ಆತ್ಮಾಹುತಿ ಪುಸ್ತಕವನ್ನು ಓದಿ – ವೀರ ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ರವಿ ತಿರುಗೇಟು..

ವೀರ ಸಾವರ್ಕರ್ ಬಗ್ಗೆ ಮಾಜಿ ಸಿ ಎಮ್ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸಿಟಿ ರವಿ ತಿರುಗೆಟು ಕೊಟ್ಟಿದ್ದಾರೆ.

ಇಂದು ಧಾರವಾಡದ ಕಾರ್ಗಿಲ್ ಸ್ಥೂಪಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಸಚಿವ ಸಿಟಿ ರವಿ, ಸಿದ್ದರಾಮಯ್ಯ ನವರು ಆತ್ಮಾಹುತಿ ಪುಸ್ತಕವನ್ನು ಓದಲಿ, ಅಭಿನವ ಭಾರತ ಸಂಘಟನೆಯನ್ನು ಯಾಕೆ ಕಟ್ಟಿದರು ಎನ್ನುವದನ್ನು ನೋಡಲಿ.

ವೀರ ಸಾವರ್ಕರ್ ಬಗ್ಗೆ ಸತ್ಯಸಂಗತಿ ಗೊತ್ತಾಗಬೇಕಿದೆ, ನಂತರ ಭಾರತ ಮಾತೆಗೆ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಪಾರ್ಟಿ ಮಾಡುವದಿಲ್ಲ. ಇದು ಸಾವರ್ಕರ್ ಗೆ ಮಾಡುವ ಅಪಮಾನ ಅಲ್ಲ. ಸಾವರ್ಕರ್ ಗೆ ಉಗಿದರೆ ಅದು ಅವರ ಮುಖಕ್ಕೆ ಅವರೆ ಅವರೆ ಉಗಿದುಕೊಂಡಂತೆ ಆಗತ್ತೆ. ಇವರು ಸಾವರ್ಕರ್ ಬಗ್ಗೆ ಮಾತನಾಡಿ ತಮಗೆ ತಾವೆ ಅಪಮಾನ ಮಾಡಿಕೊಳ್ಳುತ್ತಿದ್ದಾರೆ. ನಾನು ಬೆಂಗಳೂರಿಗೆ ಹೋದಾಗ ಪುಸ್ತಕ ಕಳಿಸುತ್ತೆನೆ ಅಂದು ಹೇಳಿದ್ದೆ, ಈಗ ಬೆಂಗಳೂರಿಗೆ ಹೋಗಿ ಅವರ ಜೊತೆ ಮಾತನಾಡಿ ಆತ್ಮಾಹುತಿ ಪುಸ್ತಕ ನೀಡುತ್ತೆನೆ.

ಇನ್ನೊಂದು ಚರ್ಚೆ ನಡಿಬೇಕಿದೆ, ಗೋಡ್ಸೆ ಗಾಂಧೀಜಿಯವರಿಗೆ ಗುಂಡು ಹಾಕಿದ. ಗಾಂದಿಜಿಯವರನ್ನ ಜನ ಮಾನಸದಿಂದ ದೂರ ಮಾಡಿದವರು ಯಾರು ಎಂಬುದು ಚರ್ಚೆ ಆಗಬೇಕಿದೆ. ಯಾವ ಕಾಂಗ್ರೆಸ್ಸಿಗರು ಗಾಂಧಿಜಿಯವರ ಹೆಸರು ಇಟ್ಕೊಂಡಿದ್ದಾರೆ, ಯಾರು ಗಾಂಧಿಜೀಯವರ ತತ್ವಗಳಡಿಯಲ್ಲಿ ಬದುಕುತ್ತಿದ್ದಾರೆ ಎನ್ನುವದು ಚರ್ಚೆಯಾಗಬೇಕು. ಗಾಂಧಿಜೀಯವರ ಪಾರ್ಟಿ ನಮ್ಮದು, ಗಾಂಧಿಜೀಯ ರಾಜಕೀಯ ವಾರಸುದಾರರು ಎಂದು ಹೇಳಿಕೊಳ್ತಾರೆ, ಗಾಂಧಿಜಿಯ ತತ್ವದ ವಾರಸುದಾರರಾಗಿದಾರಾ ಎಂದು ಪ್ರಶ್ನೆ ಹಾಕಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ವಿಚಾರ :-

ಈಗ ತುಂಬಾ ತಾಂತ್ರಿಕಥೆ ಬಂದಿದೆ, ಪ್ರಕೃತಿಯನ್ನಯ ನಿಯಂತ್ರಿಸುವ ತಾಂತ್ರಿಕತೆ ಕಂಡು ಹಿಡಿದಿಲ್ಲ. ಮಾನವಿಯ ನೆಲೆಯಲ್ಲಿ ನಾವು ಜನರಿಗೆ ಸ್ಪಂದಿಸಬೇಕಿದೆ. ಪ್ರವಾಹಕ್ಕೆ ಒಳಗಾದವರ ನೆರವಿಗೆ ನಿಂತುಕೊಳ್ಳುತ್ತೆವೆ, ಸಮಾಜ ಸ್ಪಂದನೆ ನೀಡಿದೆ, ಸರ್ಕಾರ ಕೂಡಾ ಸ್ಪಂದನೆ ನೀಡಿದೆ. ತಾತ್ಕಾಲಿಕ ಪರಿಹಾರವನ್ನು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದ್ದೆವೆ, ಹತ್ತು ಸಾವಿರ ತಾತ್ಕಾಲಿಕ ಪರಿಹಾರ ನೀಡಲಾಗುತ್ತಿದೆ. ಮಾನವಿಯ ನೆಲೆ ಇರುವ ಸರ್ಕಾರ ನಮ್ಮದು ಹಿಗಾಗಿ ಇದನ್ನೆಲ್ಲ ನಮ್ಮ ಸರ್ಕಾರ ಮಾಡಿದೆ ಎಂದರು.

ಮಹಾರಾಷ್ಟ್ರ ಮತ್ತು ಹರಿಯಾಣಾ ಚುನಾವಣೆ ವಿಚಾರ :-

ಕಾಂಗ್ರೆಸ್ ನವರು ಜಾಮಿನೂ ಅರ್ಜಿ ಹಾಕಿದ್ದಾರೆ, ಸೋಲು ಗ್ಯಾರಂಟಿ ಎನ್ನುವದು ಗೊತ್ತಾಗಿದೆ. ಸೋಲಿಗೆ ಸಭೂಬಿ ನೀಡಲು ಈಗಲೇ ಹುಡುಕುತ್ತ ಇದ್ದಾರೆ. ಸೋಲಿಗೆ ಸಭೂಬು ಇವಿಎಮ್ ಎನ್ನುತ್ತಿದ್ದಾರೆ. ಅವರು ಗೆದ್ದರೆ ಜನಾದೇಶ, ಹಲವು ರಾಜ್ಯಗಳಲ್ಲಿ ಇವರು ಗೆದ್ದಾಗ ಮೋದಿ ಕಥೆ ಮುಗಿತು ಎಂದಿದ್ದರು. ಸದ್ಯ ಸೋತ ಕೂಡಲೇ ಇವಿಎಮ್ ಎನ್ನುತ್ತಾರೆ. ತಮ್ಮ ಸೋಲಿಗೆ ನಿರೀಕ್ಷಣಾ ಜಾಮೀನು ತಗೆದುಕೊಳ್ಳುವಂತ ಕೆಲಸವನ್ನು ರಾಷ್ಟ್ರೀಯ ಕಾಂಗ್ರೆಸ್ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಹರಿಯಾಣದಲ್ಲಿ ಪೂರ್ಣ ಬಹುಮತದಿಂದ ಕ್ಲೀನ್ ಸ್ವೀಪ್ ಮಾಡುತ್ತೆ. ಹಿಂದೆ ಮಹಾತ್ಮಾ ಗಾಂದಿಜಿಯವರು ಹೇಳಿದಂತ ಈ ಸಲ ಜನರು ಒಂದೊಂದೇ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೂಡಿಸಿ ಹಾಕ್ತಿದಾರೆ ಎಂದು ಪ್ರವಾಸೊದ್ಯಮ ಮತ್ತು ಸಕ್ಕರೆ ಸಚೀವ ಸಿ ಟಿ ರವಿ ಕಿಡಿ ಕಾರಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights