ಜಂಬೂಸವಾರಿ ಮೆರವಣಿಗೆ ಮಾರ್ಗದಲ್ಲಿ ಆನೆಗೆ ಮೊಳೆ ಚುಚ್ಚಿ ಅವಾಂತರ….

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತಯಾರಿ, ತಾಲೀಮು ನಡೆಯುತ್ತಿದೆ. ಗಜಪಡೆಯ ಸಂಖ್ಯೆಯಲ್ಲಿ ಕಡಿಮೆಯಾಗಿರುವ ಬೆನ್ನಲ್ಲೇ ಸದ್ಯ ಮೈಸೂರಿನ ರಸ್ತೆಗಳು ದಸರಾ ಗಜಪಡೆಗೆ ಅಪಾಯಕಾರಿಯಾಗಿ ಪರಿಣಮಿಸಿವೆ.

ಹೌದು… ಮೈಸೂರು ದಸರಾದ ಪ್ರಮೂಖ ಆಕರ್ಷಣೆ ಅಂದರೆ ಅದು ಗಜಪಡೆ. ಆದರೆ ಈ ಬಾಋಇ ಅದ್ಯಾಕೋ ಏನೋ ಗಜಪಡೆಗೆ ಎಂದಿಲ್ಲದ ತೊಂದರೆಗಳು ಪದೇ ಪದೇ ಆಗುತ್ತಲೇ ಇವೆ. ಈಗಾಗಲೇ ಅನಾರೋಗ್ಯಕ್ಕೆ ಒಳಗಾದ, ಹೊಂದಿಕೊಳ್ಳದ ಆನೆಗಳನ್ನು ಕಾಡಿಗೆ ಮರಳಿ ಕಳುಹಿಸಲಾಗಿದೆ. ಇದರಿಂದ ಆನೆಗಳ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಹೀಗಿರುವಾಗ  ಜಂಬೂಸವಾರಿ ಮೆರವಣಿಗೆ ಮಾರ್ಗದಲ್ಲಿ ಆನೆಗೆ ಮೊಳೆ ಚುಚ್ಚಿ ಅವಾಂತರ ಸೃಷ್ಟಿಯಾಗಿದೆ.

ಕುಮ್ಕಿ ಆನೆ ಕಾವೇರಿಯ ಕಾಲಿಗೆ ಮೊಳೆ ಚುಚ್ಚಿ ನೋವಿನಿಂದಾಗಿ ಮುಂದೆ ಸಾಗಲಾಗದೇ ತೊಳಲಾಡಿದೆ. ಕೂಡಲೇ ಎಚ್ಚೆತ್ತ ಮಾವುತರು ಕಾವಾಡಿಗಳಿಂದ ಕಾವೇರಿಯ ಕಾಲುಗಳ ಪರಿಶೀಲನೆ ಮಾಡಿದರು.

ಕಾಲಿಗೆ ಚುಚ್ಚಿಕೊಂಡಿದ್ದ ಮೊಳೆ ತೆಗೆದ ನಂತರ ಕಾವೇರಿ ಮುಂದೆ ಸಾಗಿದೆ. ಇದಕ್ಕೆ ಕಡಿವಾಣ ಹೇರಲು  ಗಜಪಡೆ ಸಾಗುವ ಮಾರ್ಗದಲ್ಲಿ ಮುಂಚೂಣಿಯಲ್ಲಿ ಸಾಗುವ ಯಂತ್ರ, ಕಬ್ಬಿಣದ ವಸ್ತುಗಳನ್ನು ಸಂಗ್ರಹಿಸುವತ್ತದೆ. ಇದರಿಂದ ದಸರಾ ಗಜಪಡೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights