ಅಂತರ್‌ಧರ್ಮೀಯ, ಅಂತರಾಜ್ಯ ಯುವ ಕಾಂಗ್ರೆಸ್‌ ಶಾಸಕ ಜೋಡಿಯ ವಿಶಿಷ್ಟ ಮದುವೆ!

ರಾಯ್ ಬರೇಲಿಯ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಅವರು ಪಂಜಾಬ್‌ನ ಶಹೀದ್ ಭಗತ್ ಸಿಂಗ್ ನಗರದ ಕಾಂಗ್ರೆಸ್ ಶಾಸಕರಾದ ಅಂಗದ್ ಸಿಂಗ್ ಸೈನಿ ಅವರನ್ನು ಮದುವೆಯಾಗಲಿದ್ದಾರೆ. ಇದೊಂದು ಅಂತರ್‌ಧರ್ಮೀಯ, ಅಂತರಾಜ್ಯ ಯುವ ಕಾಂಗ್ರೆಸ್‌ ಶಾಸಕ ಜೋಡಿಯ ವಿಶಿಷ್ಟ ಮದುವೆಯಾಗಿದ್ದು ಎಲ್ಲರ ಗಮನಸೆಳೆದಿದೆ.

ನವೆಂಬರ್ 21 ರಂದು ನವದೆಹಲಿಯ ರೆಸಾರ್ಟ್‌ನಲ್ಲಿ ವಿವಾಹ ನಡೆಯಲಿದೆ. ವರನ ಕುಟುಂಬವು ನವೆಂಬರ್ 23 ರಂದು ಆರಕ್ಷರತೆ ಹಮ್ಮಿಕೊಂಡಿದೆ. ಅದಿತಿ ಸಿಂಗ್ ಮತ್ತು ಅಂಗದ್ ಸೈನಿ ಇಬ್ಬರೂ ರಾಜಕೀಯ ಕುಟುಂಬಗಳಿಗೆ ಸೇರಿದವರಾಗಿದ್ದು 2017 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಐದು ಅವಧಿಗೆ ರಾಯ್ ಬರೇಲಿ ಸದರ್ ಕ್ಷೇತ್ರದಿಂದ ಶಾಸಕರಾಗಿದ್ದ ದಿವಂಗತ ಅಖಿಲೇಶ್ ಸಿಂಗ್ ಅವರ ಪುತ್ರಿಯೇ ಅದಿತಿ ಸಿಂಗ್. ಇನ್ನು ಅಂಗದ್ ಸೈನಿ ಪಂಜಾಬ್‌ನ ನವಾನ್‌ಶಹರ್ ಕ್ಷೇತ್ರದಿಂದ ಆರು ಅವಧಿಗೆ ಆಯ್ಕೆಯಾಗಿದ್ದ ದಿವಂಗತ ದಿಲ್‌ಬಾಗ್ ಸಿಂಗ್ ಅವರ ಕುಟುಂಬದಿಂದ ಬಂದವರಾಗಿದ್ದಾರೆ.

ಹಿಂದೂ ಮತ್ತು ಸಿಖ್ ಆಚರಣೆಗಳೆರಡರ ಪ್ರಕಾರವೂ ಮದುವೆ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದ್ದು ಹಿಂದೂ ಪದ್ದತಿಯ ಸಮಾರಂಭವು ನವೆಂಬರ್ 21 ರಂದು ದೆಹಲಿಯಲ್ಲಿ ನಡೆದರೆ, ಸಿಖ್ ಪದ್ದತಿಯ ಸಮಾರಂಭವು ನವೆಂಬರ್‌ 23ರಂದು ನವಾನ್‌ಶಹರ್‌ನಲ್ಲಿ ನಡೆಯಲಿದೆ. ಅಂಗದ್ ಸಿಂಗ್ ಅವರ ಕುಟುಂಬವು ನವಾನ್‌ಶಹರ್‌ನಲ್ಲಿ ಅದ್ಧೂರಿ ಸ್ವಾಗತ ಕೂಟವನ್ನು ಆಯೋಜಿಸಲಿದ್ದು, ಅಲ್ಲಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights