ಶಿವಮೊಗ್ಗದ ಸ್ಥಳೀಯ ಯುವಕರಿಂದ ಪ್ರವಾಸಿಗರಿಗೆ ಕಿರುಕುಳದ ಆರೋಪ…

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟ ದಕ್ಷಿಣ ಭಾರತದ ಜೈನಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ.

ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಭಕ್ತರು, ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಮತ್ತು ಭಕ್ತರಿಗೆ ನೈತಿಕ ಪೊಲೀಸರ ಕಿರಿಕಿರಿ ಆತಂಕ ಸೃಷ್ಟಿಸಿದೆ. ಆಗಸ್ಟ್ 15 ರಂದು ಕುಂದಾದ್ರಿ ಬೆಟ್ಟಕ್ಕೆ ಬಂದಿದ್ದ ಯುವಕ, ಯುವತಿಯರನ್ನು ಅಡ್ಡಗಟ್ಟಿದ ಸ್ಥಳೀಯ ಯುವಕರ ಗುಂಪೊಂದು ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಯುವಕ-ಯುವತಿಯರನ್ನು ಅಡ್ಡಗಟ್ಟಿದ ಯುವಕರ ಗುಂಪು ಕಾರಿನ ಬೀಗ ಕಸಿದು ಅಸಭ್ಯವಾಗಿ ವರ್ತಿಸಿದ್ದು, ಇದರಿಂದ ಹೆದರಿದ ಯುವಕ, ಯುವತಿಯರು ತಮ್ಮನ್ನು ಬಿಡುವಂತೆ ಗೋಗರೆದಿದ್ದಾರೆ. ಅನೈತಿಕ ಪೊಲೀಸ್ ಗಿರಿಯಲ್ಲಿ ತೊಡಗಿದ್ದವರು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.