‘ಸಂತ್ರಸ್ತರಿಗೆ ರೂ. 10 ಸಾವಿರ ನೀಡಿದ್ದೇ ಹೆಚ್ಚು’ಕೆ ಎಸ್. ಈಶ್ವರಪ್ಪ ಹೇಳಿಕೆಗೆ ಯತ್ನಾಳ ಟಾಂಗ್

ಪ್ರವಾಹ ಸಂತ್ರಸ್ತರಿಗೆ ರೂ. 10 ಸಾವಿರ ನೀಡಿದ್ದೇ ಹೆಚ್ಚು ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪರೋಕ್ಷವಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಟಾಂಗ್ ನೀಡಿದ್ದಾರೆ.

ಬಹಳ ಅನ್ಯಾಯವಾದಾಗ ಧ್ವನಿ ಎತ್ತುತ್ತೇನಿ. ಈಗ ಧ್ವನಿ ಎತ್ತುವುದಿಲ್ಲ, ಅನ್ಯಾಯ ಪರಾಕಾಷ್ಠೆಗೆ ಬಂದಾಗ ಉತ್ತರ ಕರ್ನಾಟಕದ ಪರ ಧ್ವನಿ ಎತ್ತುತ್ತೇನೆ. ಅದು ನನ್ನ ಪಕ್ಷ ಅಥವಾ ಬೇರೆ ಪಕ್ಷವಿದ್ದರೂ ಧ್ವನಿ ಎತ್ತುತ್ತೇನೆ. ಸಧ್ಯ ಈಶ್ವರಪ್ಪ ಹೇಳಿಕೆ ಪರ, ವಿರೋಧ ಮಾಡಲ್ಲ. ಅದಕ್ಕಾಗಿ ನನ್ನನ್ನು ಬಲಿಪಶು ಮಾಡಬೇಡಿ.

ಅನರ್ಹ ಶಾಸಕರಿಂದ ನಮ್ಮ ಬಿಜೆಪಿ ಸರ್ಕಾರ ಅಸ್ತಿತ್ವ ಬಂದಿದೆ. ಅನರ್ಹ ಶಾಸಕರು ರಾಜೀನಾಮೆ ನೀಡಿದಕ್ಕೆ ಸರಕಾರ ರಚನೆಯಾಗಿದೆ. ಅನರ್ಹ ಶಾಸಕರು ಸಾಕಷ್ಟು ನೊಂದಿದ್ದಾರೆ. ರಾಜೀನಾಮೆ ನೀಡಿದ ಮೇಲೆ ಅನರ್ಹ ಶಾಸಕರಿಗೆ ಚಿತ್ರಹಿಂಸೆಯಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗಲಿ.

ಅನರ್ಹ ಶಾಸಕರು ಮಂತ್ರಿಗಳಾಗ್ಲಿ ಎಂದು ಹಾರೈಸುತ್ತೇನೆ. ಜೆಡಿಎಸ್ , ಕಾಂಗ್ರೆಸ್ ನಿಂದ ಮತ್ತಷ್ಟು ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.

ಅದಕ್ಕಾಗಿ ಯಾರಿಗೂ ಮಧ್ಯಂತರ ಚುನಾವಣೆ ಬೇಕಾಗಿಲ್ಲ. ಸಿಎಂ ಬಿ. ಎಸ್, ಯಡಿಯೂರಪ್ಪಗೆ ಕಿರುಕುಳ ನೀಡಲಾಗುತ್ತಿದೆ. ಬಿ. ಎಸ್. ಯಡಿಯೂರಪ್ಪ ಸಿಎಂ ಆಗಿ ಬಡಿದಾಡುತ್ತಿದ್ದಾರೆ. ಸಿಎಂ ಗೆ ಎಲ್ಲ ಶಾಸಕರು ಸಹಕಾರ ನೀಡಬೇಕು. ನಾನೇ ಮುಖ್ಯಮಂತ್ರಿ ಕುರಿತು ಯತ್ನಾಳ ಪ್ರತಿಕ್ರಿಯೆ ನೀಡಿದರು.

ಸಿಎಂ ಎಲ್ಲ ಸಹಕಾರ ನೀಡುತ್ತಿದ್ದಾರೆ. ಅದಕ್ಕಾಗಿ ಮಂತ್ರಿಯಾಗಿ ಏನ ಮಾಡ್ಲಿ. ಜನರ ಸಮಸ್ಯೆ ಹಾಗೂ ಅಭಿವೃದ್ಧಿ ಮಾಡಿದರೆ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಮಂತ್ರಿಗಾಗಿ ಜೀವನ ಹಾಳು ಮಾಡಿಕೊಂಡು ಬೆಂಗಳೂರಿನಲ್ಲಿ ಕೈಕಾಲು ಹಿಡಿದುಕೊಳ್ಳುವುದರಲ್ಲಿ ಅರ್ಥವಿಲ್ಲ. ವಿಜಯಪುರದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಈ ರೀತಿ ಹೇಳಿಕೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.