ಲಿಂಗಾಯತ ಒಳಪಂಗಡಗಳಿಗೆ ಸೂಕ್ತ ಸ್ಥಾನಮಾನ ಕೋರಿ ಸುಪ್ರೀಂಗೆ ಮನವಿ – ಜಯ ಮೃತ್ಯುಂಜಯ ಸ್ವಾಮೀಜಿ

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರ ಈಗಾಗಲೇ ಸುಪ್ರೀಂಕೋರ್ಟ್ ಗೆ ಮೇಲ್ಮನವಿಗಾಗಿ ಕೇಂದ್ರಕ್ಕೆ ಎಸ್ ಎಂ ಜಾಮದಾರ ಮನವಿ‌ ಮಾಡ್ತಿದ್ದಾರೆ. ಎಸ್ ಎಂ ಜಾಮದಾರ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಲಿಂಗಾಯತದ ಎಲ್ಲ ಒಳಪಂಗಡದವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಲಿ ಅನ್ನೋದೆ ಮೂಲ ಉದ್ದೇಶ ಎಂದು ಬಾಗಲಕೋಟೆಯಲ್ಲಿ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಲಿಂಗಾಯತ ಒಳಪಂಗಡಗಳಿಗೆ ಯಾವುದೇ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಮುಂದೆ ಮಕ್ಕಳಿಗಾದ್ರೂ ಅಲ್ಪಸಂಖ್ಯಾತ ಸ್ಥಾನಮಾನ ಅನುಕೂಲವಾಗಲಿ ಅಂತ ಮಾಡಿದ ಹೋರಾಟವಿದು. ಒಂದು ವಾರದಲ್ಲಿ ಜಾಮದಾರ ಸುಪ್ರೀಂಕೋಟರ್ಟ್ ಗೆ ಮನವಿ ಸಲ್ಲಿಸಲಿದ್ದಾರೆ ಎಂದರು.

ಹಿಂದೂ ಕೋಟಾದಡಿ ಸಚಿವ ಸ್ಥಾನ ಸಿಗುತ್ತೆ, ಪಂಚಮಸಾಲಿ ಕೋಟಾದಲ್ಲಿ ಸಿಸಿಪಾಟೀಲ್ ಗೆ ಸಿಕ್ಕಿದೆ- ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸ್ವಾಮೀಜಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಪಂಚಮ ಸಾಲಿ ಸಮಯದಾಯದಲ್ಲಿ ೯ ಸಾರಿ ಗೆದ್ದ ಉಮೇಶ ಕತ್ತಿಗೂ ಸಚಿವ ಸ್ಥಾನಮಾನ ಸಿಕ್ಕಿಲ್ಲ. ನಮ್ಮ ಜಿಲ್ಲೆಯ ನಿರಾಣಿ ಮತ್ತು ಯತ್ನಾಳ ಅವರೆಲ್ಲಾ ಯಡಿಯೂರಪ್ಪನವರ ಮುಖ ನೋಡಿ ಸುಮ್ಮನಿದ್ದಾರೆ.

ಸಚಿವ ಸ್ಥಾನ ಮುಂದೆ ಸಿಗೋ ಭರವಸೆಯಿದೆ. ನಮ್ಮ ಬೇಡಿಕೆ ಮಾತ್ರ ಇದ್ದೇ ಇದೆ‌. ಜಾತಿಗಿಂತಲೂ ಉತ್ತರ ಕನಾ೯ಟಕದಲ್ಲಿ ಹಿರಿಯ ನಾಯಕರನ್ನ ಕೈಬಿಟ್ಟಿದ್ದು ಎಲ್ಲೋ ಒಂದು ಕಡೆ ಅಸಮಾಧಾನ ಇದೆ. ಈಗ ಪ್ರವಾಹ ಇರೋದ್ರಿಂದ ಇದೆಲ್ಲಾ ಮುಗಿದ ಬಳಿಕ ಮತ್ತೇ ಮನವಿ ಮಾಡ್ತೀವಿ. ಎರಡು ಪಂಗಡ ಸೇರಿದಂತೆ ಕೆಲವು ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ‌‌. ಮುಂದಿನ ಸಚಿವ ಸಂಪುಟದೊಳಗಾಗಿ ನಿರಾಣಿ, ಯತ್ನಾಳ, ಕತ್ತಿ, ಉದಾಸಿಯಂತವರಿಗೆ ಸಚಿವ ಸ್ಥಾನ ನೀಡಬೇಕು. ವಾಲ್ಮೀಕಿ ಸಮುದಾಯಕ್ಕೂ ನೀಡಿಲ್ಲ. ಹೀಗಾಗಿ ಯಾವುದೇ ಸಮುದಾಯಕ್ಕೂ ನಮ್ಮ ಬೆಂಬಲ ಇರುತ್ತೇ.

ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ರಮೇಶ್ ಜಾರಕಿಹೊಳಿ ಏಕವಚನದಲ್ಲಿ ವಾಗ್ದಾಳಿ ವಿಚಾರಕ್ಕೂ ಸ್ವಾಮಿಜೀ ಪ್ರತಿಕ್ರಿಯಿಸಿದ್ದಾರೆ.

ಅದು ಅವರ ವೈಯಕ್ತಿಕ ಅಭಿಪ್ರಾಯ. ಅದಕ್ಕೆ ನಾನೇನು ಉತ್ತರ ಕೊಡಲಿ. ಸಮಾಜದ ವಿಚಾರ ಬಂದಾಗ ಮಾತ್ರ ಮಾತನಾಡ್ತೀನಿ. ಬೆಳಗಾವಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ರಿ ಅಂತ ಮನವಿ ಮಾಡ್ತೀನಿ. ಲಕ್ಷ್ಮಿ ಹೆಬ್ಬಾಳಕರ ಒಳ್ಳೆಯ ಕೆಲ್ಸ ವಿಚಾರವಾಗಿ ಯಾವಾಗಲೂ ನಮ್ಮ ಬೆಂಬಲವಿದೆ. ವೈಯಕ್ತಿಕ ಭಿನ್ನಾಭಿಪ್ರಾಯ ಇದ್ರೆ ಅವರು ಬಗೆಹರಿಸಿಕೊಳ್ಳಬೇಕು. ಒಳ್ಳೆ ಕೆಲಸಕ್ಕೆ ಸಮಾಜ ಬೆಂಬಲವಿದೆ.

ಬಿಎಸ್ವೈ ಸಿಎಂ ಪಟ್ಟದಿಂದ ಕೆಳಗಿಳಿಸಲು ಬಿಜೆಪಿಯೊಳಗೆ ಗುಂಪುಗಾರಿಕೆ ವಿಚಾರವಾಘಿ ಮಾತನಾಡಿದ ಅವರು,  ಯಾರು ಬಿಎಸ್ವೈ ಸಿಎಂ ಪಟ್ಟದಿಂದ ಕೆಳಗಿಳಿಸೋ ಪ್ರಯತ್ನ ಯಾರು ಮಾಡಬಾರದು. ಆ ಪ್ರಯತ್ನಕ್ಕೆ ಎಂದು ಅವಕಾಶ ಕೊಡಬಾರದು. ವ್ಯಕ್ತಿ ಬೆಳವಣಿಗೆ ಕಾರಣಕ್ಕೆ ತೊಂದರೆ ಕೊಡಬಾರದು. ಯಾರೇ ಮುಖ್ಯಮಂತ್ರಿ ಆಗಿರಲಿ. ನಿಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಿ. ಈ ಸಂದರ್ಭದಲ್ಲಿ ಬಿಎಸ್ವೈ ತೆಗೆಯುವಂತ ಯಾವುದೇ ಚಟುವಟಿಕೆಗೆ ಆಸ್ಪದ ಕೊಡಬಾರದು. ನಾಡಿನ ಜನ ಅವಕಾಶ ಕೊಟ್ಟಿದ್ದಾರೆ.

ಅವಕಾಶ ಪೂರ್ಣಗೊಳಿಸೋದು ಲಿಂಗಾಯತ ಬೇಡಿಕೆ ಅಲ್ಲ,ಇಡೀ ಕನ್ನಡಿಗರ ಬೇಡಿಕೆ ಎಂದು ಸುದ್ದಿಗೋಷ್ಠಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.