ಶಾಲಾ ಮಕ್ಕಳ ಮೇಲೆ ಕಲ್ಲು ಪ್ರಕರಣ : ಇಂದು ಮಕ್ಕಳಿಗೆ ಮಾತ್ರ ರಜೆ ಘೋಷಣೆ

ಬಾಗಲಕೋಟೆ ಜಿಲ್ಲೆಯ ಇಂಜಿನವಾರಿ ಗ್ರಾಮದಲ್ಲಿ ನಡೆದಿದ್ದ ಶಾಲಾ ಮಕ್ಕಳ ಮೇಲೆ ಕಲ್ಲು ಬೀಳುತ್ತಿದ್ದ ಇಂಜಿನವಾರಿ ಶಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಕ್ಕಳಿಗೆ ಮಾತ್ರ ಶಾಲೆ ರಜೆ ಘೋಷಣೆ ಮಾಡಿದ್ದಾರೆ ಶಿಕ್ಷಕರು.

ನಿರಂತರ ಕಲ್ಲು ಬೀಳುತ್ತಿದ್ದ ಹಿನ್ನೆಲೆಯಲ್ಲಿ ತಾಲೂಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚಚಿ೯ಸಿ ಮಕ್ಕಳಿಗೆ ಮಾತ್ರ ರಜೆ ನೀಡಲಾಗಿದೆ. ಎಂದಿನಂತೆ ಇಂದೂ ಸಹ ಶಾಲೆಗೆ ಶಿಕ್ಷಕರು ಹಾಜರಾಗಿದ್ದಾರೆ.

1 ರಿಂದ 5ನೇ ತರಗತಿವರೆಗೆ ನಡೆಯುತ್ತಿರೋ ಇಂಜಿನವಾರಿ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಕಲ್ಲು ಬೀಳುತ್ತಿರುವುದು ನಿನ್ನೆಯಷ್ಟೇ ವರದಿ ಮಾಡಲಾಗಿತ್ತು.  ಕಳೆದ ೧ ತಿಂಗಳಿಂದ ಶಾಲಾ ಮಕ್ಕಳ ಮೇಲೆ ಕಲ್ಲುಗಳು ಬೀಳುತ್ತಿದ್ದು, ಎಲ್ಲಿಂದ ಕಲ್ಲುಗಳು ಬೀಳುತ್ತಿವೆ ಅನ್ನೋದು ಮಾತ್ರ ತಿಳಿದು ಬಂದಿಲ್ಲ.

ಆದರೆ ಶಿಕ್ಷಕರಿಗೆ, ಮಕ್ಕಳಿಗೆ ಕಲ್ಲು ತಾಗಿ ಗಾಯಗಳಾಗಿರುವ ಹಾಗೂ ಬಿಳಿ ಬಣ್ಣ ಮಸಿ ಬಡಿದ ಕಲ್ಲುಗಳು ಶಾಲೆಯಲ್ಲಿ ಪತ್ತೆಯಾಗಿವೆ. ನಿನ್ನೆ ಆತಂಕಗೊಂಡು ಶಾಲಾ ಆವರಣದಲ್ಲಿ ಸೇರಿದ್ದ ಪಾಲಕರು, ಶಿಕ್ಷಣ ಇಲಾಖೆ, ಪೋಲಿಸ ಇಲಾಖೆ ಅಧಿಕಾರಿಗಳು ಭೇಟಿ ಮಾಡಿ ಗ್ರಾಮಸ್ಥರೊಂದಿಗೆ ಚಚೆ೯ ಮಾಡಿದ್ದಾರೆ.

ಪಾಲಕರ ಆತಂಕದ ಹಿನ್ನೆಲೆಯಲ್ಲಿ ಮಕ್ಕಳಿಗೆ ಮಾತ್ರ ಇಂದು ಶಾಲೆ ರಜೆ ಘೋಷಣೆ ಮಾಡಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.