ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಡೆಯಲು ನಕಲಿ ಸ್ವಾಮೀಜಿ ಸೃಷ್ಠಿ….!

ಮಠದ ಆಸ್ತಿ ಕಬಳಿಸಲು ಯತ್ನ ಮಾಡುತ್ತಿದ್ದ ವ್ಯವಸ್ಥಿತ ಜಾಲ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಡೆಯಲು ನಕಲಿ ಸ್ವಾಮೀಜಿ ಸೃಷ್ಠಿ ಮಾಡಿದೆ. ಈ ಘಟನೆ ಶಿವಮೊಗ್ಗದ ಹಾರನಹಳ್ಳಿಯ ಶ್ರೀರಾಮಲಿಂಗೇಶ್ವರ ಮಠದಲ್ಲಿ ನಡೆದಿದೆ.

ಹೌದು.. ಶಿವಮೊಗ್ಗದ ಹಾರನಹಳ್ಳಿಯ ಶ್ರೀರಾಮಲಿಂಗೇಶ್ವರ ಮಠದ ಆಸ್ತಿ ಕಬಳಿಕೆಗೆ ಯತ್ನ ಮಾಡಲಾಗಿದೆ.ಮಠದ ಹಿರಿಯ ಸ್ವಾಮೀಜಿ ಚಂದ್ರಮೌಳೇಶ್ವರ 2014 ರಲ್ಲಿ ಲಿಂಗೈಕ್ಯರಾಗಿದ್ದರು. ಇವರ ಹೆಸರನ್ನೇ ಇಟ್ಟುಕೊಂಡು ಶಿವಕುಮಾರ ಎಂಬ ವ್ಯಕ್ತಿ ಮಠದ ಆಸ್ತಿ ಕಬಳಿಕೆಗೆ ಯತ್ನ ಮಾಡಿದ್ದಾನೆ.

ಈ ಕಾರ್ಯ ಪೂರ್ಣಗೊಳ್ಳಲು ಆಸ್ತಿ ಕಬಳಿಸಲು ಹುಟ್ಟಿಕೊಂಡ ಜಾಲವೇ ಶಿವಕುಮಾರನನ್ನು ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿಗಳನ್ನಾಗಿ ಮಾಡಿತ್ತು. ಈ ಜಾಲ ಶ್ರೀಚಂದ್ರಮೌಳೇಶ್ವರ ಶಿವಾಚಾರ್ಯ ಓಟರ್ ಐಡಿ, ನಕಲಿ ದಾಖಲೆ ಸೃಷ್ಠಿಸಿದೆ.

ಮಠದ ಆಸ್ತಿಯನ್ನು ಖಾತೆ ಮಾಡಿಸಿಕೊಳ್ಳುವಾಗ ವಿಷಯ ಬೆಳಕಿಗೆ ಬಂದಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮಠದ ಆಸ್ತಿಯನ್ನು ತಾನೇ ಸ್ವಾಮಿ ಎಂದು ಹೋಗಿ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿಕೊಂಡು ಬಂದಿದ್ದ. ಈತನ ಹಿಂದೆ ಬೆಂಗಳೂರಿನ ವಕೀಲರೊಬ್ಬರು ಸೇರಿ ನಾಲ್ಕೈದು ಜನರ ತಂಡವಿದೆ. ಲಿಂಗೈಕ್ಯ ಚಂದ್ರಮೌಳೇಶ್ವರ ಸ್ವಾಮೀಜಿಗೆ  ಡಿ.ಕೆ.ಶಿವಕುಮಾರ್ ಬಹಳ ಹತ್ತಿರವಿದ್ದರು. ಶ್ರೀವಿಶ್ವರಾಧ್ಯ ಸ್ವಾಮೀಜಿ ಪಟ್ಟಾಭಿಶೇಕದ ಸಮಯದಲ್ಲಿ ಡಿಕೆಶಿ ಹಾರನಹಳ್ಳಿಯ ಮಠಕ್ಕೆ ಬಂದಿದ್ದರು . ಮಠದ ಈ ಗಲಾಟೆಗಳನ್ನು ಸಂಧಾನದ ಮೂಲಕ ಬಗೆ ಹರಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ ಡಿ.ಕೆ. ಶಿವಕುಮಾರ್. ಆದರೆ ನಕಲಿ ಸ್ವಾಮಿಜೀ ಮಠದ ಾಸ್ತಿಯನ್ನೇ ಕಬಲಿಸಲು ನೋಡಿದ್ದಾನೆ.

ಚಂದ್ರಮೌಳೇಶ್ವರ ಸ್ವಾಮೀಜಿ ರೀತಿ ವೇಷ ಧರಿಸಿ ಹೊರಡುತ್ತಿದ್ದ ಶಿವಕುಮಾರ ವಿರುದ್ಧ ಚಂದ್ರಮೌಳೀಶ್ವರ ಸ್ವಾಮೀಜಿ ಉತ್ತರಾಧಿಕಾರಿ ಶ್ರೀವಿಶ್ವರಾಧ್ಯ ಸ್ವಾಮೀಜಿ ದೂರು ದಾಖಲಿಸಿದ್ದಾರೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights