ಕೆಮ್ಮಣ್ಣುಗುಂಡಿ ಕಮಾಲ್..!! ಪ್ರವಾಸಿರನ್ನೇ ಮೋಡಿ ಮಾಡಿದ ಸ್ಥಳ

ಕಾಫಿನಾಡು ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿ ಪ್ರಕೃತಿ ಸೌಂದರ್ಯಕ್ಕೆ ಎಲ್ಲಿದೆ ಸಾಟಿ. ನಿಸರ್ಗಪ್ರೇಮಿಗಳ ಆರಾಧ್ಯ ದೈವವಾಗಿ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ ಕೆಮ್ಮಣ್ಣುಗುಂಡಿ. ಇಲ್ಲಿನ ಸೌಂದರ್ಯ ಸವಿಯಲು ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಕರ್ನಾಟಕ ಊಟಿ ಎಂಬ ಖ್ಯಾತಿಗೆ ಪಾತ್ರವಾಗಿರೋ ಕೆಮ್ಮಣ್ಣುಗುಂಡಿ ತನ್ನ ನೈಜ ನೈಸರ್ಗಿಕ ಸೊಬಗಿನಿಂದಲೇ ದೇಶ ವಿದೇಶಗರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಬ್ಯೂಟಿಫುಲ್ ಕೆಮ್ಮಣ್ಣುಗುಂಡಿಯ ಒಂದು ಝಲಕ್ ಇಲ್ಲಿದೆ ನೋಡಿ..


ಆಟ ಮಂಜಿನ ಆಟ, ಆಕಾಶವನ್ನೇ ಚುಂಬಿಸುವಷ್ಟು ಎತ್ತರಕ್ಕೆ ಚಾಚಿಕೊಂಡಿರುವ ಪರ್ವತ ಶ್ರೇಣಿಗಳು. ಎತ್ತ ನೋಡಿದ್ರು ಹಚ್ಚ ಹಸಿರಿನ ವನರಾಶಿ. ಮಂಜಿನೊಂದಿಗೆ ಮಸ್ತ್ ಎಂಜಾಯ್ ಮಾಡ್ತಿರೋ ಪ್ರವಾಸಿಗರು. ಹೌದು, ಇದು ಕರ್ನಾಟಕದ ಊಟಿಯೆಂದು ಕರೆಯಲ್ಪಡುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿಯ ಪ್ರಾಕೃತಿಕ ಸೊಬಗು. ಸಮುದ್ರಮಟ್ಟದಿಂದ ಸುಮಾರು 4,200 ಅಡಿ ಎತ್ತರದಲ್ಲಿರೋ ಕೆಮ್ಮಣ್ಣು ಗುಂಡಿ ನಿಜಕ್ಕೂ ಸುಂದರ ನೈಸರ್ಗಿಕ ತಾಣ. ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಗೆ ಚಾಚಿಕೊಂಡಿದೆ ಕೆಮ್ಮಣ್ಣುಗುಂಡಿ. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋಲದವರೇ ಇಲ್ಲಾ ಅನ್ಸುತ್ತೆ. ಇಲ್ಲಿನ ಈ ಪ್ರಾಕೃತಿಕ ಸೊಬಗು ಎಂತವರನ್ನು ಒಂದು ಕ್ಷಣ ಮೂಕವಿಸ್ಮಿತರನ್ನಾಗಿಸುತ್ತದೆ. ಮಳೆಗಾಲದಲ್ಲಿ ಕೆಮ್ಮಣ್ಣುಗುಂಡಿ ಬಂದ್ರೆ ಸಖತ್ ಎಂಜಾಯ್ ಮಾಡಬಹುದು ಅಂತಾರೆ ಪ್ರವಾಸಿಗರು.

ಈ ವರ್ಷ ಕೆಮ್ಮಣ್ಣುಗುಂಡಿಯಲ್ಲಿ ಹೆಚ್ಚು ಮಳೆಯಾಗುತ್ತಿದೆ. ಮಳೆಯಾಗುತ್ತಿರೋದ್ರಿಂದ ಪ್ರತಿನಿತ್ಯವೂ ಪ್ರಕೃತಿ ಸೌಂದರ್ಯದ ಹೊಸ ಪ್ರಪಂಚವೇ ಸೃಷ್ಟಿಯಾಗಿಸುತ್ತದೆ. ಕ್ಷಣಕ್ಕೂ ಕ್ಷಣಕ್ಕೂ ಬದಲಾಗೋ ಮಂಜಿನ ಸೌಂದರ್ಯ ನೋಡಿ ಪ್ರವಾಸಿಗರು ಮೂಕವಿಸ್ಮಿತರಾಗುತ್ತಾರೆ. ಮಂಜಿನ ಆಟದೊಂದಿಗೆ ಪ್ರವಾಸಿಗರು ಕುಣಿದು ಕುಪ್ಪಳಿಸುತ್ತಾರೆ. ಇನ್ನು ದಾರಿ ಮದ್ಯೆ ಸಿಗೋ ಸಣ್ಣ ಝರಿ ಪಾಲ್ಸ್ ಗಳು ಪ್ರವಾಸಿಗರಿಗೆ ಮತ್ತಷ್ಟು ಖುಷಿ ನೀಡ್ತವೆ. ಇನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಕೆಮ್ಮಣ್ಣುಗುಂಡಿಗೆ ಒಂದು ಕಾಲದಲ್ಲಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ರು, ಆದ್ರೆ, ಇತ್ತೀಚಿನ ದಿನಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಪ್ರವಾಸಿಗರು ದಿನದಿನಕ್ಕೆ ಕಡಿಮೆಯಾಗ್ತಿದ್ದಾರೆ ಅನ್ನೋ ಕೊರಗಿದೆ. ಇನ್ನು ಕೆಮ್ಮಣ್ಣುಗುಂಡಿಗೆ ಫ್ಯಾಮಿಲಿ ಜೊತೆ ಬಂದು ಪ್ರವಾಸಿಗರು ಮಸ್ತ್ ಎಂಜಾಯ್ ಮಾಡ್ತಿದ್ದಾರೆ.

ಸೃಷ್ಟಿಯ ಸೊಬಗು ನಿಜಕ್ಕೂ ಅತ್ಯದ್ಭುತ. ಅಂತಹ ನೈಸರ್ಗಿಕ ಸೊಬಗನ್ನೆ ತನ್ನ ಮೈಯೆಲ್ಲಾ ತುಂಬಿಕೊಂಡಿರೋ ಕೆಮ್ಮಣ್ಣುಗುಂಡಿ ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಕರ್ನಾಟಕದ ಊಟಿ ಎಂದೇ ಕರೆಯುವ ಕೆಮ್ಮಣ್ಣುಗುಂಡಿಯ ಪ್ರಕೃತಿ ಸೌಂದರ್ಯ ಸವಿಬೇಕಂದ್ರೆ ನೀವು ಒಮ್ಮೆ ನೀಡಿ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights