ಹಳ್ಳ ದಾಟುವ ವೇಳೆ ನೀರುಪಾಲಾಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆ…!

ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಹಳ್ಳ ದಾಟುವ ವೇಳೆ ನೀರುಪಾಲಾಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಸುಭಾಶ ಬೆನ್ನೂರ 48 ವರ್ಷ, ನೀರುಪಾಲಾಗಿದ್ದ ವ್ಯಕ್ತಿ. ಹೊಲದಲ್ಲಿ ಕೆಲಸ ಮಾಡಿ ಬರುವಾಗ ಹಳ್ಳದ ಬಳಿ ನಡೆದಿದ್ದ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಹಳ್ಳವನ್ನು ದಾಟುವಾಗ ಕಾಲುಜಾರಿ ಬಿದ್ದದ್ದ ವ್ಯಕ್ತಿ, ನೀರಿನ ಹರಿವು ಹೆಚ್ಚಾಗಿದ್ದರಿಂದ ಹಳ್ಳದಲ್ಲಿ ಕೊಚ್ಚಿಹೋಗಿದ್ದನು.

ಜೋರಾಗಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಹಳ್ಳದಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿ ಮೃತದೇಹ ಇಂದು ದಡದಲ್ಲಿ ಬಿದ್ದಿರುವುದನ್ನ ಗಮನಿಸಿದ ಸ್ಥಳೀಯರು  ಹಾವೇರಿ ಗ್ರಾಮೀಣ ಠಾಣೆಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.