ಶಿಕ್ಷಕರ ದಿನದಂದು ಶಿಕ್ಷಕರಾದ ಶಾಸಕ : ಮಕ್ಕಳಿಗೆ ಗಣಿತ ಪಾಠ ಹೇಳಿದ ಮೇಸ್ಟ್ರು

ಶಿಕ್ಷಕರ ದಿನದಂದು ಶಾಸಕರು ಶಿಕ್ಷಕರಾಗಿದ್ದಾರೆ.  ಶಾಸಕ ಲಿಂಗೇಶ್ ಸರ್ಕಾರಿ ಶಾಲೆ ಮಕ್ಕಳಿಗೆ ಪಾಠ ಮಾಡಿದ್ದಾರೆ. ಬೇಲೂರು ಜೆಡಿಎಸ್ ಶಾಸಕ ಲಿಂಗೇಶ್ ರಿಂದ ಮಕ್ಕಳಿಗೆ ಗಣಿತ ಪಾಠ ಹೇಳಿಕೊಡುವ ಮೂಲಕ ಎಲ್ಲರ ಗಮನ ಸೆಳೆದರು.

ಇಬ್ಬೀಡು ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ಸಮಯದಲ್ಲಿ ಶಾಸಕರು ಮಕ್ಕಳಿಗೆ ಪಾಠ ಹೇಳಿಕೊಟ್ಟರು. ಮಕ್ಕಳಿಗೆ ಗಣಿತ ಪಾಠ ಮಾಡಿ ಶಿಕ್ಷಕರು ಹೇಳಿಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.