ಕೆಪಿಎಸ್ಸಿಯ ಪರೀಕ್ಷಾ ಅಕ್ರಮದಲ್ಲಿ ಒಎಂಆರ್ ಶೀಟುಗಳು‌ ಅಸಲಿ ಎಂಬುವುದು ಸಾಬೀತು…

ಕೆಪಿಎಸ್ಸಿಯ ಪರೀಕ್ಷಾ ಅಕ್ರಮದಲ್ಲಿ ಒಎಂಆರ್ ಶೀಟುಗಳು‌ ಅಸಲಿ ಎಂಬುವುದು ಈಗ ಸಾಬೀತಾಗಿದೆ. ೨೦೧೮ ಡಿಸೆಂಬರ್ ೨೮ ರಂದು ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಸಿದ್ದೇಶ, ಅಜಯಮೇಹ್ತಾ, ದೇವಪ್ಪ ನೀರಲಕೇರಿ ಎಂಬುವವರು ಸ್ಥಳೀಯ ವ್ಯಕ್ತಿಗಳಿಗೆ ಕೆಪಿಎಸ್ಸಿಯ ವಿವಿಧ ಹುದ್ದೆಗಳಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಮನೆಗೆ ಒಎಂಆರ್ ಶೀಟುಗಳನ್ನು ಲಕ್ಷಾಂತರ ರೂಪಾಯಿ ಮಾರಾಟ ಮಾಡಿ ಉತ್ತರಗಳನ್ನು ಬರೆದಿರುವ ಒಎಂಆರ್ ಶೀಟುಗಳನ್ನು ನೀಡಿದ್ದರು.

ಈ ರೀತಿ ಒಟ್ಟು ೯ ಒಎಂಆರ್ ಶೀಟುಗಳು ಪತ್ತೆಯಾಗಿದ್ದವು, ಮೊದಲು ೨ ಲಕ್ಷ ರೂಪಾಯಿಯ ಮುಂಗಡ ಹಣ ನೀಡಿ ಒಎಂಆರ್ ಶೀಟು ಪಡೆದಿದ್ದ ಅಕ್ಕಮಹಾದೇವಿ ಎಂಬುವವರು ನಂತರ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಳು, ದೂರಿನ್ವಯ ಪೊಲೀಸರು ತನಿಖೆ ನಡೆಸಿದ್ದರು.

ಇದರಲ್ಲಿ ಅಜಯಮೇಹ್ತಾ ಹಾಗು ದೇವಪ್ಪರನ್ನು ಬಂಧಿಸಲಾಗಿತ್ತು, ಆದರೆ ಪ್ರಮುಖ ಆರೋಪಿ ಸಿದ್ದೇಶ ತಲೆ ಮರೆಸಿಕೊಂಡಿದ್ದಾನೆ, ಈ ಮಧ್ಯೆ ಪರೀಕ್ಷೆಯಲ್ಲಿಯ ೯ ಒಎಂಆರ್ ಶೀಟುಗಳು ಅಸಲಿ ಎಂದು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರು ಇವು ಅಸಲಿ ಎಂದು ಹೇಳಿದ್ದಾರೆ, ಈ ಪ್ರಕರಣದ ಬಗ್ಗೆ ಇಷ್ಟರಲ್ಲಿ ಇನ್ನೊಬ್ಬ ಬಂಧಿಸಲಾಗುವುದು. ಈ ಪ್ರಕರಣದಲ್ಲಿ ಕೆಪಿಎಸ್ಸಿ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ತನಿಖೆ ಮುಂದುವರಿದಿದೆ ಎಂದು ರಾಯಚೂರು ಎಸ್ಪಿ ಡಾ ಸಿ ಬಿ ವೇದಮೂರ್ತಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights