ಚಿಟ್‌ಫಂಡ್‌ ಹೆಸರಲ್ಲಿ ಮಹಿಳೆಯರಿಂದ ಕೋಟ್ಯಾಂತರ ಹಣ ಪಂಗನಾಮ….

ಹುಬ್ಬಳ್ಳಿಯಲ್ಲಿ ಚಿಟ್‌ಫಂಡ್‌ ಹೆಸರಲ್ಲಿ ಮಹಿಳೆಯರಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಸಂಗ್ರಹಿಸಿ ವಂಚಿಸಲಾಗಿದೆ. ಪ್ರತಿಷ್ಠಿತ ಕುಟುಂಬಗಳ ಮಹಿಳೆಯರಿಂದ ಹಣ ಸಂಗ್ರಹಿಸಿರುವ ಇಬ್ಬರು ಚಾಲಾಕಿಯರು ಪಂಗನಾಮ ಹಾಕಿದ್ದಾರೆ.

ಶಮ್ಶಾದ್ ಉಮಚಗಿ ಮತ್ತು ಸಬಾ ಉಮಚಗಿ ಎಂಬುವವರು ಇನ್ನೂರಕ್ಕೂ ಹೆಚ್ಚು ಮಹಿಳೆಯರಿಂದ ಹಣ ಸಂಗ್ರಹಿಸಿದ್ದಾರೆ. ಶಮ್ಶಾದ್‌ ಮತ್ತು ಸಬಾ ತಾಯಿ ಮಗಳಾಗಿದ್ದು ಸ್ಥಳೀಯ ಮಹಿಳೆಯರ ಜೊತೆ ನಯವಾಗಿ ಮಾತನಾಡಿಸಿ ಹಣ ಸಂಗ್ರಹಿಸುತ್ತಿದ್ದರು. ಪತ್ರಿ ತಿಂಗಳು 30 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಚೀಟಿ ಹಣವನ್ನು ಕಲೆ ಹಾಕುತ್ತಿದ್ದರು. ಮಧ್ಯಮ ಕುಟುಂಬದ ಮಹಿಳೆಯರನ್ನು ಸೆಳೆದು ಗುಂಪುಗಳನ್ನಾಗಿ ಮಾಡಿ ಹಣ ಹೂಡಿಕೆ ಮಾಡಿಸುತ್ತಿದ್ದರು.

ಇವರನ್ನು ನಂಬಿದ್ದ ಸುನಂದಾ ಎಂಬುವವರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಹಣದ ಅವಶ್ಯಕತೆಯಿದೆ ಎಂದು ಹೇಳಿ ಸುನಂದಾ ಹೆಸರಲ್ಲಿ ಬಂದಿದ್ದ ಚೀಟಿಯ ಹಣವನ್ನು ತಾಯಿಮಗಳು ಲಪಟಾಯಿಸಿದ್ದರು. ಎಲ್ಲ ಸೇರಿ ಒಟ್ಟು 54 ಲಕ್ಷ ರೂಪಾಯಿ ಹಣವನ್ನು ಸುನಂದಾ ಅವರ ಬಳಿಯಿಂದ ಪಡೆದುಕೊಂಡಿದ್ದರು. ಸುನಂದಾ ಹಣ ಮರಳಿ ಕೇಳಿದರೆ ಶಮ್ಶಾದ್‌ ಮತ್ತು ಸಬಾ ಹಣ ವಾಪಸ್ ಕೊಡಲು ನಿರಾಕರಿಸಿದ್ದಾರೆ. ಹಣಕೇಳಲು ಮನೆಗೆ ಹೋದರೆ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ.

ಈ ಕುರಿತು ಸುನಂದಾ ಅವರು ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಮ್ಶಾದ್‌ ಮತ್ತ ಸಬಾರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಂಚಕಿಯರ ಬಂಧನದ ವಿಷಯ ತಿಳಿದ ಹೂಡಿಕೆದಾರರು ಕಂಗಾಲಾಗಿದ್ದಾರೆ. ತಮ್ಮ ಹಣವೂ ನೀರಲ್ಲಿ ಹೋಮ ಮಾಡಿದಂತೆ ಆಗಿರುವುದಕ್ಕೆ ಆತಂಕಕ್ಕೆ ಈಡಾಗಿದ್ದಾರೆ. ತಾಯಿ ಮಗಳನ್ನು ನಂಬಿ ಹಣ ಹೂಡಿಕೆ ಮಾಡಿದ್ದವರು ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ. ವಿಷಯ ಹರಡುತ್ತಿದ್ದಂತೆ ಒಬ್ಬೊಬ್ಬರಾಗಿ ಪೊಲೀಸ್‌ ಠಾಣೆಗೆ ಬಂದು ದೂರು ನೀಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights