ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿಯಂತೆ ರೆಡಿಯಾದ ರಾಕಿಂಗ್ ಸ್ಟಾರ್ ಮಗಳ ಫೋಸ್ ನೋಡ್ರಿ ಅಣ್ತಮ್ಮಾ….

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಅವರ ಮಗಳು ಐರಾಳನ್ನು ಲಕ್ಷ್ಮಿಯಂತೆ ರೆಡಿ ಮಾಡಿ ಫೋಟೋ ಕ್ಲಿಕ್ಕಿಸಿದ್ದಾರೆ.

ಯಶ್ ಮಗಳು ಐರಾಗೆ ಹಬ್ಬದ ಪ್ರಯುಕ್ತ ಮುದ್ದು ಲಕ್ಷ್ಮಿಯಂತೆ ಲಂಗ, ಬ್ಲೌಸ್ ಉಡುಪನ್ನು ತೊಡಿಸಿದ್ದರು. ಜೊತೆಗೆ ಕೈಗೆ ಬಳೆ, ಸರ, ಕಾಲ್ಗೆಜ್ಜೆ, ಉಂಗುರ, ಸಿಂಧೂರವನ್ನು ಹಾಕಿ ಸಿಂಗಾರ ಮಾಡಿದ್ದರು. ನಂತರ ಸೋಫಾ ಮೇಲೆ ಕೂರಿಸಿ ಫೋಟೋ ತೆಗೆಸಿದ್ದಾರೆ.

ಫೋಟೋದಲ್ಲಿ ಐರಾ ಮುದ್ದಾಗಿ ನಕ್ಕಿದ್ದಾಳೆ. ಮತ್ತೊಂದು ಫೋಟೋದಲ್ಲಿ ಅದೇ ಲಂಗ, ಬ್ಲೌಸ್‍ಗೆ ದಾವಣಿಯನ್ನು ತೊಡಿಸಿದ್ದಾರೆ. ಮಗಳ ಫೋಟೋವನ್ನು ರಾಧಿಕಾ ಅವರು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ‘ನಮ್ಮ ಪುಟ್ಟ ಲಕ್ಷ್ಮಿ’ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.

ಶುಕ್ರವಾರ ಯಶ್, ರಾಧಿಕಾ ಮಗಳ ಜೊತೆಗಿರುವ ಫೋಟೋ ಹಾಕಿ, “ನಮ್ಮ ಮನೆಯ ಪುಟ್ಟ ಲಕ್ಷ್ಮಿ ಕಡೆಯಿಂದ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಸಹಜ ಸ್ಥಿತಿಯತ್ತ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ” ಎಂದು ಹಬ್ಬಕ್ಕೆ ಶುಭ ಕೋರಿದ್ದರು.

https://www.instagram.com/iamradhikapandit/?utm_source=ig_embed

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.