ಹೈನೋದ್ಯಮ ಕುರಿತ ಕೇಂದ್ರದ RCEP ಒಪ್ಪಂದ ಖಂಡಿಸಿ ರೈತರ ಪ್ರತಿಭಟನೆ…!

RCEP ಒಪ್ಪಂದದಿಂದ ರೈತರು ಬೀದಿಗೆ ಬೀಳುವ ಆತಂಕ ಎದುರಾಗಿದೆ ಎಂದು, ಹೈನೋದ್ಯಮ ಕುರಿತ ಕೇಂದ್ರದ RCEP ಒಪ್ಪಂದ ವಿರೋದಿಸಿ ಕೋಲಾರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಸಂಘಟನೆಯಿಂದ ಪ್ರತಿಭಟನೆ ಮಾಡಲಾಗುತ್ತಿದೆ. ವಿದೇಶಿ ಹಾಲು & ಉತ್ಪನ್ನ ಆಮದು ಕುರಿತು ಕೇಂದ್ರದ ಮುಕ್ತ ಮಾರುಕಟ್ಟೆ ಒಪ್ಪಂದವನ್ನು ಹಿಂಪಡೆಯುವಂತೆ ಒತ್ತಾಯಿಸಿ,  ಕೇಂದ್ರ ಸರ್ಕಾರ & ರಾಜ್ಯ ಸಂಸದರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಕೋಲಾರ ನಗರದ ಶ್ರೀನಿವಾಸಪುರ ಸರ್ಕಲ್ ನಲ್ಲಿ ರಸ್ತೆ ತಡೆದು ಹಸು, ಎತ್ತಿನ ಗಾಡಿ ತಂದು ರಸ್ತೆ ತಡೆ ನಡೆಸಿ, ತರಕಾರಿ ಮತ್ತು ಹಾಲಿನ ಉತ್ಪನ್ನಗಳನ್ನು ತಂದು ಹೋರಾಟ ಮಾಡಲಾಗುತ್ತಿದೆ. ಸ್ಥಳಕ್ಕೆ ಡೀಸಿ ಜೆ ಮಂಜುನಾಥ್ ಆಗಮಿಸುವಂತೆ ಪಟ್ಟು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಜಿಲ್ಲಾಧಿಕಾರಿ ಕಟ್ಟಡದ ಒಳಗೆ ಬಿಡದ ಹಿನ್ನೆಲೆ ರಸ್ತೆತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾವಿರಾರು ರೈತರಿಂದ ಪ್ರತಿಭಟನ ರ್ಯಾಲಿ ನಡೆಸಿ ಆಕ್ರೋಶ ಹೊರಹಾಕುತ್ತಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.