ಉಪಚುನಾವಣೆಗೆ ಸ್ಪರ್ಧಿಸಲಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ…

ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ಅನರ್ಹಗೊಂಡಿದ್ದ ಶಾಸಕರು ಇಂದು ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಬಹುತೇಕ ಎಲ್ಲರಿಗೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯಲಿದ್ದಾರೆ.

ಈ ನಡುವೆ ಜಾತ್ಯಾತೀತ ಜನತಾ ದಳ(ಜೆಡಿಎಸ್) ಉಪಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ ಕುಮಾರಸ್ವಾಮಿ ಅವರು ಪ್ರಕಟಿಸಿದರು. ಹೊಸಕೋಟೆಯಲ್ಲಿ ಶರತ್​ ಬಚ್ಚೇಗೌಡಗೆ ಬೆಂಬಲಿಸಲಿದ್ದು, ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ನಾಳೆ ಘೋಷಿಸುವುದಾಗಿ ತಿಳಿದ್ದಾರೆ.

ಅಭ್ಯರ್ಥಿಗಳ ಪಟ್ಟಿ :-

1.ಯಲ್ಲಾಪುರ – ಚೈತ್ರಾ ಗೌಡ

2.ಹಿರೇಕೆರೂರು -ಉಜನಪ್ಪ ಜಟ್ಟೆಪ್ಪ ಕೋಡಿಹಳ್ಳಿ

3.ರಾಣೆ ಬೆನ್ನೂರು – ಮಲ್ಲಿಕಾರ್ಜುನ ಹಲಗೇರಿ

4.ವಿಜಯನಗರ – ಎನ್.ಎಂ.ನಬಿ

5.ಚಿಕ್ಕಬಳ್ಳಾಪುರ – ಕೆ.ಪಿ.ಬಚ್ಚೇಗೌಡ

6.ಕೆ.ಆರ್ ಪುರಂ – ಸಿ.ಕೃಷ್ಣಮೂರ್ತಿ

7.ಯಶವಂತಪುರ – ಟಿ.ಎನ್ ಜವರಾಯಿಗೌಡ

8.ಶಿವಾಜಿನಗರ – ತನ್ವೀರ್ ಅಹ್ಮದ್​​ವುಲ್ಲಾ

9.ಹೊಸಕೋಟೆ – ಪಕ್ಷೇತರ ಅಭ್ಯರ್ಥಿಗೆ ಬೆಂಬಲ

10.ಕೆ.ಆರ್.ಪೇಟೆ – ದೇವರಾಜ್ ಬಿ.ಎಲ್

11.ಹುಣಸೂರು – ಸೋಮಶೇಖರ್

12.ಶಿವಾಜಿನಗರ – ತನ್ವೀರ್ ಅಹ್ಮದ್ ವುಲ್ಲಾ

ಜೆಡಿಎಸ್​ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದ ಸುದ್ದಿಗೋಷ್ಠಿ ಮಾತನಾಡಿದ ಅವರು, ದೇವೇಗೌಡರು ನಿನ್ನೆ ಬಿಜೆಪಿಗೆ ಬಹುಮತ ಬರಲಿದೆ ಎಂದಿದ್ದಾರೆ. ಹಾಗೆಂದ ಮಾತ್ರಕ್ಕೆ ನಾವು ಬಿಜೆಪಿಗೆ ಶರಣಾಗಿದ್ದೇವೆ ಎಂದಲ್ಲ. ಅವರು ರಾಜಕೀಯ ವಿಶ್ಲೇಷಣೆ ಮಾಡಿದ್ದಾರೆ ಅಷ್ಟೇ. ನಾವು ಯಾವುದೇ ಪಕ್ಷದೊಂದಿಗೆ ರಾಜಿ  ಶರಣಾಗುವ ಪ್ರಶ್ನೆ ಇಲ್ಲ. ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳದೇ, ಎಲ್ಲಾ ಕ್ಷೇತ್ರಗಳಲ್ಲಿಯೂ ನಾವು ಸ್ಪರ್ಧಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights