ಸಂತ್ರಸ್ತರ ನೆರವಿಗೆ ಕರೆ ಕೊಟ್ಟ ಪ್ರಕಾಶ್ ರಾಜ್ : 10 ಲಕ್ಷ ದೇಣಿಗೆ ಘೋಷಣೆ

ನಾಡಿನ ಹಲವು ಜಿಲ್ಲೆಗಳಲ್ಲಿ ನಮ್ಮ ಬಂಧುಗಳು ನೆರೆಯ ಅಬ್ಬರಕ್ಕೆ ಸಿಲುಕಿ ನೊಂದಿದ್ದಾರೆ. ಅವರ ಕಷ್ಟಕ್ಕೆ ಹೆಗಲಾಗೋಣ ಬನ್ನಿ ಎಂದು ಕರೆ ನೀಡಿರುವ ಪ್ರಕಾಶ್ ರಾಜ್ ಆರಂಭಿಕವಾಗಿ 10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಸದ್ಯಕ್ಕೆ ಪ್ರವಾಹ ಸಂತ್ರಸ್ತರಿಗೆ ತುರ್ತು ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು, ಈಗಾಗಲೇ ಕಾರ್ಯನಿರತರಾಗಿರುವ ಸಹ ಸಂಸ್ಥೆಗಳ ಜೊತೆಗೂಡಲು ಪ್ರಕಾಶ್ ರಾಜ್ ಫೌಂಡೇಶನ್ ಅಣಿಯಾಗಿದ್ದು, ಈಗಿನಷ್ಟೇ ತೀವ್ರವಾಗಿ ಪ್ರವಾಹ ನಿಂತ ನಂತರವೂ ಜನರ ಪುನರ್ವಸತಿಯ ಕೆಲಸವನ್ನು ರಚನಾತ್ಮಕವಾಗಿ ಮಾಡಲು ಉದ್ದೇಶಿಸಿದೆ ಎಂದು ಪ್ರಕಾಶ್ ರಾಜ್ ರವರು ಟ್ವೀಟ್ ಮಾಡಿದ್ದಾರೆ.

 

ಫೌಂಡೇಶನ್ ಮೂಲಕವೂ ನೆರೆ ಸಂತ್ರಸ್ತರಿಗೆ ನೆರವು ನೀಡಲು ಬಯಸುವವರು ಹಣಸಹಾಯ ಮಾಡಬೇಕಾಗಿ ಪ್ರಕಾಶ್ ರಾಜ್ ಮನವಿ ಮಾಡಿದ್ದಾರೆ.

ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹ ಬಂದಾಗಲೂ ತಕ್ಷಣ ಪ್ರಕಾಶ್ ರಾಜ್ ರವರು 5 ಲಕ್ಷ ದೇಣಿಗೆ ನೀಡಿದ್ದರು. ನೆರೆ ನಿಂತ ನಂತರ ಹಲವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 4.5 ಲಕ್ಷಕ್ಕೂ ಹೆಚ್ಚು ಹಣವನ್ನು ಫೌಂಡೇಶನ್ ಮೂಲಕ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.