ಇದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿವಾಸದ ಪಕ್ಕದೂರಿನ ಪೊಲೀಸರ ರೋಲ್ ಕಾಲ್…!
ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿವಾಸದ ಪಕ್ಕದೂರಿನ ಪೊಲೀಸರ ರೋಲ್ ಕಾಲ್ ಮಾಡಿದ ವಿಡಿಯೋ ತುಣುಕು ವೈರಲ್ ಆಗಿದೆ.
ಕೋಲಾರ ಜಿಲ್ಲಾ ಪೊಲೀಸರ ಡೇ ನೈಟ್ ರೋಲ್ಕಾಲ್ ಇನ್ನು ನಿಂತಿಲ್ಲ. ಪೊಲೀಸ್ ಠಾಣೆ ಎದುರೇ ರಾಜಾರೋಷವಾಗಿ ಕಲೆಕ್ಷನ್ ಮಾಡಲಾಗುತ್ತದೆ. ಪೊಲೀಸ್ ಠಾಣೆ ಎದುರು ಸಂಚರಿಸೊ ಪ್ರತಿ ಲಾರಿಯೂ ಕೊಡಲೇ ಬೇಕು ಮಾಮೂಲಿ, ಇಲ್ಲವಾದ್ರೆ ಪೊಲೀಸ್ ಠಾಣೆಗೆ ಕರೆಸಿ ಕಿರಿ ಕಿರಿ ಕೊಡ್ತಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣೆ ರೋಲ್ಕಾಲ್ ಕೇಂದ್ರವಾಗಿದೆ. ಮಧ್ಯ ರಾತ್ರಿಯಿಂದ ಬೆಳಗ್ಗೆ 7 ಗಂಟೆವರೆಗು ರೋಲ್ಕಾಲ್ ನಡೆಯುತ್ತೆದೆ. ಪೊಲೀಸ್ ಠಾಣೆ ಎದುರೇ ಪೇದೆಯಿಂದ ಕಲೆಕ್ಷನ್ ಮಾಡಲಾಗುತ್ತದೆ. ಅನುಮಾನ ಬಾರದಿರಲಿ ಎಂದು ಕಸ ಗುಡಿಸೋರ ಕೈಯಲ್ಲು ಕಲೆಕ್ಷನ್ ಮಾಡಿಸಲಾಗುತ್ತದೆ.
ನೂತನ ಮೋಟರ್ ಕಾಯ್ದೆ ಜಾರಿಯಾದ ನಂತರ ಸುಮ್ನೆ ಕಿರಿಕಿರಿ ಯಾಕೆ ಅಂತ ಪೊಲೀಸರಿಗೆ ಚಾಲಕರು ಮಾಮೂಲಿ ಕೊಟ್ಟು ಮುಂದೆ ಸಾಗುವ ವೀಡಿಯೋ ವೈರಲ್ ಆಗಿದೆ.