ಗಣೇಶ ಪೂಜೆಯಲ್ಲಿ ಪಾಲ್ಗೊಂಡ ಸಲ್ಲು ಭಾಯ್‍ಜಾನ್ : ಡೋಲು ಸದ್ದಿಗೆ ಭರ್ಜರಿ ಸ್ಟೆಪ್ಸ್

ಸಲ್ಲುಭಾಯ್ ಅಂದ್ರೆ ಸಾಕು ಅವರ ಫ್ಯಾನ್ಸ್ ಗೆ ಅದೆನೋ ಖುಷಿ, ಜೋಷ್. ಇನ್ನೂ ಅವರೊಂದು ಸ್ಟೆಪ್ ಹಾಕಿದ್ರೆಂತೂ ಹುಡುಗೀಯರು ಫುಲ್ ಫಿದಾ ಆಗಿ ಹೋಗ್ತಾರೆ.

ಹೌದು… ಈ ಬಾರಿ ಗಣೇಶನ ಹಬ್ಬಕ್ಕೆ ಸಲ್ಲು ಸಕತ್ ಸ್ಟೆಪ್ ಹಾಕಿದ್ದಾರೆ.  ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಗಣೇಶೋತ್ಸವದಲ್ಲಿ ಡೋಲು ಸದ್ದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.

ಸಲ್ಮಾನ್ ಖಾನ್ ಅವರು ತಮ್ಮ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ನಡೆದ ಗಣೇಶ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಗಣೇಶ ವಿಸರ್ಜನೆ ಸಮಯದಲ್ಲಿ ಡೋಲು ಸದ್ದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಸಲ್ಮಾನ್ ಅವರಿಗೆ ನಟಿಯರು ಸಾಥ್ ನೀಡಿದ್ದರು.

ನಟಿಯರಾದ ಸ್ವರಾ ಭಾಸ್ಕರ್ ಹಾಗೂ ಡೇಸಿ ಶಾ ಅವರು ಸಲ್ಮಾನ್ ಖಾನ್ ಅವರ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಅರ್ಪಿತಾ ಅವರ ಮನೆಯ ಗಣೇಶ ಪೂಜೆಯಲ್ಲಿ ಇಡೀ ಖಾನ್ ಕುಟುಂಬಸ್ಥರು ಭಾಗವಹಿಸಿದ್ದರು. ಖಾನ್ ಕುಟುಂಬಸ್ಥರು ಹೊರತಾಗಿ ನಟಿ ಸೋನಾಕ್ಷಿ ಸಿನ್ಹಾ, ಸ್ವರಾ ಭಾಸ್ಕರ್, ಡೇಸಿ ಶಾ, ಅಂಗದ್ ಬೇಡಿ ಹಾಗೂ ಅವರ ಪತ್ನಿ ನೇಹಾ ದುಪಿಯಾ ಸೇರಿದಂತೆ ಹಲವು ಕಲಾವಿದರು ಅರ್ಪಿತಾ ಅವರ ಮನೆಯಲ್ಲಿ ಉಪಸ್ಥಿತರಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights