‘ಸಿಎಂ ಆದ ಅಲ್ಪಾಧಿಯಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ರು ಹೆಚ್.ಡಿ.ಕೆ’ ಮಳವಳ್ಳಿ ಶಾಸಕ

ಕೆ.ಆರ್.ಪೇಟೆ ಜೆಡಿಎಸ್ ನ ಭದ್ರಕೋಟೆ ಇದನ್ನು ನೀವೆಲ್ಲರು ನಿರೂಪಿಸಿದ್ದೀರಿ. ನಮ್ಮ ನಾಯಕರಾಗಿದ್ದ ಮಾಜಿ ಸಿ.ಎಂ. ಹೆಚ್.ಡಿ ಕುಮಾರಸ್ವಾಮಿ ರವರು ರಾಜ್ಯದ ರೈತರ ಸಾಲಮನ್ನಾ ಮಾಡಿದ್ರು.

ಎರಡು ಬಾರಿ ಸಿ.ಎಂ.ಆದ್ರು ಅವ್ರು ಪೂರ್ಣ ಪ್ರಮಾಣದ ಸಿ.ಎಂ.‌ಆಗಿರಲಿಲ್ಲ. ಆದ್ರು ಅವ್ರು ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ರು ಇದು ಈ ಭೂಮಿ ಇರುವವರೆಗೂ ಈ ಹೆಸರು ಇರುತ್ತೆ ಎಂದು ಜೆಡಿಎಸ್ ಸಮಾವೇಶದಲ್ಲಿ ಮಳವಳ್ಳಿ ಶಾಸಕ ಅನ್ನದಾನಿ ಹೇಳಿದ್ದಾರೆ.

ಅವ್ರಿಗೆ ಎರಡು ಸಾರಿ ಮುಖ್ಯಮಂತ್ರಿಯಾಗಿದ್ರು ಸರಿಯಾಗಿ ಅಧಿಕಾರ ನಡೆಸಲು ಬಿಡಲಿಲ್ಲ.ಅವರನ್ನು ಕುತಂತ್ರದಿಂದ ಸಿ.ಎಂ‌. ಹುದ್ದೆಯಿಂದ ಕೆಳಗಿಳಿಸಿದ್ರು. ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ ಅನುಭವದ ಕೊರತೆ ಇಲ್ಲ.

ಶೀಘ್ರವೇ ಈ ಕ್ಷೇತ್ರಕ್ಕೆ ಉಪ ಚುನಾವಣೆ ಬರಲಿದ್ದು ದೇವೇಗೌಡ್ರು ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರದು. ಅನರ್ಹತೆ ಶಾಸಕನ ಬಗ್ಗೆ ನಾನು ಮಾತನಾಡಲ್ಲ, ಯಾಕಾಗಿ ರಾಜೀನಾಮೆ ಕೊಟ್ರು ಕೇಳಲ್ಲ. ಇದೀಗ ಮತ್ತೆ ಚುನಾವಣೆ ಬರಲಿದ್ದು ಮತ್ತೆ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ಕೊಡಬೇಕಿದೆ ಎಂದು ವಿರೋಧ ಪಕ್ಷದ ವಿರುದ್ಧ ಕುಟುಕಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.