ಹೆಚ್,ಡಿ,ದೇವೇಗೌಡರ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ…

ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡರ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ.

ಲೋಕಸಭಾ ಚುನಾವಣೆ ವೇಳೆ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಶುರುವಾಗಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸ್ಥಳೀಯ ಪತ್ರಿಕೆಯಲ್ಲಿ ಕೋರ್ಟ್ ನೊಟೀಸ್ ಪ್ರಕಟಣೆ ಮಾಡಲಾಗಿತ್ತು. ಸೆ,30 ರಂದು 10.30 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಪ್ರಕಟಣೆ ನೀಡಲಾಗಿತ್ತು. ಆದರೆ ಹೈಕೋರ್ಟ್ ಗೆ ಹಾಜರಾಗದೆ  ಪ್ರಜ್ವಲ್ ರೇವಣ್ಣ ಕಾಣೆಯಾಗಿದ್ದಾರೆ.

ಪ್ರಕರಣ ಸಂಭಂದ ಈ ವರೆಗೂ ಪ್ರಜ್ವಲ್ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹೀಗಾಗಿ ಕೋರ್ಟ್ ಗೆ ಹಾಜರಾಗದಿದ್ದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುವುದಾಗಿ ನೊಟೀಸ್ ಪ್ರಕಟ ಮಾಡಲಾಗಿದೆ.

ಹಾಸನ ಜಿಲ್ಲೆ ಹೊಳೆನರಸೀಪುರ ಪಡುವಲಹಿಪ್ಪೆ ವಿಳಾಸಕ್ಕೆ ನೋಟೀಸ ನೀಡಲಾಗಿದೆ. ಉಚ್ಚ ನ್ಯಾಯಾಲಯ ಸ್ಥಳೀಯ ಪತ್ರಿಕೆಯಲ್ಲಿ ಜಾಹಿರಾತು ಪ್ರಕಟಿಸಿ ನೊಟೀಸ್ ನೀಡಲು ಅನುಮತಿ ನೀಡಿತ್ತು. ಮಾಜಿ ಸಚಿವ ಎ,ಮಂಜು ಮತ್ತು ದೇವರಾಜೇಗೌಡ ಪ್ರಜ್ವಲ್ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ರು. ಪ್ರಕರಣಕ್ಕೆ ಸಂಬಂಧ ಈವರೆಗೆ ನೊಟೀಸ್ ದೊರೆತಿಲ್ಲ ಎಂದು ನ್ಯಾಯಾಲಯಕ್ಕೆ ಪ್ರಜ್ವಲ್ ಹಾಜರಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರಜ್ವಲ್ ರೇವಣ್ಣ ಈವರೆಗೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.