‘ಸಿದ್ದರಾಮಯ್ಯನವರೇ ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐ ತನಿಖೆ ಮಾಡಿಸಲು ಹೇಳಿದ್ದು’ ಜಗದೀಶ್ ಶೆಟ್ಟರ್

ಹುಬ್ಬಳ್ಳಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ.  ಫೋನ್ ಟ್ಯಾಪಿಂಗ್ ಸಿಬಿಐ ತನಿಖೆಗೆ ಕೊಟ್ಟಿದ್ದು ರಾಜಕೀಯ ದ್ವೇಷಕ್ಕಾಗಿ ಅಲ್ಲ. ಸಿದ್ದರಾಮಯ್ಯನವರೇ ತನಿಖೆ ಮಾಡಿಸಲು ಹೇಳಿದ್ದರು ಎಂದು ಹೇಳಿದ್ದು ಮತ್ತೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಸಿಬಿಐ ತನಿಖೆ ಬಗ್ಗೆ ಸಿದ್ದರಾಮಯ್ಯಗೆ ಒಳಗೊಳಗೆ ಸಂತೋಷವಿದೆ. ಮೈತ್ರಿ ಸರ್ಕಾರ ಬೀಳಿಸಲು ಸಿದ್ದರಾಮಯ್ಯನವರೇ ಟೈಮ್‌ ಬಾಂಬ್ ಫಿಕ್ಸ್ ಮಾಡಿದ್ದರು. ಫೋನ್ ಟ್ಯಾಪಿಂಗ್ ಮೂಲಕ ದೇವೇಗೌಡರು ಸಿದ್ದರಾಮಯ್ಯನವರ ಚಲನವಲನ ಗಮನಿಸಿದ್ದಾರೆ.

ಪೋನ್ ಕದ್ದಾಲಿಕೆ ಮಾಡಿದಾಗ ಸಿದ್ದರಾಮಯ್ಯ ಪ್ಲ್ಯಾನ್ ಗೊತ್ತಾಗಿದೆ‌. ಹೀಗಾಗಿಯೇ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿದ್ದಾರೆ. ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎನ್ನುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಪರಸ್ಪರ ಧ್ವೇಷಕ್ಕೆ ಕಾರಣವಾಗಿದೆ.

ಆ ಮೂಲಕ ಮೈತ್ರಿ ಪಕ್ಷ ಒಂದಾದಷ್ಟು ಬಿಜೆಪಿಗೆ ಕುತ್ತು ಆಗಬಹುದು ಅನ್ನೋ ಕಾರಣಕ್ಕೆ ಬಿಜೆಪಿ ನಾಯಕರು ಕೂಡ ಈ ವಿಚಾರದಲ್ಲಿ ಮನಸ್ತಾಪಕ್ಕೆ ದಾರಿ ಮಾಡಿಕೊಂಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅನ್ನೋ ಅನುಮಾನ ಕೂಡ ಬಾರದೇ ಇರದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.