ಕಂಪ್ಲಿ ಮಾಜಿ ಶಾಸಕ ಸುರೇಶ ಬಾಬು ವಿರುದ್ಧ ಎಸಿಬಿಗೆ ದೂರು….!

ಕಂಪ್ಲಿ ಮಾಜಿ ಶಾಸಕ ಟಿ. ಹೆಚ್.ಸುರೇಶ ಬಾಬು ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಎಸಿಬಿಗೆ ದೂರು ಕೊಡಲಾಗಿದೆ. 2008 ರಲ್ಲಿ ಸುರೇಶ ಬಾಬು ಕೇವಲ 1.76 ಕೋಟಿ ಆಸ್ತಿ ಘೋಷಿಸಿದ್ದರು. ಆದರೆ 2018ರಲ್ಲಿ 16 ಕೋಟಿ ಆಸ್ತಿನ್ನ ಘೋಷಿಸಿಕೊಂಡಿದ್ದಾರೆ. 65 ವರ್ಷದ ತಾಯಿ ಹಾಗೂ ಪತ್ನಿ ಹೆಸರಲ್ಲಿ ಸೇರಿದಂತೆ ಇತರ ಸಂಬಂಧಿಗಳ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿರುವ ಆರೋಪವಿದೆ. ಈ ಹಿಂದೆ ಆದಾಯ ತೆರಿಗೆ ಇಲಾಕೆ ಸುರೇಶ ಬಾಬು ಅವರಿಗೆ 84 ಲಕ್ಷಕ್ಕೆ ಆದಾಯದ ಮೂಲ ಕೇಳಿತ್ತು. ಪಿತ್ರಾರ್ಜಿತ ಆಸ್ತಿ ಹಾಗೂ ಕೃಷಿ ಆದಾಯವಿಲ್ಲದಿದ್ದರೂ 40ಕ್ಕೂ ಹೆಚ್ಚು ಅಕ್ರಮ ಆಸ್ತಿ ಗಳಿಸಿರುವ ಆರೋಪವಿದೆ. ಶಾಸಕ ಸ್ಥಾನ ದುರುಪಯೋಗ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಮಾಡಿದ ಆರೋಪದ ಮೇಲೆ ಸುರೇಶ ಬಾಬು ವಿರುದ್ದ ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಎಸಿಬಿಗೆ ದೂರು ಕೊಟ್ಟಿದ್ದಾರೆ.

ಸುರೇಶ್ ಬಾಬು ಹಿನ್ನೆಲೆ.. ಯಾವ ರಾಜಕೀಯ ನಾಯಕನೂ ಅಲ್ಲದ , ಯಾವ ರಾಜಕೀಯ ಹಿನ್ನೆಲೆ ಇಲ್ಲದ ಕಾಲೇಜ್ ಮುಗಿಸಿಕೊಂಡು ಓಡಾಡಿಕೊಂಡು ಇದ್ದ ಸುರೇಶ ಬಾಬು ಎಂಬ ಯುವಕನನ್ನ ಗಾಲಿ ಜನಾರ್ಧನ ರೆಡ್ಡಿ 2008 ರಲ್ಲಿ ರಾಜಕೀಯಕ್ಕೆ ಕರೆದುಕೊಂಡು ಬಂದರು. ಅಷ್ಟೇ ಅಲ್ಲದೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸಿ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದ್ರು. ರಾಜಕೀಯ ಗಂಧ-ಗಾಳಿ ಗೊತ್ತಿಲ್ಲದ ಯುವಕನಿಗೆ ಜನಾರ್ಧನ ರೆಡ್ಡಿ ಕಂಪ್ಲಿ ಕ್ಷೇತ್ರದ ಜವಾಬ್ದಾರಿಯನ್ನ ಆಟವಾಡಿಕೊಂಡು ಇದ್ದ ಹುಡುಗನ ಕೈಗೆ ಕೊಡಸಿದ್ದರು.

ಆದ್ರೆ ಮುಂದೊಂದು ದಿನ ಗಾಲಿ ಜನಾರ್ಧನ ರೆಡ್ಡಿ ವಿಷ ವರ್ತುಲದಲ್ಲಿ ಸಿಕ್ಕಿ ಹಾಕಿಕೊಳ್ಳಲು ಸುರೇಶ್ ಬಾಬು ಪ್ರಮುಖ ಕಾರಣವಾಗುತ್ತಾನೆ. ಉಂಡ ಮನೆಗೆ ದ್ರೋಹ ಬಗೆದು ರಾಜಕೀಯಕ್ಕೆ ಕರೆದುಕೊಂಡು ಬಂದ ಗುರುವನ್ನೆ ನಿರ್ಲಕ್ಷ್ಯ ಮಾಡಿ ದಿನ ಬೆಳಗಾಗುವುದರಲ್ಲಿ ಕೋಟಿ-ಕೋಟಿ ಅಕ್ರಮ ಆಸ್ತಿ ಮಾಡಿದ್ದಾನೆ.

ಗಾಲಿ ಜನಾರ್ಧನ ರೆಡ್ಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸುರೇಶ್ ಬಾಬುವಿಗೆ ಜಿಲ್ಲೆಯನ್ನ ನೋಡಿಕೊಳ್ಳುವ ಇನ್ ಚಾರ್ಜ್ ಕೊಟ್ಟಿದ್ದರು. ಆಗ ಜನಾರ್ಧನ ರೆಡ್ಡಿಯವರ ಹೆಸರು ಹೇಳಿಕೊಂಡೆ ನೂರಾರು ಕೋಟಿ ಅಕ್ರಮ ಆಸ್ತಿ ಮಾಡಿಕೊಂಡಿದ್ದ. ಅಂದು ಸುರೇಶ ಬಾಬುವಿನ ನೇತ್ರತ್ವದಲ್ಲೆ ಗಣಿಗಾರಿಕೆ ನಡೆಯುತ್ತಿತ್ತು. ಇವನನ್ನ ನಂಬಿದ್ದ ಜನಾರ್ಧನ ರೆಡ್ಡಿ ಯಾವ ಲೆಕ್ಕವನ್ನೂ ಕೇಳುತ್ತಿರಲಿಲ್ಲ. ಆದ್ರೆ ಕ್ರಮೇಣ ಜನಾರ್ಧನ ರೆಡ್ಡಿಯವರಿಗೆ ಉರುಳಾದ ಸುರೇಶ್ ಬಾಬು ರೆಡ್ಡಿಯವರ ಇಂದಿನ ಕಷ್ಟಕ್ಕೆ ಕಾರಣನಾಗಿದ್ದಾನೆ. ಇವನ ಮೇಲೆ ನಂಬಿಕೆ ಇಟ್ಟಿದ್ದ ಗಾಲಿ ಜನಾರ್ಧನ ರೆಡ್ಡಿಗೆ ಕೈ ಕೊಟ್ಟಿದ್ದಾನೆ. ಬಳ್ಳಾರಿ ಜಿಲ್ಲೆಯಲ್ಲಿ ಶ್ರೀಮಂತ ಯುವ ರಾಜಕೀಯ ನಾಯಕನಾಗಿದ್ದು, ಹಣದ ಮದದಲ್ಲಿ ಮೆರೆಯುತ್ತಿದ್ದಾನೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿಕೊಳ್ಳಲು ಪ್ರಯತ್ನಿಸಿ ಅನೇಕ ಕಾಂಗ್ರೆಸ್ ನಾಯಕರನ್ನ ಬೇಟಿಯಾಗಿದ್ದ.

ಬಳ್ಳಾರಿಯ ಮೈನಿಂಗ್ ವ್ಯವಹಾರದಲ್ಲಿ ಅನೇಕ ರಾಜಕೀಯ ನಾಯಕರು ಇದ್ದಾರೆ. ಅದರಲ್ಲಿ ಪ್ರಮುಖವಾಗಿ ಈ ಸುರೇಶ್ ಬಾಬು ಕೂಡ ಒಬ್ಬನಾಗಿದ್ದು, ಆದರೆ ಗಾಲಿ ಜನಾರ್ಧನ ರೆಡ್ಡಿ ಈ ವಿಚಾರದಲ್ಲಿ ಯಾರ ಹೆಸರನ್ನೂ ಹೇಳದೆ ಎಲ್ಲ ಆರೋಪಗಳನ್ನ ತಮ್ಮ ಮೇಲೆ ಹಾಕಿಕೊಂಡು ಉಳಿದವರನ್ನ ಬಚಾವ್ ಮಾಡಿದ್ರು. ಗಾಲಿ ಜನಾರ್ಧನ ರೆಡ್ಡಿ ತಾವು ನಂಬಿದ ಆತ್ಮಿಯರನ್ನ ರಕ್ಷಣೆ ಮಾಡಲು ತಾವೇ ಜೈಲು ವಾಸವನ್ನ ಅನುಭವಿಸಿದ್ರು.
ಯಾವಾಗ ಜನಾರ್ದನ ರೆಡ್ಡಿ ಪ್ರಾಬಲ್ಯ ಕಡಿಮೆ ಆಯಿತೊ ಆಗ ನಿಧಾನವಾಗಿ ಸುರೇಶ್ ಬಾಬು ಜನಾರ್ದನ ರೆಡ್ಡಿಯವರ ಟೀಮ್ ನಿಂದ ದೂರವಾಗತೊಡಗಿದ. ನಂತರ ಈತನ ಚಿಕ್ಕಪ್ಪ ಶ್ರೀರಾಮುಲು ಟೀಮ್ ನಲ್ಲಿ ಹೆಚ್ಚು ಕಾಣಿಸಿಕೊಳ್ಳತೊಡಗಿದ. ಜನಾರ್ಧನ ರೆಡ್ಡಿ ಹೆಸರಿನಿಂದ ಜಿಲ್ಲೆಯಲ್ಲಿ ಸಾಕಷ್ಟು ದುಡ್ಡು ಮಾಡಿಕೊಂಡವನು ಅವರಿಂದ ದೂರುವಾಗಿದ್ದ. ಬಳ್ಳಾರಿಯ ಪ್ರತೀಷ್ಟಿತ ಜೈನ್ ಕಾಲೇಜಿನಲ್ಲಿ ಪಾಲುದಾರಿಕೆ, ಬಳ್ಳಾರಿ ನಗರದ ಮದ್ಯ ಭಾಗದಲ್ಲಿ ಮುಕ್ಕಾಲು ಎಕರೆ ಪ್ರದೇಶದಲ್ಲಿ ಕಚೇರಿ, ಹಾಗೂ ಗೆಸ್ಟ್ ಹೌಸ್ ಮಾಡಿಕೊಂಡಿದ್ದಾನೆ. ಡೀಲ್ ಮಾಡಲು ಕಚೇರಿ ಮಾಡಿಕೊಂಡಾದ್ದಾನೆ ಅನ್ನೊ ಆರೋಪಗಳಿವೆ. ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಆಶಿರ್ವಾದ ಇಲ್ಲದೆ ಚುನಾವಣೆ ಗೆಲ್ಲುತ್ತೆನೆ ಅಂತ ದುರಹಂಕಾರದಲ್ಲಿ ಇದ್ದವನಿಗೆ ಜನರೆ ಸೋಲಿನ ರುಚಿ ತೋರಿಸಿದ್ದಾರೆ.

ರಾಜ್ಯಸರ್ಕಾರದಲ್ಲಿ ಈಗ ಶ್ರೀರಾಮುಲು ಸಚಿವರಾಗಿದ್ದಾರೆ. ಶ್ರೀರಾಮುಲು ಅವರ ಹೆಸರಿನಿಂದ ಬಳ್ಳಾರಿ ಜಿಲ್ಲೆಯಲ್ಲಿ ಸುರೇಶ್ ಬಾಬು ಮತ್ತೆ ಅಟ್ಟಹಾಸ ಮೆರೆಯುತ್ತಿದ್ದಾನೆ ಎಂಬ ಆರೋಪಗಳು ಕೇಳಿಬರುತ್ತಿವೆ. ಶ್ರೀರಾಮಲು ಅವರು ಎಚ್ಚೆತ್ತುಕೊಳ್ಳದಿದ್ದರೆ ಸುರೇಶ್ ಬಾಬುವಿನಿಂದ ಜನಾರ್ದನ ರೆಡ್ಡಿಗೆ ಆದ ಅಪಾಯ ರಾಮುಲು ಅವರಿಗೆ ತಪ್ಪಿದ್ದಲ್ಲ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಯಾವಾಗ ಶ್ರೀರಾಮಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕೈಜಾರಿ ಸವದಿ ಅವರ ಪಾಲಾಯಿತೊ, ಅವತ್ತಿನಿಂದ ಸುರೇಶ್ ಬಾಬು ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾನಂತೆ.
ಸುರೇಶ್ ಬಾಬು ಬೇಲ್ ಡೀಲ್ ಪ್ರಕರಣ ಸೇರಿಂದಂತೆ ಇತರ ವ್ಯವಹಾರಗಳ ಪ್ರಮುಖ ಆರೋಪಿಯಾಗಿದ್ದಾನೆ. ಇವನಿಂದಲೆ ಜನಾರ್ದನ ರೆಡ್ಡಿ ಅಪಾಯಕ್ಕೆ ಸಿಲುಕಿಕೊಂಡಿದ್ದು ಅನ್ನೊ ಆರೋಪಗಳಿವೆ.
ಇಂದು ಶ್ರೀರಾಮಲು ಅಧಿಕಾರಕ್ಕೆ ಬರುತ್ತಿದ್ದಂತೆ ಬಳ್ಳಾರಿಯಲ್ಲಿ ಮತ್ತೆ ಸುರೇಶ್ ಬಾಬುವಿನ ಹಾವಳಿ ಹೆಚ್ಚಾಗಿದೆ. ಇಂತವರನ್ನ ದೂರ ಇಟ್ಟರೆ ಶ್ರೀರಾಮುಲು ಅವರ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. ಸಂಬಂಧಿಕ ಅನ್ನೊ ಪ್ರೀತಿಯಲ್ಲಿ ಜೊತೆಗೆ ಸೇರಿಸಿಕೊಂಡರೆ ಜನಾರ್ದನ ರೆಡ್ಡಿ ಅವರಿಗೆ ಬಂದ ಸ್ಥಿತಿ ಶ್ರೀರಾಮಲು ಅವರಿಗೆ ಬರುವ ದಿನಗಳು ದೂರವಿಲ್ಲ. ಶ್ರೀರಾಮುಲು ಅವರ ಹೆಸರಿನಿಂದ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವ ಸುರೇಶ್ ಬಾಬುವಿನ ವಿರುದ್ದ ಈಗಾಗಲೆ ಬಳ್ಳಾರಿಯ ಜನ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರೇಶ್ ಬಾಬು ತನ್ನ ಚಿಕ್ಕಪ್ಪ ಶ್ರೀರಾಮುಲು ಪ್ರಭಾವ ಬಳಸಿ ಜಿಲ್ಲೆಯಲ್ಲಿ ತನಗೆ ಬೇಕಾದ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಇದು ಸ್ಥಳಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಜಿಲ್ಲೆಯ ಹಿರಿಯ ನಾಯಕರ ಮಾತು ಕೇಳದೆ ತನ್ನದೆ ದರ್ಬಾರ ನಡೆಸುತ್ತಿರುವ ಇವನ ವಿರುದ್ದ ಸಾಕಷ್ಟು ದೂರುಗಳು ಕೇಳಿ ಬಂದಿವೆ.
ಏನೂ ಇಲ್ಲದ ಸುರೇಶ್ ಬಾಬು ಶಾಸಕನಾದ ನಂತರ ನೂರಾರು ಕೋಟಿಯ ವಡೆಯನಾಗಿದ್ದಾನೆ. ಅದೆ ಕಾರಣದಿಂದ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಎಸಿಬಿಗೆ ದೂರು ಕೊಡಲಾಗಿದೆ. ಸುರೇಶ್ ಬಾಬು ಮತ್ತೆ ಜೈಲು ಸೆರುತ್ತಾನೆ ಅನ್ನೊ ಮಾತುಗಳು ಕೇಳಿ ಬರುತ್ತಿವೆ.

ತಮ್ಮ ಜೊತೆಯಲ್ಲಿ ಇದ್ದವರನ್ನ ರಕ್ಷಣೆ ಮಾಡಲು ತಾನು ಮಾಡದೆ ಇರುವ ತಪ್ಪಿಗೆ ಜೈಲು ಅನುಭವಿಸಿದ ಜನಾರ್ದನ ರೆಡ್ಡಿ ಎಲ್ಲ ಕಷ್ಟಗಳನ್ನೂ ನುಂಗಿಕೊಂಡು ನೀಲಕಂಠನಂತೆ ಸುಮ್ಮನಿದ್ದಾರೆ. ತಾವೆ ಕರೆ ತಂದು ದಾರಿ ತೋರಿಸಿಕೊಟ್ಟವರು ಇಂದು ರೆಡ್ಡಿಯವರ ಹಾದಿಯಲ್ಲಿ ಕಲ್ಲು ಮುಳ್ಳುಗಳನ್ನ ಹಾಕುತ್ತಿದ್ದಾರೆ. ಇಂತವರಿಗೆ ಮುಂದೆ ಒಂದು ದಿನ ರೆಡ್ಡಿಯವರು ಸರಿಯಾಗಿ ಉತ್ತರ ಕೊಡುತ್ತಾರೆ ಅಂತ ರಾಜ್ಯದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights