ಕುಡಿದ ಅಮಲಿನಲ್ಲಿ ಪಾಪಿ ತಂದೆಯಿಂದ‌ ಮಗಳ ಮೇಲೆ‌ ದೌರ್ಜನ್ಯ…!

ನಾನು ಮಯೂರ, ನಾನಿರುವುದೆ ನಿಮಗಾಗಿ, ಕೆ.ಜಿ.ಎಫ್.‌  ಸಿನಿಮಾ ನೋಡಿದ್ದೀರಾ ಎಂದು ಡೈಲಾಗ್ ಹೊಡೆಯುತ್ತಿರುವ ಈ ವ್ಯಕ್ತಿಯ ವಿಡಿಯೋ ಒಮ್ಮೆ ನೋಡಿ. ಕೈಯಲ್ಲಿ ಸುತ್ತಿಗೆ ಹಿಡಿದು ಅತ್ತಿತ್ತ ಓಡಾಡಿಕೊಂಡು ಬೈದಾಡಿಕೊಂಡು ಈ ವ್ಯಕ್ತಿ ಕುಡಿದ ಅಮಲಿನಲ್ಲಿ ಮಗಳ ಮೇಲೆ ದೌರ್ಜನ್ಯವೆಸಗಿದ್ದಾನೆ.

ಹೌದು.. ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ‌ ಚಂಪಕ‌ನಗರದ ಪ್ರಶಾಂತ್ ನಿಂದ‌ ಕೃತ್ಯ ಆರೋಪ ಮಾಡಲಾಗಿದೆ. ದುಷ್ಟ ತಂದೆ ಕೆಜಿಎಫ್ ಸ್ಟೈಲ್ ಎಂದು ಸುತ್ತಿಗೆಯಿಂದ ಮಗಳ ಮೇಲೆ ಹಲ್ಲೆಮಾಡಿದ್ದಾನೆ. ಹೆಣ್ಣು ಮಕ್ಕಳೇ ಹುಟ್ಟಿದ್ದೀರಾ ಎಂದು ಕುಡಿದು ಬಂದು ಮಡದಿ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜನ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೈಯಲ್ಲಿ ದೊಡ್ಡ ಸುತ್ತಿಗೆ ಹಿಡಿದು ಮಗಳಿಗೆ ಹಲ್ಲೆಮಾಡೋ ಹಾಗೂ  ಪತ್ನಿ ಬಿಡಿಸಲೆತ್ನಿಸಿದ್ರೂ ಸುಮ್ಮನಾಗದೆ ದೌರ್ಜನ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights