ಈ ಬಾರಿಯೂ ಮರುಕಳಿಸಿದ ’ಗೋ ಬ್ಯಾಕ್‌ ಮೋದಿ’ ಹ್ಯಾಷ್‌ಟ್ಯಾಗ್‌ : ದ್ರಾವಿಡರ ನಾಡಿನಲ್ಲಿ ಮೋದಿಗೆ ಮಹಾವಿರೋಧ

ಇಂದು ಪ್ರಧಾನಿ ಮೋದಿಯವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ರೊಡನೆ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ. ಷಿ ಜಿನ್‌ಪಿಂಗ್‌ರವರು ಚನ್ನೈಗೆ ತೆರಳಿ ಅಲ್ಲಿಂದ ಸಂಜೆ 5ಕ್ಕೆ ಮಾಮಲ್ಲಪುರಂಗೆ ಉಭಯನಾಯಕುರು ಹೋಗುವ ಯೋಜನೆಯಾಗಿದೆ. ಆದರೆ ಈ ಮಹತ್ವದ ಭೇಟಿಗೆ ಸ್ವಾಗತಕ್ಕಿಂತ ವಿರೋಧವೇ ಹೆಚ್ಚಾಗಿದೆ.

ಹೌದು ಪ್ರತಿ ಬಾರಿ ಮೊದಿ ತಮಿಳುನಾಡಿಗೆ ಹೋದಾಗಲೆಲ್ಲಾ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಟ್ವಿಟ್ಟರ್‌ನಲ್ಲಿ “ಗೋ ಬ್ಯಾಕ್‌ ಮೋದಿ” ಹ್ಯಾಷ್‌ ಟ್ಯಾಗ್‌ ಟ್ರೆಂಡಿಂಗ್‌ ಆಗುತ್ತದೆ. ಅದು ಈ ಬಾರಿಯೂ ಮರುಕಳಿಸಿದ್ದು ಈ ಹ್ಯಾಷ್‌ಟ್ಯಾಗ್‌ ಭಾರತದಲ್ಲಿಯೇ ನಂಬರ್‌ 1 ಸ್ಥಾನಕ್ಕೇರಿದೆ.

ಸಾವಿರಾರು ಪೋಸ್ಟ್‌ರ್‌ಗಳು, ಮೀಮ್ಸ್‌ಗಳು ತಯಾರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಓಡಾಡಿತ್ತಿವೆ. ಇನ್ನು ತಮಿಳುನಾಡಿನಲ್ಲಿ ಮೋದಿ ವಿರೋಧಕ್ಕಾಗಿ ಕಪ್ಪು ಬಣ್ಣದ ಸಾವಿರಾರು ಬಲೂನ್‌ಗಳು ತಯಾರಾಗಿದ್ದು ಆಕಾಶದಲ್ಲಿ ಹಾರಾಡಿ ಮೋದಿ ಅಭಿಮಾನಿಗಳಿಗೆ ಮುಜಗರ ಉಂಟುಮಾಡಲಿವೆ.

ಹಿಂದಿ ಹೇರಿಕೆ, ಕೇಂದ್ರದಿಂದ ಸಮರ್ಪಕ ಅನುದಾನ ಸಿಗದಿರುವುದು, ಕಾವೇರಿ ನದಿನೀರಿನ ವಿವಾದ ಸೇರಿದಂತೆ ಹಲವು ವಿಚಾರದಲ್ಲಿ ಮೋದಿ ಸರ್ಕಾರ ತಮಿಳುನಾಡಿಗೆ ಅನ್ಯಾಯ ಮಾಡಿದೆ ಎಂಬುದು ಬಹುತೇಕ ತಮಿಳರ ಅಭಿಪ್ರಾಯವಾಗಿದೆ. ಜೊತೆಗೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಅಧಿಕಾರವನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂಬುದು ದ್ರಾವಿಡರಿಂದ ಹಿಂದಿನಿಂದಲೂ ಕೇಳಿಬರುತ್ತಿರುವ ಆರೋಪವಾಗಿದೆ.

ಅದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ತೋರಿಸಿತ್ತು. ತಮಿಳುನಾಡಿನಲ್ಲಿರುವ ಒಟ್ಟು 39 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟವೂ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲ್ಲುವ ಮೂಲಕ ಹೀನಾಯ ಸೋಲು ಕಂಡಿತ್ತು. ದೇಶಾದ್ಯಂತ ಬಿಜೆಪಿ ಮತ್ತದರ ಮೈತ್ರಿಕೂಟ ಭರ್ಜರಿ ವಿಜಯ ಸಾಧಿಸಿದರೆ ತಮಿಳುನಾಡಿನಲ್ಲಿ ಮಾತ್ರ ಕೆಟ್ಟ ಸೋಲು ಅನುಭವಿಸಿತ್ತು.

ಇನ್ನು ಮೋದಿ ವಿರೋಧಿ ಬಣವಾದ ಡಿಎಂಕೆ ಮತ್ತುಕಾಂಗ್ರೆಸ್‌ ಪಕ್ಷ ಇಲ್ಲಿ ಸದ್ಯಕ್ಕೆ ಪ್ರಬಲವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟ 39ರಲ್ಲಿ 38 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ವಿಜಯ ಸಾಧಿಸಿತ್ತು. ಅಲ್ಲಿ 2021ರಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಯಲಿದ್ದು ಬಿಜೆಪಿಗೆ ಮತ್ತೆ ಸೋಲಾಗುವ ಸಂಭವವಿದೆ..

ಇನ್ನು ಗೋ ಬ್ಯಾಕ್‌ ಮೋದಿಗೆ ವಿರುದ್ಧವಾಗಿ ವೆಲ್‌ಕಂ ಮೋದಿ ಎಂಬ ಟ್ರೆಂಡಿಂಗ್‌ ಸಹ ಆರಂಭಿಸಿದ್ದರು ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಸದಕ್ಕೆ 83 ಸಾವಿರ ಜನ ಗೋ ಬ್ಯಾಕ್‌ ಮೋದಿ ಟ್ವೀಟ್‌ ಮಾಡಿದರೆ, ವೆಲ್‌ ಕಂ ಮೋದಿ ಎಂದು ಕೇವಲ 16 ಸಾವಿರ ಜನ ಟ್ವೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights