ಸೊಳ್ಳೆ ರಕ್ಕಸನ ವಿರುದ್ಧ ಹಸಿರು ಕ್ರಾಂತಿ : ನೈಸರ್ಗಿಕ ಸಸಿಗಳಿಂದ ಸೊಳ್ಳೆಗಳನ್ನು ಹಿಮ್ಮೆಟ್ಟಿಸಿ..!

ಸೊಳ್ಳೆ… ಸೊಳ್ಳೆ ಎಷ್ಟು ಚಿಕ್ಕದೋ ಅಷ್ಟೇ ಅಪಾಯಕಾರಿ. ಸೊಳ್ಳೆ ಇರದ ಸ್ಥಳವೇ ಇಲ್ಲ ನೋಡಿ. ಇದನ್ನ ಓಡಿಸೋಕೆ ಜನ ಏನೆಲ್ಲಾ ಕಷ್ಟಪಡ್ತಾರೆ. ಆದ್ರೆ ಸೊಳ್ಳೆ ಮಾತ್ರ ತಾನಿದ್ದ ಜಾಗದಲ್ಲಿ ಮತ್ತಷ್ಟು ಸೊಳ್ಳೆಗಳನ್ನ ಸೃಷ್ಟಿ ಮಾಡುತ್ತೇ ವಿನ: ಯಾವುದೇ ಕಾರಣಕ್ಕೂ ಮನೆ ಬಿಟ್ಟು ಮಾತ್ರ ಕದ್ಲೋದಿಲ್ಲ. ಗಾರ್ಡನ್ ಏರಿಯಾ ಇರುವವರಂತೂ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಹಾಗಂತ ಗಾರ್ಡನ್ಗೆ ಸೊಳ್ಳೆ ಬತ್ತಿ ಹಚ್ಚೋದಕಾಗುತ್ತಾ. ಖಂಡಿತಾ ಆಗೋದಿಲ್ಲ, ಇನ್ನೂ ಮೈತುಂಬಾ ಯಾವುದೋ ಕೆಮಿಕಲ್ ಇರೋ ಔಷಧಿ ಹಚ್ಚಿಕೊಂಡು ಸೊಳ್ಳೆಯಿಂದ ತಪ್ಪಿಸಿಕೊಳ್ಳೋಣ ಅಂದ್ರೆ ಅದ್ರಿಂದ ಅದೇನ್ ಸೈಡ್ ಎಫೆಕ್ಟ್ ಆಗುತ್ತೋ ಅಂತ ಭಯಾ ಬೇರೆ. ಹಾಗಾದ್ರೆ ಏನ್ ಮಾಡ್ಬೇಕು ಅಂತ ಚಿಂತೆ ಮಾಡೋರ್ಗೆ ನಾವೊಂದು ಐಡಿಯೋ ಕೊಡ್ತೀವಿ ಟ್ರೈ ಮಾಡಿ. ಇದರಿಂದ ನೀವುಗಳು ಪ್ರತಿನಿತ್ಯ ಸೊಳ್ಳೆ ಬತ್ತಿ ಹಚ್ಬೇಕಾಗಿಲ್ಲ, ಯಾವುದೇ ಮೆಡಿಸನ್ ಯ್ಯೂಸ್ ಮಾಡಬೇಕಿಲ್ಲ. ನೈಸರ್ಗಿಕವಾಗಿರೋ ಸಸ್ಯಗಳನ್ನ ಬೆಳಿಸಿದ್ರೆ ಸಾಕು.

ಹೌದು… ಸೊಳ್ಳೆಗಳಿಂದ ತಪ್ಪಿಸಿಕೊಳ್ಳೋದಕ್ಕೆ ಕೆಲ ನೈಸರ್ಗಿಕ ಸಸ್ಯಗಳು ರಾಮಬಾಣದಂತೆ ಕೆಲಸ ಮಾಡುತ್ತವೆ. ಅವು ಯಾವವು ಗೊತ್ತಾ..? ಇಲ್ಲಿದೆ ನೋಡಿ.

ಬೆಳ್ಳುಳ್ಳಿ ಗಿಡ

ಮಾರಿಗೋಲ್ಡ್

ಸಿಟ್ರೋನೆಲ್ಲಾ ಹುಲ್ಲು ಅಥವಾ ಸಸ್ಯ

ಲಿಂಬೆ ಬಾಂಬ್ ಸಸ್ಯ

ಕ್ಯಾಟ್ ನಿಟ್ ಸಸ್ಯ

ರೋಸ್ಮೊರಿ ಸಸ್ಯ

ಲ್ಯಾವೆಂಡರ್ ಹೂವು

ನಿಂಬೆ ಹೂ

ಪುದಿನಾ

ತುಳಸಿ ಗಿಡ

ಹೀಗೆ ಪ್ರಬಲ ಘಾಟು, ಸೊಳ್ಳೆಯನ್ನು ಓಡಿಸುವ ಪ್ರಬಲ ಸಾಮರ್ಥ ಹೊಂದಿರುವ ಸಸ್ಯಗಳನ್ನು ನಿಮ್ಮ ಮನೆ ಅಂಗಳದಲ್ಲಿ ಮತ್ತು ಮನೆಯಲ್ಲ ಬೆಳಸಿ ಸೊಳ್ಳೆಯಿಂದ ದೂರವಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.