ಕೋಟೆನಾಡು ಚಿತ್ರದುರ್ಗದಲ್ಲಿ ಸಚಿವ ಮಾಧುಸ್ವಾಮಿ ವಿರುದ್ಧ ಕೆರಳಿದ ಕುರುಬರು…

ಕೋಟೆನಾಡು ಚಿತ್ರದುರ್ಗದಲ್ಲಿ ಸಚಿವ ಮಾಧುಸ್ವಾಮಿ ವಿರುದ್ಧ ಕುರುಬರು ಕೆರಳಿದ್ದಾರೆ.

ಹೌದು..  ಹಾಲುಮತ ಮಹಾಸಭಾ ಚಿತ್ರದುರ್ಗ ಘಟಕದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ಮಾಡುತ್ತಿರುವ ಹಾಲುಮತದ ಹುಲಿಗಳು  ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು ಚಳ್ಳಕೆರೆ, ಚಿತ್ರದುರ್ಗ ಹೊಸದುರ್ಗದಿಂದ ಬಂದಿದ್ದ ಕುರುಬರು ಮಾಧುಸ್ವಾಮಿ ನಡೆಯನ್ನು ಖಂಡಿಸಿದ್ದಾರೆ.

ನೀಲಕಂಠೇಶ್ವರ ದೇಗುಲದಿಂದ ಜಿಲ್ಲಾಧಿಕಾರಿವರೆಗೆ ಪ್ರತಿಭಟನೆಯಲ್ಲಿ ಸಾಗಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

ವಿವಾದವೇನು..?

ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಅಪಮಾನಿಸಿದ ಆರೋಪದ ಹಿನ್ನೆಲೆಯಲ್ಲಿ ಸಚಿವ ಜಡ.ಸಿ ಮಾಧುಸ್ವಾಮಿ ಅವರ ವಿರುದ್ಧ ಕುರುಬ ಸಮುದಾಯದ ಸಂಘಟನೆಗಳು ಆಕ್ರೋಶಗೊಂಡಿವೆ.

ಹುಳಿಯಾರು ಪಟ್ಟಣದ ಪೆಟ್ರೋಲ್ ಬಂಕ್ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ಸದ್ಯ ವಿವಾದ ುದ್ಬವಿಸಿದ್ದು, ಈ ಕುರಿತು ಚರ್ಚೆ ನಡೆಸಲು ಈಚೆಗೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಶಾಂತಿಸಭೆ ಆಯೋಜಿಸಲಾಗಿತ್ತು. ಆದರೆ, ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಭೆ ಅಪೂರ್ಣಗೊಂಡಿತ್ತು. ಸಭೆಯಲ್ಲಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಸೇರಿದಂತೆ ಕುರುಬ ಸಮಾಜದ ಮುಂಖಡರು ಭಾಗವಹಿಸಿದ್ದರು.

ಈ ಸಭೆಯಲ್ಲಿ ಮಾತನಾಡಿದ್ದ ಕನಕಗುರು ಮಠದ ಈಶ್ವರಾನಂದಪುರಿ ಸ್ವಾಮೀಜಿ, ‘ 15 ವರ್ಷಗಳಿಂದ ಆ ವೃತ್ತವನ್ನು ಕನಕವೃತ್ತ ಎಂದು ಕರೆಯಲಾಗುತ್ತಿದೆ. ಈಗ ಆ ಸ್ಥಳಕ್ಕೆ ಡಾ.ಶಿವಕುಮಾರ ಸ್ವಾಮೀಜಿ ನಾಮಫಲಕ ಹಾಕಲು ಲಿಂಗಾಯತ ಸಮುದಾಯ ಮುಂದಾಗಿದೆ. ಈ ವೃತ್ತ ಕನಕವೃತ್ತ ಎಂದು ಮುಂದುವರೆಯಲಿ ಎಂದು ಕುರುಬ ಸಮುದಾಯದವರು ಒತ್ತಾಯಿಸುತ್ತಿದ್ದಾರೆ’ ಎಂದು ಶಾಂತಿ ಸಭೆಯಲ್ಲಿ ಹೇಳಿದರು.

ಅಲ್ಲದೇ,’ವೃತ್ತಕ್ಕೆ ಕನಕದಾಸರ ಹೆಸರು ಇಡಲೇಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ’ ಎಂದಿದ್ದರು.

ಆಗ ಸಿಟ್ಟಾದ ಮಾಧುಸ್ವಾಮಿ,’ನೀವು ಧಮ್ಕಿ ಹಾಕುತ್ತೀರ. ನಾನೂ ಹೋರಾಟಗಾರನೇ. ಕಾನೂನು ಬಿಟ್ಟು ಹೋಗುವುದಿಲ್ಲ. ಕಾನೂನಿಗೆ ಆಧ್ಯೆತೆ ನೀಡುವೆ. ಇದು ನನ್ನ ಹೋರಾಟ’ ಎಂದರು.

ಸಭೆ ಗದ್ದಲದ ಗೂಡಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ವಿಫಲವಾಯಿತು.

ಸದ್ಯ ೀ ಬೆಳವಣಿಗೆ ಮಾಧುಸ್ವಾಮಿ ಅವರ ವಿರುದ್ಧ ಕುರುಬ ಸಂಘಟನೆಗಳು ತಿರುಗಿ ಬೀಳುವಂತೆ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights