ಕಾವೇರಿ ನದಿ ದಂಡೆಯಲ್ಲಿ ಪಿತೃಪಕ್ಷದ ಆಚರಣೆ : ಅಗಲಿದ ಪಿತೃಗಳಿಗೆ ತಿಲತರ್ಪಣ ಬಿಟ್ಟು ಪ್ರಾರ್ಥನೆ

ಇಂದು ಮಹಾಲಯ ಅಮವಾಸ್ಯೆ.ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯ ಬಳಿ ಪಿತೃಪಕ್ಷ ಆಚರಣೆ ಜೋರಾಗಿತ್ತು.ಪಿತೃಪಕ್ಷದ ಪೂಜೆಗಾಗಿರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನ್ರು‌ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ರು. ಅಗಲಿದ ತಮ್ಮ ಪಿತೃಗಳಿಗೆ ತರ್ಪಣ ಬಿಟ್ಟು ಸದ್ಗತಿಗಾಗಿ ಪಾರ್ಥಿಸಿ ಪಿತೃಪಕ್ಷದ ಪೂಜೆ ಸಲ್ಲಿಸಿದ್ರು.

ಹೌದು! ಹೀಗೆ ನದಿ ದಂಡೆಯ ಮೇಲೆ ಪಿಂಡ ಪ್ರಧಾನ‌ ಮಾಡ್ತಿರೋ ಆಸ್ತಿಕ ಜನ್ರು.ನದಿ ಪಕ್ಕದಲ್ಲಿ ಸಾಲು ಸಾಲು ನಿಂತಿರೋ ವಾಹನಗಳು, ನದಿ ದಂಡೆಯಲ್ಲಿ ಎಲ್ಲೆಡೆ ನಡೆಯುತ್ತಿರೋ ಪೂಜಾ ಕೈಂಕರ್ಯ.ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯ ಪ್ರದೇಶದ ಬಳಿ. ಇಂದು‌ ಮಹಾಲಯ ಅಮವಾಸ್ಯೆ ಕಾರಣದಿಂದ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯ ಪ್ರದೇಶಗಳಾದ ಸ್ನಾನಘಟ್ಟ,ಪಶ್ವಿಮವಾಹಿನಿ, ಘೋಸಾಯ್ ಘಾಟ್,ಸಂಗಮ್ ದಲ್ಲಿ ಆಸ್ತಿಕ ಜನ್ರು ಪಿತೃಪಕ್ಷದ ಪೂಜೆ ನಡೆಸಿದ್ರು.ಮಹಾಲಯ ಅಮವಾಸ್ಯೆ ಕಾರಣದಿಂದ ರಾಜ್ಯದ ವಿವಿದೆಡೆಯಿಂದ ಬಂದಿದ್ದ ನೂರಾರು ಜನ್ರು ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯ‌ ಮೇಲೆ ಪಿತೃ ಪಕ್ಷದ ಪೂಜೆ ನಡೆಸಿ, ಅಗಲಿದ ಕುಟುಂಬದ ಹಿರಿಯರಿಗೆ ಪಿಂಡ ಪ್ರಧಾನ ಮಾಡಿ ತಿಲತರ್ಪಣ ಕೊಟ್ಟು ಸದ್ಗತಿಗಾಗಿ ಪ್ರಾರ್ಥಿಸಿದ್ರು.

ಇನ್ನು ರಾಜ್ಯದ ವಿವಿಧೆಡೆಯಿಂದ ನೂರಾರು ಜನ್ರು ಶ್ರೀರಂಗಪಟ್ಟಣಕ್ಕೆ ತಮ್ಮ ವಾಹನಗಳಲ್ಲಿ ಬಂದಿದ್ರಿಂದ ನದಿ ದಂಡೆಯ ಪ್ರದೇಶದ ಬಳಿ‌ ವಾಹನಗಳು ಸಾಲು ಸಾಲು ನಿಂತಿದ್ದವು.‌ಅಲ್ದೆ ರಸ್ತೆಯಲ್ಲಿ ಕೂಡ ವಾಹನ ಸಂಚಾರ ದಟ್ಟಣೆ ಕೂಡ ಜೋರಾಗಿ ಇತ್ತು. ನದಿ ದಂಡೆಯಲ್ಲಿ ವೈದಿಕ ಅರ್ಚಕರು ಬಂದಿದ್ದ ಜನರಿಗೆ ಪಿತೃಪಕ್ಷದ ಪೂಜಾ ಕೈಂಕರ್ಯ ಮಾಡಿಕೊಟ್ಟು ಸ್ವಲ್ಪ ಕಾಸು ಮಾಡಿಕೊಂಡ್ರು.ಕಾವೇರಿ ನದಿ ದಂಡೆಯಲ್ಲಿ ಪಿಂಡ ಪ್ರಧಾನ‌ ಮಾಡಿ ತಿಲ ತರ್ಪಣ ಬಿಟ್ರೆ,ಅಗಲಿದ ಪೂರ್ವಜರಿಗೆ ಒಳಿತಾಗುತ್ತದೆ ಅನ್ನೋ ನಂಬಿಕೆ ಇದೇ.ಈ ಕಾರಣಕ್ಕೆ ಬಂದಿದ್ದ ಜನ್ರು ಧಾರ್ಮಿಕ  ಪೂಜಾ ಕಾರ್ಯ‌ ನೆರವೇರಿಸಿ ಶ್ರೀರಂಗನಾಥನ ದರ್ಶನ ಪಡೆದು ತೆರಳುತ್ತಾರೆ.ಮಹಾಲಯ ಅಮವಾಸ್ಯೆ ಸಂಧರ್ಭದಲ್ಲಿ ಅಗಲಿದ ಪೂರ್ವಜರಿಗೆ ಶಾಂತಿ ಮಾಡಿ ಎಡೆ ಕೊಡುವ ಸಂಪ್ರದಾಯ ಹಿಂದೂ ಧರ್ಮದಲ್ಲಿದ್ದು,ಆ ಕಾರಣಕ್ಕೆ ಇಲ್ಲಿಗೆ ಹೆಚ್ಚು ಜನ್ರು ಆಗಮಿಸಿದ ತಮ್ಮ ತಮ್ಮ ಸಂಪ್ರದಾಯದಂತೆ ಶ್ರಾದ್ದ ಕಾರ್ಯ ನಡೆಸಿ ಹೋಗ್ತಾರೆ. ಇದ್ರಿಂದ ಕುಟುಂಬದವರಿಗೆ ಶಾಂತಿ ಪ್ರಾಪ್ತಿಯಾಗುತ್ತೆ.‌ ವರುಷಕೊಮ್ಮೆ ಮಹಾಲಯ ಅಮವಾಸ್ಯೆ ಸಮಯದಲ್ಲಿ ಬರುವ ನಮ್ಮ ಪೂರ್ವಜರು ನಮಗೆ ಹರಿಸಿ ಹೋಗ್ತಾರೆ ಅಂತಾರೆ ಪೂಜಾ ಕೈಂಕರ್ಯ ನಡೆಸಿಕೊಡುವ ಅರ್ಚಕರು.

ಒಟ್ಟಾರೆ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ನೂರಾರು ಜನ್ರು ಇಂದು‌ ಪಿತೃಪಕ್ಷದ ಪೂಜೆಯ ಮೂಲಕ ಅಗಲಿದ ತಮ್ಮಕುಟುಂಬದ ಪೂರ್ವಜರಿಗೆ ಶಾಂತಿ ಕೋರಿ ಸದ್ಗತಿಗೆ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights