲರ ಮೆಚ್ಚುಗೆ ಗಳಿಸಿದೆ. ಬಾಲಕಿಯ ತಾಯಿ ವೆಲರಿ ಇದನ್ನೆಲ್ಲ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ಬಾಲಕಿಗೆ ಚೀಸ್ ಅಂದ್ರೆ ಪಂಚಪ್ರಾಣವಂತೆ. ಶಾಲೆಗೆ ಹೋದಾಗ ಕ್ಲಾಸ್ ನಲ್ಲೂ ಚೀಸ್ ತಿನ್ನೋ ಆಸೆ. ಬಾಕ್ಸ್ ನಲ್ಲಿಟ್ಟುಕೊಂಡು ಹೋದ್ರೆ ಟೀಚರ್ ಬೈಯ್ಯೋದು ಗ್ಯಾರಂಟಿ ಅನ್ನೋದು ಅವಳಿಗೆ ಗೊತ್ತಿತ್ತು.

ಹಾಗಾಗಿ ಖಾಲಿಯಾಗಿದ್ದ ಲಿಪ್ ಬಾಮ್ ಟ್ಯೂಬಿನಲ್ಲಿ ಚೀಸ್ ತುಂಬಿಸಿಕೊಂಡು ಅದನ್ನೇ ಸ್ಕೂಲ್ ಬ್ಯಾಗಿನಲ್ಲಿಟ್ಕೊಂಡಿದ್ದಾಳೆ. ಮಗಳ ಕರಾಮತ್ತನ್ನು ಗಮನಿಸಿದ ತಾಯಿ ವೆಲರಿ ಅದನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾಳೆ. ಇದನ್ನು 52,000 ಜನರು ಲೈಕ್ ಮಾಡಿದ್ದು, 6000 ಬಾರಿ ರಿಟ್ವೀಟ್ ಮಾಡಲಾಗಿದೆ. ತರಹೇವಾರಿ ಕಮೆಂಟ್ ಗಳು ಕೂಡ ಹರಿದಾಡ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights