ಸರಕಾರದ ಅಸ್ತಿತ್ವಕ್ಕೆ ಮೂಲ ಕಾರಣರಾದ ಅನರ್ಹರಿಗೆ ಚುನಾವಣೆಯಲ್ಲಿ ಬಂಪರ್ ಕೊಡುಗೆ…

ಸರಕಾರದ ಅಸ್ತಿತ್ವಕ್ಕೆ ಮೂಲ ಕಾರಣರಾದ ಅನರ್ಹರಿಗೆ ಚುನಾವಣೆಯಲ್ಲಿ ಬಮಡಾಯದ ಕಾವು ತಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಿಎಂ ನೇಮಕ ಮಾಡಿದ್ದಾರೆ.

ಅನರ್ಹರ ಕೈಯಲ್ಲಿ ಕಳೆದ ಚುನಾವಣೆಯಲ್ಲಿ ಪರಾಜಿಗೊಮಡು ಈಗ ಬಂಡಾಯದ ಮುನ್ಸೂಚನೆ ನೀಡಿರುವ ನಾಯಕರ ಮೂಗಿಗೆ ಈಗ ನಿಗಮ-ಮಂಡಳಿ ಅಧ್ಯಕ್ಷಗಿರಿಯ ತುಪ್ಪ ಸವರಲಾಗಿದೆ. ಆ ಮೂಲಕ ಅನರ್ಹರು ಒಮದು ವೇಳೆ ಚುನಾವಣಾ ಕಣಕ್ಕಿಳಿದರೆ ಅವರಿಗೆ ಬಂಡಾಯದ ಬೇಗೆ ತಾಗದಂತೆ ತಡೆಯುವ ಯತ್ನವನ್ನು ಸಿಎಂ ಮಾಡಿದ್ದಾರೆ.

ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿರುವ ಶರತ್ ಬಚ್ಚೇಗೌಡರಿಗೆ ಆಯಕಟ್ಟಿನ ಗೃಹ ಮಂಡಳಿ ಅಧ್ಯಕ್ಷಗಿರಿ ನೀಡಲಾಗಿದೆ. ಇದೇ ರೀತಿ ಬಿಸಿ ಪಾಟೀಲರ ಎದುರಾಳಿ ಯುಬಿ ಬಣಕಾರ್‍ ಅವರಿಗೆ ಕೃಷಿ ಉತ್ಪನ್ನ ಹಾಗೂ ಸಂಸ್ಕರಣ ಮಂಡಳಿಯ ನೊಗ ಹೊರಿಸಲಾಗಿದೆ.

ಇನ್ನು ಶ್ರೀಮಂತ್ ಪಾಟೀಲ್ ವಿರುದ್ಧ ಬಂಡಾಯದ ಸುಳಿವು ನೀಡಿರುವ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಶಾಸಕ ರಾಜು ಕಾಗೆ ಅವರನ್ನು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನಾ (ಕಾಡಾ) ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇನ್ನು ಬೈರತಿ ಬಸವರಾಜ್ ಅವರ ವಿರುದ್ಧ ಸೊಲ್ಲೆತ್ತಿರುವ ನಂದೀಶ ರೆಡ್ಡಿ ಅವರಿಗೆ ಬೆಂಗಳೂರು ನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಪಟ್ಟ ನೀಡಲಾಗಿದೆ. ಅಲ್ಲದೇ ಗಡಿ ಅಭಿವೃದ್ಧೀ ಪ್ರಾಧಿಕಾರದ ಅಧ್ಯಕ್ಷತೆ ಅಶೋಕ್ ಪೂಜಾರಿ ಹೆಗಲೇರಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.