ವಿವಾಹದ ಹೊಸ್ತಿಲಿಗೆ ಕಾಲಿಡುತ್ತಿರುವ ರ‌್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ : ಮೈಸೂರಿನಲ್ಲಿಂದು ಅದ್ದೂರಿ ನಿಶ್ಚಿತಾರ್ಥ

ಬಿಗ್ ಬಾಸ್ ಕನ್ನಡ ಸೀಸನ್ 6 ವಿನ್ನರ್ ರ‌್ಯಾಪರ್ ಚಂದನ್ ಶೆಟ್ಟಿ ಇಂದು ಮೈಸೂರಿನಲ್ಲಿ ಗೊಂಬೆ ನಿವೇದಿತಾ ಗೌಡ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಎಂಗೇಜ್‌ಮೆಂಟ್  ಗೆ ಸಲಕ ಸಿದ್ದತೆಗಳು ನಡೆದಿದ್ದು, ನಿಶ್ಚಿತಾರ್ಥಕ್ಕೆ ಸಜ್ಜಾಗಿ ನಿವೇದಿತಾಗೌಡ ಮನೆಯಿಂದ ಹೊರಟ ವಿಡಿಯೋ ವೈರಲ್ ಆಗಿದೆ.

ಖಾಸಗಿ ಹೋಟಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ತಿಳಿ ಹಸಿರು ಬಣ್ಣದ ಸೀರೆಯುಟ್ಟು ಕಂಗೊಳಿಸಿತ್ತಿರುವ ನಿವೇದಿತಾ ಹೊಟೆಲ್ ನತ್ತ ಹೊರಟಿದ್ದಾರೆ. ಯುವ ದಸರಾದಲ್ಲಿ ಚಂದನ್ ಶೆಟ್ಟಿ ನಿವೇದಿತಾಗೌಡಾ ಅವರಿಗೆ ಪ್ರಪೋಸ್ ಮಾಡಿದ್ದರು. ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಪ್ರಪೋಸ್ ಮಾಡಿದ ವರ್ತನೆ ಭಾರಿ ಸುದ್ದಿಯಾಗಿತ್ತು. ದಸರಾ ವೇದಿಕೆ ಮೇಲೆ ನೂರಾರು ಜನರ ಮುಂದೆ ನಿವೇದಿತ ಗೌಡ ಚಂದನ್ ಪ್ರಪೋಸ್ ಗೆ ಗ್ರೀನ್ ಸಿಗ್ನಲ್ ನೀಡಿದ್ದರು.

ರಿಂಗ್ ತೊಡಿಸಿ ಪ್ರಪೋಸ್ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಚಂದನ್ ಶೆಟ್ಟಿ ಇಂದು ನಿವೇದಿತಾರೊಂದಿಗೆ ವಿವಾಹದ ಹೊಸ್ತಿಲಿಗೆ ಕಾಲಿಡುತ್ತಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.