ಕೆ.ಆರ್.ಪೇಟೆ ಉಪಚುನಾವಣೇಲಿ ಅಖಾಡಕ್ಕೀಳಿತಾರಾ ಅನರ್ಹ ಶಾಸಕನ ಪತ್ನಿ….?

ತೀರ್ಪು ಉಲ್ಟಾ ಆದ್ರೇ ಪತ್ನಿ ದೇವಕಿ ಕಣಕ್ಕಿಳಿಸಿ ಆ ಮೂಲಕ ಮತ್ತೆ ಕೆ.ಆರ್.ಪೇಟೆಯಲ್ಲಿ ಪ್ರಭಾವ ಉಳಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ನಡೆದಿದೆ.

ಹೌದು.. ಸುಪ್ರೀಂಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದ್ರೆ ಅನರ್ಹ ಶಾಸಕನ ಪತ್ನಿಗೆ ಟಿಕೇಟ್ ನೀಡುವ ಬಗ್ಗೆ ಮಾತುಕತಡ ನಡೆದಿದೆ. ಈ ಬಗ್ಗೆ ಸಿ.ಎಂ. ಜೊತೆ ಅನರ್ಹ ಶಾಸಕ ನಾರಾಯಣಗೌಡ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮೊನ್ನೆ ನಡೆದ ಆರೋಗ್ಯ ಮೇಳದ ಉಧ್ಘಾಟನೆ ವೇಳೆಯಲ್ಲಿ ಕಾಣಿಸಿಕೊಂಡ ಅನರ್ಹ ಶಾಸಕನ ಪತ್ನಿ ದೇವಕಿ ಈಗಾಗಲೇ ಕ್ಷೇತ್ರದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ವರಿ‌ಮೂಡಿಸಿದ್ದಾರೆ.

ಮೊನ್ನೆ ವೇದಿಕೆಯಲ್ಲಿ ಸಿಎಂ, ಅಶ್ವತ್ಥ್ ನಾರಾಯಣ್, ಅಶೋಕ್, ಸುಮಲತಾ ಅಂಬರೀಶ್ ಜೊತೆ ದೇವಿಕ ಈ ಬಗ್ಗೆ ಮಾತಾಡಿದ್ದಾರೆ.

ಅನರ್ಹ ಶಾಸಕನ ಪತ್ನಿಗೆ ಟಿಕೇಟ್ ನೀಡುವ ಬೇಡಿಕೆ  ಬಿಜೆಪಿಯಿಂದ ಬಹುತೇಕ ಅಸ್ತು ಎನ್ನಲಾಗುತ್ತಿದೆ. ನ-೧೩ ರ ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಚುನಾವಣೆ ಸ್ಪರ್ಧೆಯ ಅಭ್ಯರ್ಥಿ ನಿರ್ಧಾರ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights