ಸಿದ್ದರಾಮಯ್ಯ ನಾನು ಸಮಾಜವಾದಿ ಅಂತಾರೆ, ಬಳಸುವುದೆಲ್ಲಾ ದುಬಾರಿ ವಸ್ತುಗಳು – ಸಿಟಿ ರವಿ ವಾಗ್ದಾಳಿ

ಸಿದ್ದರಾಮಯ್ಯ ನಾನು ಸಮಾಜವಾದಿ ಅಂತಾರೆ ಆದರೆ ಹಾಕೋದೆಲ್ಲಾ ದುಬಾರಿ ವಸ್ತುಗಳನ್ನು ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿಟಿ ರವಿ ವಾಗ್ದಾಳಿ ಮಾಡಿದ್ದಾರೆ.

3,4,5 ಲಕ್ಷದ ಗ್ಲಾಸು,  50,60 ಲಕ್ಷದ ವಾಚು, ಓಡಾಡೋ ಕಾರು ಒಂದೂವರೆ ಎರಡು ಕೋಟಿಯದ್ದು, ಇಷ್ಟೆಲ್ಲಾ ಇದ್ರು ಆದ್ರು ಅವ್ರು ಸಮಾಜವಾದಿ ಹಿನ್ನೆಲೆಯವ್ರು.

ಸಿದ್ದರಾಮಯ್ಯನವರು ನಿಜಕ್ಕೂ ಪುಣ್ಯವಂತರೇ. ಅವರಿಗೆ ಯಾವ್ಯಾವ ರೀತಿ ಸ್ನೇಹಿತರಿದ್ದಾರೋ ಗೊತ್ತಿಲ್ಲ. ಕೋಟಿಗಟ್ಟಲೇ ಹಣ ಕೋಡೋ ಸ್ನೇಹಿತರನ್ನ ಅವರು ಹೊಂದಿದ್ದಾರೆ. ಕೋಟಿಗಟ್ಟಲೇ ವಾಚು ಕೊಡೋ ಸ್ನೇಹಿತ, ಲಕ್ಷಗಟ್ಟಲೇ ಕನ್ನಡಕ ಕೊಡೋ ಸ್ನೇಹಿತ, ಕೋಟಿಗಟ್ಟಲೇ ಕಾರು ಗಿಫ್ಟ್ ಕೊಡೋ ಸ್ನೇಹಿತರು ಸಿದ್ದರಾಮಯ್ಯ ಅವರಿಗಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.