ಹಾಸನದಲ್ಲಿ ವರುಣನ ಮುನಿಸಿಗೆ ಬಲಿಯಾದ ಕಾಫಿ ಗಿಡಗಳು…!

ಒಂದೆಡೆ ನೆರೆಯಿಂದಾಗಿ ಮನೆ ಮಠ ಕಳೆದುಕೊಂಡಿದ್ರೆ ಮತ್ತೊಂದೆಡೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ಸಂಪೂರ್ಣ ನಾಶವಾಗಿದೆ. ಕಾಫಿಯನ್ನೇ ನಂಬಿಕೊಂಡು ಬದುಕುತ್ತಿದ್ದ ನೂರಾರು ಕುಟುಂಬಗಳು ಬೀದಿಗೆ ಬರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಪ್ರವಾಹದಿಂದ ಸಾವಿರಾರು ಎಕರೆ ಪ್ರದೇಶ ಕೊಚ್ಚಿ ಹೋಗಿದ್ದು, ಕಾಫಿಗಿಡಗಳು ಮಳೆ ಮತ್ತು ಶೀತದಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ್ದು ಕಾಫಿ ಗಿಡದಿಂದ ಸಂಪೂರ್ಣವಾಗಿ ಕೆಳಕ್ಕೆ ಉದುರುತ್ತಿದೆ.

ಪ್ರವಾಹದಿಂದಾಗಿ ಕಾಫಿ ನಾಡಿನ ಜನ್ರ ಬದುಕು ಮೂರಾಬಟ್ಟೆಯಾಗಿದೆ. ಪ್ರವಾಹ ಬಂದು ಆಸ್ತಿಪಾಸ್ತಿಯನ್ನ ಮಾತ್ರ ಕೊಚ್ಚಿಕೊಂಡು ಹೋಗಲಿಲ್ಲಾ ಆದರೆ ಇಡೀ ಮಲೆನಾಡಿಗರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಪ್ರವಾಹ ಮತ್ತು ಶೀತದಿಂದಾಗಿ ಕಾಫಿ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನೇನು ಕೆಲವೇ ತಿಂಗಳಿನಲ್ಲಿ ಕಾಫಿ ಕೊಯ್ಲಿಗೆ ಬರುತ್ತಿತ್ತು, ಕಾಫಿ ಮಾರಾಟ ಮಾಡಿ ಅಲ್ಪಸ್ವಲ್ಪ ಹಣ ಸಂಪಾದಿಸುತ್ತಿದ್ದರು. ಆದರೆ ಈಗ ಪ್ರವಾಹದಿಂದಾಗಿ ಸಾವಿರಾರು ಎಕರೆ ಕಾಫಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ.

ಮಳೆಯಾಗಿದ್ರಿಂದ ಕಾಫಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಬೆಳೆಗಾರರು ಬಾರೀ ಸಂಕಷ್ಟಕ್ಕೊಳಗಾಗಿದ್ದಾರೆ. ಕೆಲವು ಕಾಫಿತೋಟಗಳೇ ಕೊಚ್ಚಿ ಹೋಗಿದೆ. ಕೆಲವು ಭಾಗಗಳಲ್ಲಿ ಬೆಟ್ಟಗುಡ್ಡಗಳೇ ಕುಸಿದುಹೋಗಿದ್ದು, ಈ ಪ್ರಕೃತಿ ವಿಕೋಪವನ್ನ ಮತ್ತೆ ಸರಿಪಡಿಸಲು ಹತ್ತಾರು ವರ್ಷಗಳು ಕಳೆದರೂ ಸಾಧ್ಯವಿಲ್ಲಾ. ಇಡೀ ಜಿಲ್ಲೆಯಾದ್ಯಂತ ಪ್ರವಾಹಕ್ಕೊಳಗಾದ ನಷ್ಟವನ್ನ ಅಂದಾಜು ಮಾಡಲಾಗಿದ್ದು, ಸುಮಾರು 150 ಕೋಟಿ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಕಾಫಿ ತೋಟಗಳೆಲ್ಲವೂ ನಾಶವಾಗಿದ್ದು, ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಬೆಳೆಗಾರರು ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದಾರೆ.

ಕಳೆದ ಬಾರಿ ಪ್ರವಾಹ ಉಂಟಾದ ಪ್ರದೇಶಕ್ಕೆ ಸರ್ಕಾರ ಸರಿಯಾಗಿ ಪರಿಹಾರ ನೀಡಿಲ್ಲಾ. ಆದರೆ ಈಗಲಾದ್ರೂ ನಿಜವಾದ ಫಲಾನುಭವಿಗಳನ್ನ ಗುರ್ತಿಸಿ ಸರ್ಕಾರ ಫಲಾನುಭವಿಗಳಿಗೆ ಸೂಕ್ತ ಪರಿಹಾರ ಒದಗಿಸಬೇಕಿದೆ. ಒಟ್ಟಾರೆ ಕಾಫಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.