ಸಿಎಂ ಯಡಿಯೂರಪ್ಪ ಆಡಿಯೋ ಸೋರಿಕೆ ಪ್ರಕರಣ : ಅನುಮಾನದ ಬೊಟ್ಟು ಇವರ ಕಡೆಗೆ…

ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟುಮಾಡಿರುವ ಅರ‍್ಹ ಶಾಕರ ಕುರಿತಾದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋ ಅಸಲು ಸೋರಿಕೆ ಮಾಡಿದ್ದು ಯಾರು ಎಂಬ ಪ್ರಶ್ನೆ ಸದ್ಯ ಕುತೂಹಲಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯಲ್ಲಿ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಆಡಿದ ಮಾತುಗಳ ಆಡಿಯೋ ತುಣುಕು ಬಹಿರಂಗ ಆಗಿರುವುದರ ಹಿಂದೆ ಯಾರ ಕೈವಾಡ ಇರಬಹುದು ಎಂಬ ವ್ಯಖ್ಯಾನ ಮುಗಿಲು ಮುಟ್ಟಿದೆ. ಆದರೆ ಎಲ್ಲ ಅನುಮಾನಗಳ ಬಾಣ ನೆಟ್ಟಿರುವುದು ಬಿಜೆಪಿಯ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ನಿಷ್ಠರ ಮೇಲೆ ಎಂಬುದು ಕುತೂಹಲ ಮೂಡಿಸಿದೆ.

ಹೌದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‍ ಕಟೀಲ್, ಡಿಸಿಎಂ ಲಕ್ಷ್ಮಣ ಸವದಿ ಅವರಿಬ್ಬರ ಮೇಲೆ ಹಲವು ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಂತೂ ಬಿಜೆಪಿ ನಾಯಕರ ಬೆಂಬಲಿಗರ ಮೇಲೆಯೇ ನೇರವಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಪ್ರಕಾರ ಈ ಇಬ್ಬರ ಜೊತೆಗೂ ಅನುಮಾನದ ಬೊಟ್ಟು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಮೇಲೆಯೂ ಇದೆ. ಈ ಮೂವರು ನಾಯಕರ ಅನುಯಾಯಿಗಳ ಪೈಕಿ ಯಾರಾದರೊಬ್ಬರು ಆಡಿಯೋ ಲೀಕ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ರೀತಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಮಡೂರಾವ್ ಸಹ ಅನುಮಾನದ ಸಮೂಹ ಗಾನಕ್ಕೆ ತಮ್ಮ ಧ್ವನಿ ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಉದ್ದೇಶದಿಂದ ನಳಿನ್ ಕಟಿಲ್ ಕಡೆಯವರೇ ಈ ಕೈತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಎಸ್‌ವೈ ಆಡಿಯೋ ವಿಚಾರವನ್ನು ಕಾಂಗ್ರೆಸ್ ರಾಜ್ಯಪಾಲರ ಅಂಗಳಕ್ಕೂ ಹಾಕಿದ್ದು, ಸುಪ್ರೀಂ ಕರ‍್ಟಿನಲ್ಲಿ ಸಹ ಅರ‍್ಹರ ಪ್ರಕರಣದಲ್ಲಿ ಸಾಕ್ಷ್ಯವೆಂದು ಪರಿಗಣಿಸುವಂತೆ ಮನವಿ ಮಾಡಿಕೊಂಡಿದೆ. ಆಡಿಯೋ ಲೀಕ್ ಸ್ವಪಕ್ಷೀಯರದೇ ಕೃತ್ಯ ಎಂದು ಖುದ್ದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.