ಇನ್ನೂ 3-4 ದಿನ ಭಾರಿ ಮಳೆ : ನಿಲ್ಲದ ಪ್ರವಾಹ ಭೀತಿ – ಜಿಲ್ಲೆಗಳಲ್ಲಿ ಸಂತ್ರಸ್ಥರ ರಕ್ಷಣೆಗೆ 4 NDRF ತಂಡ

ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಸಂತ್ರಸ್ಥರ ರಕ್ಷಣೆಗೆ 4 ಎನ್ ಡಿ ಆರ್ ಎಫ್ ತಂಡಗಳನ್ನು ಕಳಿಸಲಾಗಿದೆ. ರಾಜ್ಯದಲ್ಲಿ ಕೆಲವು ಜಿಲ್ಲೆಗಳು ಮತ್ತೆ ಪ್ರವಾಹದ ಭೀತಿಯಲ್ಲಿವೆ. ಬೆಳಗಾವಿ, ರಾಯಚೂರು, ಹಾವೇರಿ, ಚಿತ್ರದುರ್ಗ, ಮಂಡ್ಯ, ದ.ಕನ್ನಡ, ಉ. ಕನ್ನಡ, ಧಾರವಾಡ, ಸೇರಿದಂತೆ ಹಲವು ಕಡೆ ಸಾವು ನೋವು ಸಂಭವಿಸಿವೆ.

ಈಗಾಗಲೇ ಆಲಮಟ್ಟಿ ಡ್ಯಾಂ ನಲ್ಲಿ 1 ಲಕ್ಷ 20 ಸಾವಿರ ಕ್ಯೂಸೆಕ್ಸ್ ಒಳ ಹರಿವಿದೆ. 1 ಲಕ್ಷ 60 ಸಾವಿರ ಕ್ಯುಸೆಕ್ಸ್ ಹೊರ ಹರಿವಿದೆ.

ಬೆಳಗಾವಿಯಲ್ಲಿ- 1000 ಮನೆಗಳು, ದಾವಣಗೆರೆ- 210, ಬಾಗಲಕೋಟೆ- 600,  ಧಾರವಾಡ- 1816, ಶಿವಮೊಗ್ಗ- 92 ಮನೆಗಳು ಬಿದ್ದಿವೆ. ಒಟ್ಟು 12 ಜನ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ೫ ಲಕ್ಷ ಪರಿಹಾರ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿಧಾನಸೌಧದಲ್ಲಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights