ಶ್ರೀಕೃಷ್ಣನ ಆರಾಧನೆಯಲ್ಲಿ ತೊಡಗಿದ ಧೋನಿ : ಕೊಳಲು ನುಡಿಸುತ್ತಿದ್ದ ಮಹೇಂದ್ರನ ವಿಡಿಯೋ ವೈರಲ್

ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ ದೇಶದಾದ್ಯಂತ ಮನೆ ಮಾಡಿದೆ. ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಶ್ರೀಕೃಷ್ಣನ ಆರಾಧನೆಯಲ್ಲಿ ತೊಡಗಿದ್ದಾರೆ. ಧೋನಿ ಕೊಳಲು ನುಡಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ.

ಧೋನಿ ಕೊಳಲು ಹಿಡಿದ ಶೈಲಿ ಹಾಗೂ ಅದ್ರಿಂದ ಹೊರಬರುತ್ತಿರುವ ಸ್ವರವನ್ನು ಆಲಿಸಿದ ಅಭಿಮಾನಿಗಳು ತಲೆದೂಗುತ್ತಿದ್ದಾರೆ. ಧೋನಿಗೆ ಕೊಳಲು ನುಡಿಸುವ ಅಭ್ಯಾಸವಿದ್ದಂತೆ ಕಾಣುತ್ತದೆ. ಕೊಳಲು ನುಡಿಸುವ ವೇಳೆ ಧೋನಿ ಕಪ್ಪು ಕನ್ನಡಕವನ್ನು ಧರಿಸಿದ್ದಾರೆ. ಧೋನಿ ಕ್ಯಾಶುಯಲ್ ಜರ್ಸಿ ಧರಿಸಿದ್ದಾರೆ.

ವಿಡಿಯೋದಲ್ಲಿ ಧೋನಿ ಮೇಲೆ ಫೋಕಸ್ ಮಾಡಲಾಗಿದೆ. ಹಿಂದೆ ಇನ್ನು ಕೆಲ ಆಟಗಾರರನ್ನು ನೋಡಬಹುದಾಗಿದೆ. 7 ಸೆಕೆಂಡ್ ನ ಧೋನಿ ವಿಡಿಯೋಕ್ಕೆ ಈವರೆಗೆ 1000 ಲೈಕ್ಸ್ ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.